Facebook Twitter Instagram
    Thursday, August 6
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಶೇರು ಮಾರುಕಟ್ಟೆ ಲಾಭದ ಆಸೆ: ಮಂಗಳೂರಿನ ಮಹಿಳೆಗೆ ₹10.50 ಲಕ್ಷ ಆನ್‌ಲೈನ್ ವಂಚನೆ
    ಇತ್ತೀಚಿನ ಸುದ್ದಿ

    ಶೇರು ಮಾರುಕಟ್ಟೆ ಲಾಭದ ಆಸೆ: ಮಂಗಳೂರಿನ ಮಹಿಳೆಗೆ ₹10.50 ಲಕ್ಷ ಆನ್‌ಲೈನ್ ವಂಚನೆ

    August 6, 2026
    Share

    ಮಂಗಳೂರು : ಶೇರು ಮಾರುಕಟ್ಟೆಯಲ್ಲಿ ಭಾರಿ ಲಾಭಾಂಶ  ಕೊಡುವುದಾಗಿ ವಾಟ್ಸಾಪ್‌ನಲ್ಲಿ ಜಾಹೀರಾತು ನೀಡಿ, ಆಪ್ ಡೌನ್‌ಲೋಡ್ ಮಾಡಿಸಿ 55 ವರ್ಷದ ಮಹಿಳೆಯೊಬ್ಬರಿಗೆ ಬರೋಬ್ಬರಿ ₹10,50,000 (ರೂ. 10.50 ಲಕ್ಷ) ಆನ್‌ಲೈನ್ ವಂಚನೆ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.

    ದಿನಾಂಕ 29-06-2026ರಂದು ಸಂತ್ರಸ್ತ ಮಹಿಳೆಯು ತಮ್ಮ ಮೊಬೈಲ್‌ನಲ್ಲಿ ವಾಟ್ಸಾಪ್ ಬಳಸುತ್ತಿದ್ದಾಗ ‘Private Equity Fund Investment Block Deal’ ಎಂಬ ಹೂಡಿಕೆ ಕುರಿತ ಜಾಹೀರಾತು ಕಂಡಿದೆ. ಅದರಲ್ಲಿ ನೀಡಲಾಗಿದ್ದ ಲಿಂಕ್ ಕ್ಲಿಕ್ ಮಾಡಿದಾಗ, ‘B.R.NOVA’ ಎಂಬ ಆ್ಯಪ್ ಡೌನ್‌ಲೋಡ್ ಮಾಡಲು ಸೂಚಿಸಲಾಗಿದೆ. ಬಳಿಕ ‘ಹಾರ್ದಿಕ್ ಜೋಶಿ’ (ಮೊಬೈಲ್ ಸಂಖ್ಯೆ: 8763273640) ಎಂಬ ವ್ಯಕ್ತಿ ಸಂತ್ರಸ್ತೆಯನ್ನು ಸಂಪರ್ಕಿಸಿ, ತಮ್ಮ ಬ್ಲಾಕ್ ಡೀಲ್ ಹೂಡಿಕೆಯು ‘ಸೆಬಿ’ ನೋಂದಾಯಿತವಾಗಿದ್ದು, ಹಣ ತೊಡಗಿಸಿದರೆ ಹೆಚ್ಚಿನ ಲಾಭ ಬರುವುದಾಗಿ ನಂಬಿಸಿದ್ದಾನೆ.

    ಅಲ್ಲದೆ, ‘Investment Plan VIP1’ ಎಂಬ ವಾಟ್ಸಾಪ್ ಗ್ರೂಪ್ ರಚಿಸಿ ಆಪ್ ಮೂಲಕ ಚಾಟ್ ಮಾಡುತ್ತಾ ಸಂತ್ರಸ್ತೆಯ ವಿಶ್ವಾಸ ಗಳಿಸಿದ್ದಾನೆ. ವಂಚಕರ ಮಾತು ನಂಬಿದ ಮಹಿಳೆ, ಜುಲೈ 22, 2026ರವರೆಗೆ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹10,50,000 ವರ್ಗಾಯಿಸಿದ್ದಾರೆ.

    ಬಳಿಕ ಹೂಡಿಕೆ ಮಾಡಿದ ಹಣ ಹಾಗೂ ಬಂದ ಲಾಭವನ್ನು ಹಿಂಪಡೆಯಲು ಯತ್ನಿಸಿದಾಗ, ವಂಚಕರು “ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಬೇಕು ಹಾಗೂ ತೆರಿಗೆ/ಇತರ ಶುಲ್ಕ ಪಾವತಿಸಬೇಕು” ಎಂದು ಒತ್ತಾಯಿಸಿದ್ದಾರೆ. ಇತ್ತ ಹಣವಿಲ್ಲದೆ ಸ್ವಲ್ಪ ದಿನ ಕಾದ ಮಹಿಳೆ, ಕೊನೆಗೆ ಆಗಸ್ಟ್ 3, 2026ರಂದು ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ತೆರಳಿ ಪರಿಶೀಲಿಸಿದಾಗ ತಾವು ಆನ್‌ಲೈನ್ ವಂಚನೆಗೆ ಒಳಗಾಗಿರುವುದು ದೃಢಪಟ್ಟಿದೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

    Post Views: 1

    Related Posts

    ಬೆಳ್ತಂಗಡಿ: ತಲೆಮರೆಸಿಕೊಂಡಿದ್ದ ದರೋಡೆ ಆರೋಪಿ ಬಂಧನ!!

    August 6, 2026

    ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಮೋಸ್ಟ್ ವಾಂಟೆಡ್ ಉಮರ್ ಫಾರೂಕ್ ನನ್ನ ಅರೆಸ್ಟ್ ಮಾಡಿದ NIA

    August 6, 2026

    ಮಂಗಳೂರು: ವಾಲಿಬಾಲ್ ಆಟ ಆಡುತ್ತಿದ್ದ ವೇಳೆ ಬಾಲಕ ಹೃದಯಾಘಾತದಿಂದ ಮೃತ್ಯು..!

    August 6, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಶೇರು ಮಾರುಕಟ್ಟೆ ಲಾಭದ ಆಸೆ: ಮಂಗಳೂರಿನ ಮಹಿಳೆಗೆ ₹10.50 ಲಕ್ಷ ಆನ್‌ಲೈನ್ ವಂಚನೆ

    August 6, 2026

    ಬೆಳ್ತಂಗಡಿ: ತಲೆಮರೆಸಿಕೊಂಡಿದ್ದ ದರೋಡೆ ಆರೋಪಿ ಬಂಧನ!!

    August 6, 2026

    ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಮೋಸ್ಟ್ ವಾಂಟೆಡ್ ಉಮರ್ ಫಾರೂಕ್ ನನ್ನ ಅರೆಸ್ಟ್ ಮಾಡಿದ NIA

    August 6, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.