Facebook Twitter Instagram
    Friday, September 18
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»“ಟಾಸ್ ಸಿನಿಮಾ ರಾಜ್ಯಾದ್ಯಂತ ಯಶಸ್ಸು ಕಾಣಲಿ” -ನಳಿನ್ ಕುಮಾರ್ ಕಟೀಲ್
    ಇತ್ತೀಚಿನ ಸುದ್ದಿ

    “ಟಾಸ್ ಸಿನಿಮಾ ರಾಜ್ಯಾದ್ಯಂತ ಯಶಸ್ಸು ಕಾಣಲಿ” -ನಳಿನ್ ಕುಮಾರ್ ಕಟೀಲ್

    September 18, 2026
    Share

    ಮಂಗಳೂರು: ಅವಿಕಾ ಪ್ರೊಡಕ್ಷನ್ ಮತ್ತು ಬಿಆರ್ ಬಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗಿರುವ ಅರ್ಜುನ್ ದೇವ್ ನಿರ್ದೇಶನ, ನಟನೆಯ “ಟಾಸ್” ತುಳು ಸಿನಿಮಾ ಬಿಗ್ ಸಿನೆಮಾಸ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಯಿತು.
    ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿಸುವ ಮೂಲಕ ಸಿನಿಮಾಕ್ಕೆ ಚಾಲನೆ ನೀಡಿ ಮಾತಾಡಿ, “ಇಂದು ಎರಡು ವಿಶೇಷ ದಿನವಾಗಿದೆ. ಒಂದೆಡೆ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಯುತ್ತಿದ್ದರೆ ಇನ್ನೊಂದೆಡೆ ತುಳು ಭಾಷೆಯ ಬಹು ನಿರೀಕ್ಷಿತ ಸಿನಿಮಾ “ಟಾಸ್” ಬಿಡುಗಡೆಯಾಗುತ್ತಿದೆ. ಡಾ ದೇವದಾಸ್ ಕಾಪಿಕಾಡ್ ಅವರು ನಮಗೆಲ್ಲ ಹೀರೋ ಇದ್ದಂತೆ. ಅವರು ಮುಟ್ಟಿದ್ದೆಲ್ಲಾ ಬಂಗಾರವಾಗುತ್ತದೆ, ಹಾಗೆಯೇ ಈ ಸಿನಿಮಾ ಕೂಡ ಕಾಂತಾರದಂತೆ ಯಶಸ್ಸು ಕಾಣಲಿ“ ಎಂದರು.
    ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತಾಡಿ, ”ಇಂದು ರಂಗಭೂಮಿಯ ಹಿರಿಯ ಕಲಾವಿದ ಡಾ ದೇವದಾಸ್ ಕಾಪಿಕಾಡ್ ಅವರ “ಟಾಸ್” ಸಿನಿಮಾ ಬಿಡುಗಡೆಯಾಗುತ್ತಿದೆ. ತುಳುವರು ಎಲ್ಲರೂ ಥಿಯೇಟರ್ ಗೆ ಬಂದು ಸಿನಿಮಾ ನೋಡಿದರೆ ಒಂದೊಳ್ಳೆ ಸಿನಿಮಾ ಗೆಲ್ಲುತ್ತದೆ“ ಎಂದರು.
