ಮಂಗಳೂರು: ಮಂಗಳೂರು ಪಾಲಿಕೆಯ 23ನೇ ಅವಧಿಯ ಮೇಯರ್ – ಉಪ ಮೆಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ನಾಳೆ ನಡೆಯಲಿದ್ದು, ಈ ಪಟ್ಟ ಯಾರಿಗೆ ಸಿಗಲಿದೆ ಎಂಬುದರ ಕುರಿತು ಕುತೂಹಲ ಮೂಡಿಸಿದೆ.
ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಮೇಯರ್ ಆಯ್ಕೆ ಪ್ರಮುಖವಾದದ್ದು. ರಾಜಕೀಯ ಅನುಭವ, ಮಹಾ ನಗರ ಪಾಲಿಕೆಯ ಮೇಲೆ ಪೂರ್ಣ ಹಿಡಿತ, ಚುನಾವಣೆ ಸಂದರ್ಭದಲ್ಲಿ ತನು ಮನ ಧನದೊಂದಿಗೆ ಓಡಾಟ ನಡೆಸುವ ಅಭ್ಯರ್ಥಿಯನ್ನು ಮೇಯರ್ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅನುಭವ, ಸಾಮರ್ಥ್ಯದ ಜತೆ ವಾರ್ಡ್, ಜಾತಿ ಲೆಕ್ಕಾಚಾರ ಕೂಡಾ ತುಲನೆಯಾಗುತ್ತಿದೆ. ನಾಳೆ ಬೆಳಗ್ಗೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲೇ ಅದನ್ನು ಘೋಷಿಸಲಾಗುತ್ತದೆ. ಈ ಬಾರಿ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮತ್ತು ಉಪ ಮೇಯರ್ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿದೆ.