Facebook Twitter Instagram
    Wednesday, October 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
    ಇತ್ತೀಚಿನ ಸುದ್ದಿ

    ಮಂಗಳೂರು: ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ

    October 7, 2026
    Share

    ಮಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

    ಪುತ್ತೂರಿನ ನೆಲ್ಲಾಡಿ ಗ್ರಾಮದ ಪ್ರಸ್ತುತ ಪುತ್ತೂರಿನ ನೆಕ್ಕಿಲಾಡಿ ಗ್ರಾಮದಲ್ಲಿ ವಾಸವಾಗಿರುವ ಮೊಹಮ್ಮದ್ ಮುಸ್ತಾಫಾ ಅಲಿಯಾಸ್ ಮುಸ್ತಾಫಾ (36) ಬಂಧಿತ ಆರೋಪಿ.

    ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಅ.ನಂ. 59/2013 ಕಲಂ 394 ಜೊತೆಗೆ 34 ಐಪಿಸಿ, (ಮಾನ್ಯ ಜಿಲ್ಲಾ ಪ್ರಧಾನ & ಸತ್ರ ನ್ಯಾಯಾಲಯ ಮಂಗಳೂರು ಎಸ್.ಸಿ ನಂ-65/2013) ಪ್ರಕರಣ ಸಂಬಂಧ ಆರೋಪಿಗೆ ಶಿಕ್ಷೆಯಾಗಿರುತ್ತದೆ. ಆದರೆ ಈ ಪ್ರಕರಣದ ಶಿಕ್ಷಾ ಆದೇಶದ ವಿರುದ್ಧವಾಗಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅಪೀಲು ದಾಖಲಿಸಿದ್ದ.

    ಅಪೀಲು ದಾಖಲಿಸಿದ ಬಳಿಕ ಆರೋಪಿಯು ನ್ಯಾಯಾಲಯದ ಮುಂದೆ ಹಾಜರಾಗದೆ ಇವರೆಗೆ ಗೈರು ಹಾಜರಾಗಿದ್ದನು. ಈ ಹಿನ್ನೆಲೆ ಆರೋಪಿಯನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಉಚ್ಚ ನ್ಯಾಯಾಲಯ ದಸ್ತಗಿರಿ ವಾರೆಂಟ್ ಹೊರಡಿಸಿರುತ್ತದೆ.

    ಅ. 6ರಂದು ಬೆಳಗ್ಗೆ ವಾರಂಟ್ ಆರೋಪಿಯು ಪ್ರಸ್ತುತ ವಾಸವಾಗಿರುವ ವಿಳಾಸಕ್ಕೆ ತೆರಳಿ ವಿಳಾಸ ಪತ್ತೆ ಮಾಡಲಾಗಿತ್ತು. ಬಳಿಕ ಮಂಗಳೂರು ದಕ್ಷಿಣ ವಿಭಾಗದ ಎ.ಸಿ.ಪಿ. ವಿಜಯ ಕ್ರಾಂತಿ ರವರ ನಿರ್ದೇಶನದಂತೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕರಾದ ಡಿ.ಆರ್. ಮಂಜಪ್ಪ ರವರ ನೇತೃತ್ವದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ. ಅರುಣ್ ಕುಮಾರ್ ಡಿ. ಅವರು ಆರೋಪಿಯ ದಸ್ತಗಿರಿ ಕಾರ್ಯಾಚರಣೆ ನಡೆಸಿದ್ದಾರೆ.

    ಈ ಕಾರ್ಯಾಚರಣೆಯಲ್ಲಿ ಠಾಣಾ ಸಿಬ್ಬಂದಿಯವರಾದ ಹೆಡ್ ಕಾನ್ಸ್ಟೇಬಲ್ ಕಮಲಾಕ್ಷ, ಹೆಡ್ ಕಾನ್ಸ್ಟೇಬಲ್ ಮೆಲ್ವಿನ್ ಪಿಂಟೋ, ಕಾನ್ಸ್ಟೇಬಲ್ ಹನುಮರೆಡ್ಡಿ, ಕಾನ್ಸ್ಟೇಬಲ್ ರಮೇಶ ಹಾಗೂ ಕಾನ್ಸ್ಟೇಬಲ್ ಬಿರೇಂದ್ರ ರವರು ಮತ್ತು ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿಯವರು ಭಾಗಿಯಾಗಿರುತ್ತಾರೆ

    Post Views: 7

    Related Posts

    ಪುತ್ತೂರು ನ್ಯಾಯಾಲಯದಲ್ಲಿ ಪರಾರಿಯಾಗಲು ಯತ್ನಿಸಿದ್ದ ಜಯೇಶ್‌ಗೆ 2 ವರ್ಷ ಜೈಲು ಶಿಕ್ಷೆ

    October 7, 2026

    ಕಾಸರಗೋಡು: ಸಿಡಿಲು ಬಡಿದು ಯುವಕ ಮೃತ್ಯು

    October 7, 2026

    ನಕಲಿ ಸುಪ್ರೀಂ ಕೋರ್ಟ್ ಆದೇಶ ಸೃಷ್ಠಿಸಿ ಜೀವಾವಧಿ ಕೈದಿ ಬಿಡುಗಡೆಗೆ ಯತ್ನಿಸಿದ DIG ಅರೆಸ್ಟ್!

    October 6, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಪುತ್ತೂರು ನ್ಯಾಯಾಲಯದಲ್ಲಿ ಪರಾರಿಯಾಗಲು ಯತ್ನಿಸಿದ್ದ ಜಯೇಶ್‌ಗೆ 2 ವರ್ಷ ಜೈಲು ಶಿಕ್ಷೆ

    October 7, 2026

    ಮಂಗಳೂರು: ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ

    October 7, 2026

    ಕಾಸರಗೋಡು: ಸಿಡಿಲು ಬಡಿದು ಯುವಕ ಮೃತ್ಯು

    October 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.