Facebook Twitter Instagram
    Thursday, September 17
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಬೀಡಿ ಕೊಡಲಿಲ್ಲ ಎಂಬ ವಿಚಾರಕ್ಕೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಗಲಾಟೆ: ಗ್ಯಾಸ್ ಬ್ಲಾಸ್ಟ್ ಬೆದರಿಕೆ!!
    ಇತ್ತೀಚಿನ ಸುದ್ದಿ

    ಬೀಡಿ ಕೊಡಲಿಲ್ಲ ಎಂಬ ವಿಚಾರಕ್ಕೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಗಲಾಟೆ: ಗ್ಯಾಸ್ ಬ್ಲಾಸ್ಟ್ ಬೆದರಿಕೆ!!

    September 17, 2026
    Share

    ಮಂಗಳೂರು : ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾ ಬಂಧಿ ಫೈಜಲ್ ಎಂಬಾತ ಬೀಡಿ ಕೊಡುವಂತೆ ಒತ್ತಾಯಿಸಿ ಅಡುಗೆ ತಯಾರಿಗೆ ಅಡ್ಡಿ ಪಡಿಸಿದ ಘಟನೆ ವರದಿಯಾಗಿದೆ.ಫೈಜಲ್ ಸೆ. 14ರಂದು ಬೆಳಗ್ಗೆ ಸುಮಾರು 8:10 ಗಂಟೆಗೆ ಅಡುಗೆ ಮನೆ ಕಡೆಗೆ ಹೋಗಿ ಪಾಕಶಾಲೆಯಲ್ಲಿ ಕೆಲಸ ಮಾಡುವ ಬಂಧಿಗಳಿಗೆ ಅಧೀಕ್ಷಕರು ಬೀಡಿ ನೀಡುವವರೆಗೂ ಅಡುಗೆ ತಯಾರಿ ಮಾಡಬಾರದು ಎಂದು ಬೆದರಿಕೆ ಹಾಕುವ ಮೂಲಕ ಮಧ್ಯಾಹ್ನದ ಅಡುಗೆ ತಯಾರಿಗೆ ಅಡಚಣೆ ಉಂಟು ಮಾಡಿದ ಎನ್ನಲಾಗಿದೆ.

    ಅನಂತರ ಸಹ ಬಂಧಿಗಳನ್ನು ಒಟ್ಟುಗೂಡಿಸಿ ಜೈಲು ಅಧೀಕ್ಷರ ಕಚೇರಿಗೆ ಬಂದು ನೀವು ಬೀಡಿ ಕೊಡುವರೆಗೂ ಅಡುಗೆ ತಯಾರಿಸಲು ಬಿಡುವುದಿಲ್ಲ. ಒಂದು ವೇಳೆ ಅಡುಗೆ ತಯಾರಿಸಿದರೆ ಅದರಲ್ಲಿ ಹಲ್ಲಿ ಅಥವಾ ಜಿರಳೆ ಹಾಕಿ ದೊಡ್ಡ ಗಲಾಟೆ ಮಾಡಿ ನಿಮ್ಮನ್ನು ವರ್ಗಾವಣೆ ಮಾಡಿಸುವುದಾಗಿಯೂ ಬೆದರಿಕೆ ಹಾಕಿರುವುದಾಗಿ ಜೈಲು ಅಧೀಕ್ಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

    ಬಳಿಕ ಅಡುಗೆ ಮನೆಯ ಗೇಟ್ ಹಾಕಿದಾಗ ಅಲ್ಲಿಯೇ ಇರುವ ಸಿಲಿಂಡ‌ರ್ ನಿಂದ ಗೇಟ್ ಮತ್ತು ಬೀಗದ ಕೀ ಗೆ ಹೊಡೆದು ಬೀಗ ತೆರೆಯುವಂತೆ ಜೋರಾಗಿ ಕೂಗಾಡುತ್ತಾ ಗ್ಯಾಸ್ ಗಳನ್ನು ಬ್ಲಾಸ್ಟ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಸಹ ಬಂಧಿಗಳನ್ನು ಒಟ್ಟು ಗೂಡಿಸಿಕೊಂಡು ಬೀಡಿ ಕೊಡುವವರೆಗೂ ಕೊಠಡಿಯೊಳಗೆ ತೆರಳದಂತೆ ಇತರ ಬಂಧಿಗಳನ್ನು ಪ್ರಚೋದಿಸಿ ಕಿರುಚಾಡುತ್ತಾ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾನೆ ಎಂದು ಆರೋಪಿಸಲಾಗಿದೆ.

    ಈ ಸಂಬಂಧ ಜೈಲು ಅಧೀಕ್ಷಕ ಶರಣಬಸಪ್ಪ ಅವರು ಬರ್ಕೆ ಪೊಲೀಸರಿಗೆ ದೂರು ನೀಡಿದ್ದಾರೆ.

    Post Views: 1

    Related Posts

    ಮಂಗಳೂರು: ಸುಲಿಗೆ ಪ್ರಕರಣ- ಇಬ್ಬರು ಆರೋಪಿಗಳಿಗೆ 7 ವರ್ಷ ಜೈಲು, ₹25 ಸಾವಿರ ದಂಡ

    September 17, 2026

    ಬೆಳ್ತಂಗಡಿ: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

    September 16, 2026

    ಉಳ್ಳಾಲ: ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ 21ರ ಯುವಕನ ಅಂಗಾಂಗ ದಾನಕ್ಕೆ ಕುಟುಂಬ ನಿರ್ಧಾರ

    September 16, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಬೀಡಿ ಕೊಡಲಿಲ್ಲ ಎಂಬ ವಿಚಾರಕ್ಕೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಗಲಾಟೆ: ಗ್ಯಾಸ್ ಬ್ಲಾಸ್ಟ್ ಬೆದರಿಕೆ!!

    September 17, 2026

    ಮಂಗಳೂರು: ಸುಲಿಗೆ ಪ್ರಕರಣ- ಇಬ್ಬರು ಆರೋಪಿಗಳಿಗೆ 7 ವರ್ಷ ಜೈಲು, ₹25 ಸಾವಿರ ದಂಡ

    September 17, 2026

    ಬೆಳ್ತಂಗಡಿ: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

    September 16, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.