ಉಡುಪಿ : ಮಣಿಪಾಲದ ಪಬ್ ಹಾಗೂ ಬಾರ್ ಗಳ ಮೇಲೆ ಮಧ್ಯರಾತ್ರಿ ಪೊಲೀಸರು ದಾಳಿ ನಡೆಸಿದ್ದಾರೆ.
ಮಣಿಪಾಲದ ಈಶ್ವರನಗರ, ಟೈಗರ್ ಸರ್ಕಲ್ ಸಮೀಪದ ಬಾರ್ ಗಳಿಗೆ ದಾಳಿ ನಡೆಸಿ, ನಿಯಮ ಉಲ್ಲಂಘನೆ ಮಾಡಿರುವ ಪಬ್ ಹಾಗೂ ಬಾರ್ ಮಾಲಕರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ವೇಳೆ ಪಬ್ ಹಾಗೂ ಬಾರ್ ಗಳಲ್ಲಿ ಅಪ್ರಾಪ್ತರಿಗೆ ಅನುಮತಿ ನೀಡಿರುವುದು ಕಂಡು ಬಂದಿದ್ದು, ಅಪ್ರಾಪ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬಾರ್ ನಲ್ಲಿ ಇದ್ದರು.ಏಳೆಂಟು ಪಬ್, ಬಾರ್ ಗಳಿಗೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಉಡುಪಿ ಜಿಲ್ಲಾ ಎಸ್ ಪಿ ಹರಿರಾಮ್ ಶಂಕರ್ ಅವರ ನಿರ್ದೇಶನದಂತೆ ಮಣಿಪಾಲ ಠಾಣ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ.
ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