    ಖ್ಯಾತ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತಾಡಿ, “ಟಾಸ್ ಸಿನಿಮಾ ಕಾಪಿಕಾಡ್ ರವರಿಗೆ ಕಾಸ್ ಮಾಡಿಕೊಡಲಿ. ತುಳುವರಿಗೆ ಸಮಸ್ತ ತುಳುನಾಡಿಗೆ ಈ ಸಿನಿಮಾ ಹೆಸರು ಮಾಡಲಿ. ಅರ್ಜುನ್ ದೇವ್ ನಟನೆ ನಿರ್ದೇಶನದ ಈ ಸಿನಿಮಾ ಕನ್ನಡ ಮತ್ತು ತುಳುಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದು ಹೆಮ್ಮೆಯ ವಿಚಾರ” ಎಂದರು.
    ಚಲನ ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮಾತಾಡಿ, “ಸಿನಿಮಾದ ಪ್ರೀಮಿಯರ್ ಶೋ ನೋಡಿದವರೆಲ್ಲ ಸಿನಿಮಾವನ್ನು ಹೊಗಳುತ್ತಿದ್ದಾರೆ. ಸಿನಿಮಾ ಒಳ್ಳೆಯ ಹೆಸರು ಮಾಡಲಿ” ಎಂದು ಶುಭ ಹಾರೈಸಿದರು.
    ಡಾ ಶಿವಶರಣ್ ಶೆಟ್ಟಿ ಮಾತಾಡಿ, “ಅರ್ಜುನ್ ಕಾಪಿಕಾಡ್ ಈ ಸಿನಿಮಾಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಅವರಿಗೆ ಯಶಸ್ಸು ಸಿಗಲಿ” ಎಂದರು.
    ಡಾ.ದೇವದಾಸ್ ಕಾಪಿಕಾಡ್, ಕದ್ರಿ ಮಣಿಕಾಂತ್, ಭೋಜರಾಜ ವಾಮಂಜೂರು, ಶರ್ಮಿಳಾ ಡಿ ಕಾಪಿಕಾಡ್, ವೀರೇಂದ್ರ ಶೆಟ್ಟಿ ಕಾವೂರು, ಗಿರೀಶ್ ಎಂ ಶೆಟ್ಟಿ ಕಟೀಲು, ಪ್ರಕಾಶ್ ತೂಮಿನಾಡ್, ಪುಷ್ಪರಾಜದ ಬೊಳ್ಳಾರ್, ಕಿಶೋರ್ ಕೊಟ್ಡಾರಿ, ರಾಕೇಶ್ ಶೆಟ್ಟಿ, ಅಶ್ವಿತ್ ಕೊಟ್ಟಾರಿ, ಮುಖೇಶ್ ಹೆಗ್ಡೆ, ಚಂದ್ರಹಾಸ ಶೆಟ್ಟಿ ರಂಗೋಲಿ, ಬಾಳ ಜಗನ್ನಾಥ ಶೆಟ್ಟಿ, ದಿನೇಶ್ ಶೆಟ್ಟಿ, ಫಯಾಜ್ ಅಭ್ದುಲ್ ರಝಾಕ್ ದುಬಾಯಿ, ಇಝಾಕ್ ಚೈತ್ರ ಶೆಟ್ಟಿ, ಸದಾಶಿವ ಅಮೀನ್, ಜೋಯಲ್ ಡಿ ಸೋಜ, ರೋಶನ್ ಶೆಟ್ಟಿ, ಚೈತ್ರಾ ಶೆಟ್ಟಿ, ಶೈಲಶ್ರೀ ಮುಲ್ಕಿ ಮತ್ತಿತರರು ಉಪಸ್ಥಿತರಿದ್ದರು. ಜಿತೇಶ್ ಉಳಿಯ ಕಾರ್ಯಕ್ರಮ‌ ನಿರ್ವಹಿಸಿದರು.

