Facebook Twitter Instagram
    Monday, August 10
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಸಿನಿಮಾ»ಶುರುವಾಗ್ತಿದೆ ಕೂಡು ಕುಟುಂಬದ ಹೊಸ ಕಥೆ “ಆನಂದ ನಿಲಯ”…ಇದೇ ಆಗಸ್ಟ್ 10 ರಿಂದ ಪ್ರತಿದಿನ ರಾತ್ರಿ 7 ಗಂಟೆಗೆ…!
    ಸಿನಿಮಾ

    ಶುರುವಾಗ್ತಿದೆ ಕೂಡು ಕುಟುಂಬದ ಹೊಸ ಕಥೆ “ಆನಂದ ನಿಲಯ”…ಇದೇ ಆಗಸ್ಟ್ 10 ರಿಂದ ಪ್ರತಿದಿನ ರಾತ್ರಿ 7 ಗಂಟೆಗೆ…!

    August 10, 2026
    Share

    ಕನ್ನಡ ಕಿರುತೆರೆ ವೀಕ್ಷಕರಿಗೆ ಸ್ಟಾರ್ ಸುವರ್ಣ ವಾಹಿನಿಯು ವಿನೂತನ ಕಥಾಹಂದರವುಳ್ಳ ಧಾರಾವಾಹಿಗಳನ್ನು ನೀಡುತ್ತಾ ಬರುತ್ತಿದೆ. ಇತ್ತೀಚೆಗಷ್ಟೇ ಶುರುವಾದ ‘ಜೈಲಲಿತಾ’ ಹಾಗೂ ‘ಮರ್ಯಾದೆ ರಾಮಣ್ಣ’ ಧಾರಾವಾಹಿಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಇದೀಗ “ಆನಂದ ನಿಲಯ” ಎಂಬ ಹೊಸ ಕಥೆಯನ್ನು ಪ್ರಸಾರ ಮಾಡಲು ಸಜ್ಜಾಗಿದೆ.


    .
    ಇದೊಂದು ಸುಂದರ ಕೂಡು ಕುಟುಂಬದ ಕಥೆ. ತಂದೆಯ ಹಿಟ್ಟಿನ ಗಿರಣಿಯನ್ನು ಒಟ್ಟಾಗಿ ನಿರ್ವಹಿಸೋ ನಾಲ್ಕು ಜನ ಸಹೋದರರು ಧರ್ಮ, ಅರ್ಜುನ್, ಭುವನ್ ಮತ್ತು ನಕುಲ್. ತಮ್ಮಂದಿರ ಪಾಲಿಗೆ ತಂದೆಯಾಗಿ, ಗೆಳೆಯನಾಗಿ, ಅಣ್ಣನಾಗಿ ಅವರ ಬೆನ್ನೆಲುಬಾಗಿ ನಿಂತು, ಅವರೇ ತನ್ನ ಸರ್ವಸ್ವವೆಂದು ಬಾಳುತ್ತಿರುವ ಮನೆಯ ಹಿರಿಮಗ ಧರ್ಮ. ಇನ್ನು ಈ ‘ಆನಂದ ನಿಲಯʼಕ್ಕೆ ಮಹಾಲಕ್ಷ್ಮೀಯಂತಿರೋ ಧರ್ಮನ ಪತ್ನಿ ಸುಧಾ. ಮೈದುನರನ್ನು ಮಕ್ಕಳಂತೆ ಸಾಕಿ ಸಲಹುತ್ತಿರೋ ಈಕೆ, ಧರ್ಮನ ಸಹೋದರರಿಗೆ ಅಮ್ಮನಂತಿರೋ ಅತ್ತಿಗೆ.
    .
    ಒಗ್ಗಟ್ಟಿನ ಸಾರವನ್ನು ಸಾರುವ ಈ ಕುಟುಂಬದಲ್ಲಿ ಸಂಬಂಧಗಳ ತಕ್ಕಡಿಯನ್ನು ಸಮಾನವಾಗಿ ತೂಗುತ್ತಿರುವ ಸುಧಾ, ಮುಂಬರುವ ಸವಾಲುಗಳನ್ನು ಹೇಗೆ ಎದುರಿಸುತ್ತಾಳೆ? ತಮ್ಮ ವೈವಾಹಿಕ ಜೀವನಕ್ಕಿಂತಲೂ ಮೂವರು ಸಹೋದರರ ಸಂತೋಷಕ್ಕೇ ಹೆಚ್ಚಿನ ಆದ್ಯತೆ ನೀಡುವ ಧರ್ಮ ಮತ್ತು ಸುಧಾರ ಬದುಕು ಮುಂದೆ ಹೇಗೆ ಸಾಗಲಿದೆ? ಈ ಮನೆಗೆ ಮುಂದೆ ಸೊಸೆಯರು ಬಂದ ನಂತರ ಇವರೆಲ್ಲರ ಜೀವನ ಮೊದಲಿನಂತೆ ಮುಂದುವರೆಯುತ್ತಾ? ಅಥವಾ ಚದುರಿಹೋಗುತ್ತಾ? ಎಂಬುದೇ ಮುಖ್ಯ ಕಥಾಹಂದರ.
    .
    13 ವರ್ಷಗಳ ಹಿಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ “ಆಕಾಶದೀಪ” ಧಾರಾವಾಹಿ ಖ್ಯಾತಿಯ ನಟಿ ದಿವ್ಯ ಶ್ರೀಧರ್, ಇದೀಗ ವರ್ಷಗಳ ಬಳಿಕ ಈ ಕಥೆಯ ಮೂಲಕ ಸುವರ್ಣ ಪರಿವಾರಕ್ಕೆ ಕಮ್ ಬ್ಯಾಕ್ ಆಗಿದ್ದು ಸುಧಾ ಎಂಬ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಅಣ್ಣನ ಪಾತ್ರದಲ್ಲಿ ಕಾಣಿಸಿಕೊಂಡಿರೋ ನಟ ರಾಕೇಶ್, ಅನುಭವಿ ಕಲಾವಿದರಾಗಿದ್ದು ‘ಧರ್ಮ’ ಎಂಬ ಪಾತ್ರದ ಮೂಲಕ ಕಿರುತೆರೆಗೆ ಮರಳಿದ್ದಾರೆ. ಜೊತೆಗೆ ತಮ್ಮಂದಿರಾಗಿ ಕೌಶಿಕ್, ಹರ್ಷ, ನಿತೀಶ್ ಅಭಿನಯಿಸುತ್ತಿದ್ದು, ಜನಪ್ರಿಯ ಕಲಾವಿದೆ ಚಿತ್ಕಲಾ ಬಿರಾದರ್, ಸಿತಾರಾ, ಸಪ್ನ ದೀಕ್ಷಿತ್, ನಯನ ಶೆಟ್ಟಿ, ನಿಶಾ, ರೇಷ್ಮಾ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರ ತಾರಾ ಬಳಗವಿದೆ.


