ಬೆಳ್ತಂಗಡಿ: ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿ ಮಹಮ್ಮದ್ ಶರೀಪ್ (46) ಎಂದು ಗುರುತಿಸಲಾಗಿದೆ.
ವೇಣೂರು ಪೊಲೀಸ್ ಠಾಣಾ ಅಕ್ರ 71/2008, ಕಲಂ:457 380 ಐಪಿಸಿ ಪ್ರಕರಣದಲ್ಲಿ ಆರೋಪಿಯಾಗಿ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡು ಸಿ.ಸಿ. ಸಂಖ್ಯೆ: 535/2016 ರಂತೆ ವಾರಂಟು ಆರೋಪಿಯನ್ನು ಬಂಧಿಸಲಾಯತು.
ಅಗಸ್ಟ್ 13 2026 ರಂದು ವೇಣೂರು ಠಾಣಾ ಸಿಬ್ಬಂದಿಗಳಾದ ಎ ಎಸ್ ಐ ಬೆಣ್ಣಿಚನ್ ,ಪಿಸಿ ಬಸವರಾಜ್ ಮತ್ತು ಬೆಳ್ತಂಗಡಿ ಉಪ ವಿಭಾಗ ಕಚೇರಿಯ ಸಿಬ್ಬಂದಿ ಪ್ರವೀಣ್ ಎಮ್ ರವರುಗಳ ತಂಡ ದಸ್ತಗಿರಿ ಮಾಡಿ, ಬೆಳ್ತಂಗಡಿ ನ್ಯಾಯಾಧೀಶರ ಸಮ್ಮುಖದಲ್ಲಿ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.