    ಸಿನಿಮಾ ಕುರಿತು:
    ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಡಾ|| ದೇವದಾಸ್ ಕಾಪಿಕಾಡ್ ರಚನೆ ಸಂಭಾಷಣೆ, ಅರ್ಜುನ್ ದೇವ್ ನಿರ್ದೇಶನ ಮತ್ತು ಅಭಿನಯದ “ಟಾಸ್” ಸಿನಿಮಾದ ಚಿತ್ರೀಕರಣ ಎರಡು ಹಂತಗಳಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ.
    ನಿರ್ಮಾಪಕರು: ಪಿ ಆ್ಯಂಡ್ ವೈ ವಲ್ಡ್ ಟೂರ್ಸ್ ಎಲ್ ಎಲ್ ಪಿ ಸಾಗರ್ ಪೂಜಾರಿ, ಕಥೆ–ಚಿತ್ರಕಥೆ–ಸಂಭಾಷಣೆ ಗೀತೆಗಳು, ಡಾ. ದೇವದಾಸ್ ಕಾಪಿಕಾಡ್, ನಿರ್ದೇಶಕರು ಅರ್ಜುನ್ ದೇವ್, ಸಹ ನಿರ್ದೇಶಕರು ಯಶಾಂತ್ ಕಲ್ಲಡ್ಕ, ರಾಕೇಶ್ ಬಿ.ಜೆ. ವಿಕ್ರಮ್ ದೇವಾಡಿಗ, ಸಹಾಯಕ ನಿರ್ದೇಶಕರು ಸೌರವ್ ರಾಮ್ ಸುಜಿತ್ ವಿನೋದ್ ಆಶಿಷ್ ರಾವ್ ಛಾಯಾಗ್ರಹಣ ಜೋಯೆಲ್ ಶಮನ್ ಡಿ’ಸೋಜಾ, ಸಹಾಯಕ ಛಾಯಾಗ್ರಾಹಕರು ಅಮನ್ ಪ್ರಖ್ಯಾತ್, ಕಲಾ ನಿರ್ದೇಶನ ರಾಜೇಶ್ ಕೊಳಕೆ ರಾಜೇಶ್ ಬಾಂಧ್ಯೋಡ್, ಸಂಕಲನ ಯಶ್ವಿನ್ ಕೆ. ಶೆಟ್ಟಿಗಾರ್, ಸಂಗೀತ ಮಣಿಕಾಂತ್ ಕದ್ರಿ, ಕಾರ್ಯಕಾರಿ ನಿರ್ಮಾಪಕರು ಸಂದೀಪ್ ಶೆಟ್ಟಿ, ವಸ್ತ್ರ ವಿನ್ಯಾಸ ಅನುಪ್ ಸಾಗರ್. ವಿತರಕರು ಸಚಿನ್ ಎಎಸ್ ಉಪ್ಪಿನಂಗಡಿ.
    ತಾರಾಗಣದಲ್ಲಿ ಡಾ ||ದೇವದಾಸ್ ಕಾಪಿಕಾಡ್, ಅರ್ಜುನ್ ದೇವ್, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರ್, ಸುತೇಜ್ ಶೆಟ್ಟಿ, ಸಂಗೀತಾ ಶೆಟ್ಟಿ, ಶೋಭರಾಜ್ ಪಾವೂರ್, ಚೈತ್ರಾ ಶೆಟ್ಟಿ, ಕೃತಿ ಶೆಟ್ಟಿ ಅಭಿನಯಿಸಿದ್ದಾರೆ.
    ಟಾಸ್ ತುಳು ಹಾಗೂ ಕನ್ನಡ ಭಾಷೆಯಲ್ಲಿ ತಯಾರಾಗಿದೆ. ಈ ಸಿನಿಮಾಗಳಿಗೆ ನಟ ಗಣೇಶ್ ಮತ್ತು ಶಿಲ್ಪಾ ಗಣೇಶ್ ಸಾಥ್ ನೀಡಿದ್ದಾರೆ.