    .
    ಖ್ಯಾತ ನಿರ್ಮಾಪಕ ಸುಬ್ರಮಣ್ಯ ಮೂರ್ತಿನಾಥ್‌ ಅವರ “ನೀಲಾ ಪ್ರೊಡಕ್ಷನ್” ಎಂಬ ಸಂಸ್ಥೆಯಡಿ ಈ ಧಾರಾವಾಹಿ ನಿರ್ಮಾಣಗೊಳ್ಳುತ್ತಿದ್ದು, ಆದರ್ಶ್ ಹೆಗಡೆ ನಿರ್ದೇಶಿಸುತ್ತಿದ್ದಾರೆ.
    .
    ಕೂಡು ಕುಟುಂಬಕ್ಕೆ ಪ್ರೀತಿಯೇ ಆಧಾರ, ಒಗ್ಗಟ್ಟಿಗೆ ಇವರೇ ಸಾಕ್ಷಾತ್ಕಾರ ಶುರುವಾಗ್ತಿದೆ ಮನೆ-ಮನ ತುಂಬುವ ಹೊಸ ಕಥೆ “ಆನಂದ ನಿಲಯ” ಇದೇ ಆಗಸ್ಟ್ 10 ರಿಂದ ಪ್ರತಿದಿನ ರಾತ್ರಿ 7 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ಹಾಗೂ JioHotstar ನಲ್ಲಿ ತಪ್ಪದೇ ವೀಕ್ಷಿಸಿ.

    Post Views: 5

    Related Posts

    ತುಳು ಸಿನಿಮಾ ‘ಗಜಾನನ ಕ್ರಿಕೆಟರ್ಸ್’ ಟ್ರೈಲರ್‌ಗೆ ಭರ್ಜರಿ ಚಾಲನೆ

    May 18, 2026

    ‘ಜೈ’ ಸಿನೆಮಾ 100 ದಿನ ಪೂರೈಕೆ: ತುಳು ಚಿತ್ರರಂಗದಲ್ಲಿ ಮತ್ತೊಂದು ಹ್ಯಾಟ್ರಿಕ್‌ಗೆ ಸಜ್ಜಾದ ರೂಪೇಶ್ ಶೆಟ್ಟಿ

    May 11, 2026

    ತುಳು ಕ್ರೈಂ ಥ್ರಿಲ್ಲರ್ ‘ಕಟ್ಟೆಮಾರ್’ ಟ್ರೇಲರ್‌ಗೆ ಅದ್ಧೂರಿ ಬಿಡುಗಡೆ: ಜ.23ರಂದು ತೆರೆಗೆ

    January 15, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಉಡುಪಿ: ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ..!!

    August 10, 2026

    ಶುರುವಾಗ್ತಿದೆ ಕೂಡು ಕುಟುಂಬದ ಹೊಸ ಕಥೆ “ಆನಂದ ನಿಲಯ”…ಇದೇ ಆಗಸ್ಟ್ 10 ರಿಂದ ಪ್ರತಿದಿನ ರಾತ್ರಿ 7 ಗಂಟೆಗೆ…!

    August 10, 2026

    ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳಿಗೆ 10 ದಿನ ಪೊಲೀಸ್ ಕಸ್ಟಡಿ

    August 10, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.