Facebook Twitter Instagram
    Wednesday, July 22
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಜೈಲು ಇಲಾಖೆಯ ಆಸ್ತಿಗೆ ಖದೀಮರ ಕಣ್ಣು: ಖಾಸಗಿ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲು
    ಇತ್ತೀಚಿನ ಸುದ್ದಿ

    ಜೈಲು ಇಲಾಖೆಯ ಆಸ್ತಿಗೆ ಖದೀಮರ ಕಣ್ಣು: ಖಾಸಗಿ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲು

    May 29, 2026
    Share

    ಬೆಂಗಳೂರು: ಸುಮಾರು 40ರಿಂದ 50 ಕೋಟಿ ರೂ ಮೌಲ್ಯದ ಕಾರಾಗೃಹ ಇಲಾಖೆಯ ಕಟ್ಟಡದ ಮೇಲೆ ಖದೀಮರು ಕಣ್ಣು ಹಾಕಿದ್ದಾರೆ. ಸ್ವತ್ತು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಅಧೀನದಲ್ಲಿರುವ ಗಾಂಧಿನಗರದ 2ನೇ ಅಡ್ಡರಸ್ತೆಯಲ್ಲಿರುವ ಮೈಸೂರು ಡಿಸ್ಮಾರ್ಜ್ ಪ್ರಿಸನರ್ಸ್ ಏಡ್ ಸೊಸೈಟಿಯ ಆಸ್ತಿಯನ್ನು ಕಬ್ಜ ಮಾಡಲಾಗಿದೆ. ಈ ಬಗ್ಗೆ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

    ಖಾಸಗಿ ವ್ಯಕ್ತಿಗಳ ವಿರುದ್ಧ ದೂರು

    ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಗೆ ಸೇರಿದ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಾದ ಖಲಿಂ ಹಾಗೂ ಅನಿಲ್ ಎಂಬುವವರು ಕಳೆದ ಒಂದು ವರ್ಷದಿಂದಲೂ ಬಳಕೆ ಮಾಡುತ್ತಿದ್ದರು. ಶ್ರೀಶೈಲ್​​ ಎಸ್​ ಮೇಟಿ ಎಂಬುವವರು ಇಬ್ಬರ ವಿರುದ್ಧ ದೂರು ನೀಡಿದ್ದಾರೆ.

    ಕಳೆದ ಒಂದು ವರ್ಷದಿಂದಲೂ ಕಾರಾಗೃಹ ಇಲಾಖೆಯ ಆಸ್ತಿಯನ್ನು ಅನುಮತಿ ಪಡೆಯದೇ ಕಟ್ಟಡದ ಒಂದನೇ ಮಹಡಿಯನ್ನು ಅನಿಲ್ ಅತಿಕ್ರಮಣ ಮಾಡಿದ್ದು, ಖಲಿಂ ಹಳೆಯ ಸಾಮಗ್ರಿಗಳನ್ನು ಕಾರಾಗೃಹ ಇಲಾಖೆಗೆ ಸೇರಿದ ಆಸ್ತಿಯಲ್ಲಿ ತಂದು ಹಾಕಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಇಬ್ಬರಿಗೂ ನೋಟಿಸ್​​ ನೀಡಿರುವ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ.

    ಜಾಗ ಅತಿಕ್ರಮಣವಾಗಿದ್ದು ಗೊತ್ತಾಗಿದ್ದು ಹೇಗೆ?

    ಜೈಲಿನಲ್ಲಿ ತಯಾರಾಗುವ ಬೇಕರಿ ತಿನಿಸುಗಳು ಹಾಗೂ ಬಟ್ಟೆ ವ್ಯಾಪಾರ ಮಳಿಗೆ ತೆರೆಯಲು ಕಾರಾಗೃಹ ಇಲಾಖೆ ಸಜ್ಜಾಗಿತ್ತು. ಹೀಗಾಗಿ ಕಟ್ಟಡ ಹಳೆಯದಾದ ಹಿನ್ನೆಲೆ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಿ ಜೈಲು ಉತ್ಪನ್ನಗಳ ಮಾರಾಟ ಮಳಿಗೆ ತೆರೆಯಲು ಮುಂದಾಗಿದೆ. ಈ ವೇಳೆ ಅತಿಕ್ರಮಣ ಆಗಿರುವುದು ಬೆಳಕಿಗೆ ಬಂದಿದೆ.

    ಇನ್ನು ಮೈಸೂರು ಮಹಾರಾಜರು ಕಾರಾಗೃಹ ಇಲಾಖೆಗೆ ಹತ್ತು ಸಾವಿರ ಚದರ ಅಡಿ ಜಾಗವನ್ನು ದಾನವಾಗಿ ಕೊಟ್ಟಿದ್ದರು. ಇಂದಿನ ಮಾರುಕಟ್ಟೆಯ ಪ್ರಕಾರ ಜಾಗದ ಬೆಲೆ 40ರಿಂದ 50 ಕೋಟಿ ರೂ ಮೌಲ್ಯ ಎನ್ನಲಾಗುತ್ತಿದೆ.

    Post Views: 100

    karnataka PoliceInvestigation

    Related Posts

    CCB ಪೊಲೀಸರಿಂದ ಆಪರೇಷನ್ ರೈಸ್ ಕಾರ್ಯಾಚರಣೆ: 15.29 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ!

    July 21, 2026

    ಮ್ಯಾಟ್ರಿಮೋನಿ ಆ್ಯಪ್‌ ಮೂಲಕ ಉದ್ಯಮಿಗೆ ₹87.22 ಲಕ್ಷ ವಂಚಿಸಿದ ಮಹಿಳೆ!!

    July 21, 2026

    ಬೆಳ್ತಂಗಡಿ:16 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ- ಗರ್ಭಿಣಿಯಾದ ಪ್ರಕರಣದಲ್ಲಿ ಆರೋಪಿಯ ಬಂಧನ

    July 21, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    CCB ಪೊಲೀಸರಿಂದ ಆಪರೇಷನ್ ರೈಸ್ ಕಾರ್ಯಾಚರಣೆ: 15.29 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ!

    July 21, 2026

    ಮ್ಯಾಟ್ರಿಮೋನಿ ಆ್ಯಪ್‌ ಮೂಲಕ ಉದ್ಯಮಿಗೆ ₹87.22 ಲಕ್ಷ ವಂಚಿಸಿದ ಮಹಿಳೆ!!

    July 21, 2026

    ಬೆಳ್ತಂಗಡಿ:16 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ- ಗರ್ಭಿಣಿಯಾದ ಪ್ರಕರಣದಲ್ಲಿ ಆರೋಪಿಯ ಬಂಧನ

    July 21, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.