    ಟಾಸ್ ಸಿನಿಮಾ ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಮಣಿಪಾಲ, ಕುಂದಾಪುರ, ಕಾರ್ಕಳ, ದೇರಳಕಟ್ಟೆ, ಸುಳ್ಯ ಬೆಳ್ತಂಗಡಿ, ಪುತ್ರೂರು, ಸುಳ್ಯ ಸಹಿತ ಬೇರೆ ಬೇರೆ ಕಡೆಗಳಲ್ಲಿ ಬಿಡುಗಡೆಗೊಂಡಿದೆ. ಬೆಂಗಳೂರು, ಮೈಸೂರು ಮೊದಲಾದ ಕಡೆಗಳಲ್ಲೂ ಸಿನಿಮಾ ಬಿಡುಗಡೆಯಾಗಿದೆ.
    ಇದೊಂದು ಪಕ್ಕಾ ಕಾಮಿಡಿ ಸಿನಿಮಾ, ಸೆಂಟಿಮೆಂಟ್, ಆ್ಯಕ್ಷನ್, ಥ್ರಿಲ್ಲರ್ ಹೀಗೆ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಪಕ್ಕಾ ಫ್ಯಾಮಿಲಿ ಪ್ಯಾಕೇಜ್, ಎಲ್ಲಾ ಚಿಂತೆಗಳನ್ನು ಬಿಟ್ಟು ಎಂಜಾಯ್ ಮಾಡಬೇಕೆಂದು ರೆಡಿ ಮಾಡಿರುವ ಸಿನಿಮಾ ಇದು. ಹಣ ಕೊಟ್ಟು ಬರುವ ಪ್ರೇಕ್ಷಕರಿಗೆ ಏನೇನು ಬೇಕೋ ಎಲ್ಲವೂ “ಟಾಸ್” ಸಿನಿಮಾದಲ್ಲಿದೆ ಎಂದು ನಿರ್ದೇಶಕ ಅರ್ಜುನ್ ದೇವ್ ತಿಳಿಸಿದ್ದಾರೆ.

    Post Views: 1

    Related Posts

    ಅಬ್ದುಲ್ ರೆಹಮಾನ್ ಹಂತಕರಿಗೆ ಜಾಮೀನು ವಿಚಾರ,ಸರ್ಕಾರಿ ಅಭಿಯೋಜಕರೊಂದಿಗೆ ಪರಿಶೀಲಿಸುತ್ತೇನೆ- ಗೃಹ ಸಚಿವ

    September 18, 2026

    ಮಂಗಳೂರು: ಅಬ್ದುಲ್ ರಹಿಮಾನ್ ಕೊಲೆ ಆರೋಪಿಗಳಿಗೆ ಜಾಮೀನು- ಸಚಿವರ ಕಾರಿಗೆ ಮುತ್ತಿಗೆ ಹಾಕಿದ ಎಸ್‌ಡಿಪಿಐ ಕಾರ್ಯಕರ್ತರು

    September 18, 2026

    ಪುತ್ತೂರು: ಅಜಿತ್ ರೈ ಹೊಸಮನೆ ವಿರುದ್ಧದ ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ಬ್ರೇಕ್

    September 18, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    “ಟಾಸ್ ಸಿನಿಮಾ ರಾಜ್ಯಾದ್ಯಂತ ಯಶಸ್ಸು ಕಾಣಲಿ” -ನಳಿನ್ ಕುಮಾರ್ ಕಟೀಲ್

    September 18, 2026

    ಅಬ್ದುಲ್ ರೆಹಮಾನ್ ಹಂತಕರಿಗೆ ಜಾಮೀನು ವಿಚಾರ,ಸರ್ಕಾರಿ ಅಭಿಯೋಜಕರೊಂದಿಗೆ ಪರಿಶೀಲಿಸುತ್ತೇನೆ- ಗೃಹ ಸಚಿವ

    September 18, 2026

    ಮಂಗಳೂರು: ಅಬ್ದುಲ್ ರಹಿಮಾನ್ ಕೊಲೆ ಆರೋಪಿಗಳಿಗೆ ಜಾಮೀನು- ಸಚಿವರ ಕಾರಿಗೆ ಮುತ್ತಿಗೆ ಹಾಕಿದ ಎಸ್‌ಡಿಪಿಐ ಕಾರ್ಯಕರ್ತರು

    September 18, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.