Facebook Twitter Instagram
    Thursday, July 9
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ವಿಟ್ಲ: ಯುವಕರಿಗೆ ಅವಾಚ್ಯ ನಿಂದನೆ, ಹಲ್ಲೆ ಹಾಗೂ ಜೀವ ಬೆದರಿಕೆ ಆರೋಪ: ವಿವೇಕ್ ಶೆಟ್ಟಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು
    ಇತ್ತೀಚಿನ ಸುದ್ದಿ

    ವಿಟ್ಲ: ಯುವಕರಿಗೆ ಅವಾಚ್ಯ ನಿಂದನೆ, ಹಲ್ಲೆ ಹಾಗೂ ಜೀವ ಬೆದರಿಕೆ ಆರೋಪ: ವಿವೇಕ್ ಶೆಟ್ಟಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

    July 9, 2026
    Share

    ವಿಟ್ಲ: ಮೋಟಾರ್‌ಸೈಕಲ್ ಕೆಟ್ಟು ರಸ್ತೆ ಬದಿಯಲ್ಲಿ ನಿಂತಿದ್ದ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಮೂವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪೇಂಟಿಂಗ್ ಕೆಲಸ ಮಾಡುತ್ತಿರುವ ಮಹಮ್ಮದ್ ನಸೀಫ್ (22) ಅವರು ನೀಡಿದ ದೂರಿನ ಪ್ರಕಾರ, ಜುಲೈ 7ರಂದು ಸಂಜೆ ಕೊಳಂಬೆಯಲ್ಲಿರುವ ತಮ್ಮ ಅಜ್ಜಿ ಮನೆಯಿಂದ ಮಾಣಿಯಲ್ಲಿರುವ ಬಾಡಿಗೆ ಮನೆಗೆ ಮೋಟಾರ್‌ಸೈಕಲ್‌ನಲ್ಲಿ ತೆರಳುತ್ತಿದ್ದ ವೇಳೆ ಅನಂತಾಡಿ ಗ್ರಾಮದ ಬಾಬನಕಟ್ಟೆ ಸಮೀಪ ವಾಹನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು.

    ಈ ವೇಳೆ ಸ್ನೇಹಿತ ಮಹಮ್ಮದ್ ಜಾಹೀದ್ ಡಿ ಅವರು ಸ್ಕೂಟರ್‌ನಲ್ಲಿ ಅಲ್ಲಿಗೆ ಬಂದಿದ್ದರು. ಆಗ ಆಟೋರಿಕ್ಷಾದಲ್ಲಿ ಬಂದ ವಿವೇಕ ಶೆಟ್ಟಿ, ಉಮೇಶ್ ಹಾಗೂ ಶಿವರಾಮ ಶೆಟ್ಟಿ ಎಂಬವರು ಆಟೋರಿಕ್ಷಾ ನಿಲ್ಲಿಸಿ ‘ನೀವು ಏಕೆ ಇಲ್ಲಿ ನಿಂತಿರುವುದು, ನೀವು ಬ್ಯಾರಿಗಳು ನಿಮಗೇನು ಕೆಲಸ ಇಲ್ಲಿ’ ಎಂದು ಹೇಳಿದಾಗ ದೂರುದಾರರು ಮೋಟರ್ ಸೈಕಲ್ ಹಾಳಾಗಿದ್ದು ಅದಕ್ಕೆ ರಸ್ತೆಯಲ್ಲಿ ನಿಲ್ಲಿಸಿರುವುದಾಗಿ ತಿಳಿಸಿದ್ದು, ನಂತರ ಆರೋಪಿತರು ಬ್ಯಾರಿ ಬೇವರ್ಸಿಗಳು ನಡು ರಸ್ತೆಯಿಂದ ಹೋಗಿ ಎಂದಾಗ ದೂರುದಾರರು ಮತ್ತು ಆತನ ಸ್ನೇಹಿತ ಅವರ ಮೋಟರ್ ಸೈಕಲ್ ನಲ್ಲಿ ಹೋಗಲು ಪ್ರಾರಂಭಿಸಿದಾಗ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಳಿಕ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

    ಹಲ್ಲೆಯಲ್ಲಿ ಮಹಮ್ಮದ್ ನಸೀಫ್ ಅವರ ಭುಜ, ಕೆನ್ನೆ ಹಾಗೂ ಹೊಟ್ಟೆಗೆ ಗಾಯಗಳಾಗಿದ್ದು, ಮಧ್ಯ ಪ್ರವೇಶಿಸಿದ ಮಹಮ್ಮದ್ ಜಾಹೀದ್ ಅವರ ಕುತ್ತಿಗೆಗೆ ಹೊಡೆದು ಶರ್ಟ್ ಎಳೆದು ಹರಿದಿರುವುದಾಗಿಯೂ, ಮತ್ತೆ ಈ ಭಾಗಕ್ಕೆ ಬಂದರೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಘಟನೆಯ ಬಳಿಕ ಸಾರ್ವಜನಿಕರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಆರೋಪಿಗಳು ಆಟೋರಿಕ್ಷಾದಲ್ಲಿ ಪರಾರಿಯಾಗಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ವಿವೇಕ ಶೆಟ್ಟಿ, ಉಮೇಶ್ ಹಾಗೂ ಶಿವರಾಮ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಈ ಸಂಬಂಧ 08-07-2026 ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ Crime No. 152/2026 ರಂತೆ ಎಫ್‌ಐಆರ್ ದಾಖಲಾಗಿದೆ.ಭಾರತೀಯ ನ್ಯಾಯ ಸಂಹಿತೆ 2023 ರ ಸೆಕ್ಷನ್ 126(2), 115(2), 352, 351(2) r/w 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    Post Views: 8

    Related Posts

    ಬೆಳ್ತಂಗಡಿ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ..!! ಆರು ಮಂದಿ ಪಾರು

    July 9, 2026

    ಉಡುಪಿ: ಬ್ಲ್ಯಾಕ್‌ಮೇಲ್ ಪ್ರಕರಣ- ವಂಚಕಿ ಝೀನತ್ ವಿರುದ್ಧ ಮತ್ತೊಂದು FIR..!!

    July 9, 2026

    ಬಂಟ್ವಾಳ ಟೋಲ್ ಗೇಟ್‌ನಲ್ಲಿ ಬ್ಯಾರಿಯರ್ ಮುರಿದು ಕಾರು ಓಡಿಸಿದ ಚಾಲಕ- ಪ್ರಕರಣ ದಾಖಲು

    July 9, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಬೆಳ್ತಂಗಡಿ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ..!! ಆರು ಮಂದಿ ಪಾರು

    July 9, 2026

    ವಿಟ್ಲ: ಯುವಕರಿಗೆ ಅವಾಚ್ಯ ನಿಂದನೆ, ಹಲ್ಲೆ ಹಾಗೂ ಜೀವ ಬೆದರಿಕೆ ಆರೋಪ: ವಿವೇಕ್ ಶೆಟ್ಟಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

    July 9, 2026

    ಉಡುಪಿ: ಬ್ಲ್ಯಾಕ್‌ಮೇಲ್ ಪ್ರಕರಣ- ವಂಚಕಿ ಝೀನತ್ ವಿರುದ್ಧ ಮತ್ತೊಂದು FIR..!!

    July 9, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.