ಮಂಗಳೂರು: ಹಲವಾರು ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ದಕ್ಷಿಣ ಪೊಲೀಸರು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಅರೇನಹಳ್ಳಿ ಪಿರಿಯಾಪಟ್ಟಣದ ಅಸ್ಲಾಂ ಪಾಶ (36 ವರ್ಷ) ಎಂಬವನ ಮೇಲೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಪಾಂಡೇಶ್ವರದಲ್ಲಿ ಅ ಕ್ರ ನಂ. 300/1997 ರಲ್ಲಿ ಪ್ರಕರಣ ದ 379.411 ಐಪಿಸಿ ಅಂಬಾಸಿಡರ್ 3 ಕಾರು ಕಳವು ಪ್ರಕರಣ ದಾಖಲಾಗಿದ್ದು,ಸದರಿ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೆ ಇರುವ ಕಾರಣ ಪ್ರಕರಣವನ್ನ 2015 ರಲ್ಲಿ LPC ಮಾಡಲಾಗಿತ್ತು.
ಆರೋಪಿಯು ಪೊಲೀಸರ ಕೈಗೆ ಸಿಗದೇ ಸುಮಾರು 20 ವರ್ಷ ತಲೆಮರಿಸಿಕೊಂಡಿದ್ದು ಆತನ ಮೇಲೆ ನ್ಯಾಯಾಲಯವು ದಸ್ತಗಿರಿ LPC ವಾರೆಂಟ್ ಹೊರಡಿಸಲಾಗಿ ಆರೋಪಿಯನ್ನು ಪೊಲೀಸ್ ನಿರೀಕ್ಷಕರ ಮಾರ್ಗದರ್ಶನದಂತೆ ಸೆ.12 ರಂದು ಪತ್ತೆಮಾಡಿ ಹೆಡ್ ಕಾನ್ಸ್ಟೇಬಲ್ ಪುಟ್ಟರಾಮ್ ಹಾಗೂ ಪಿ.ಸಿ ರವಿಕುಮಾರ್ ಎಂಬುವರು ಆರೋಪಿಯನ್ನ ಸೋಮವಾರ ಪಿರಿಯಾಪಟ್ಟಣದಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿಯ ಮೇಲೆ ಹುಣಸೂರು, ಪಿರಿಯಾಪಟ್ಟಣ, ಬೆಟ್ಟದಪುರ, ಉದಯಪುರ, ಭದ್ರಾವತಿ ಠಾಣೆ, ಮಂಡ್ಯ ಮೈಸೂರು ನಗರ, ಬೆಂಗಳೂರು ನಗರ ಹೀಗೆ ಹಲವಾರು ಠಾಣೆಗಳಲ್ಲಿ ಕಳವು ಪ್ರಕರಣಗಳು ದಾಖಲಾಗಿರುತ್ತವೆ.
ಆರೋಪಿಯು ಮನೆ ಮುಂದೆ ನಿಲ್ಲಿಸಿದ್ದ ಕಾರುಗಳನ್ನ ಕಳವು ಮಾಡಿ ಅದರ ಚೇಸ್ ನಂಬರನ್ನು ಜಜ್ಜಿ ಕಾರಿನ ಬಣ್ಣ ಹಾಗೂ ನಂಬರ್ ಪ್ಲೇಟ್ ಅನ್ನು ಬದಲಾಯಿಸಿ ಕಡಿಮೆ ಬೆಲೆಗೆ ಬೆಂಗಳೂರಿಗೆ ಮಾರಾಟ ಮಾಡುವುದರಲ್ಲಿ ಚಾಲಾಕಿತನವನ್ನು ಹೊಂದಿರುವನಾಗಿದ್ದಾನೆ.