Facebook Twitter Instagram
    Friday, October 9
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಉಡುಪಿ: SIR ನೆಪದಲ್ಲಿ ಮನೆಯೊಳಗೆ ಬಂದು ವೃದ್ಧೆಯ ಚಿನ್ನದ ಸರ ದರೋಡೆ
    ಇತ್ತೀಚಿನ ಸುದ್ದಿ

    ಉಡುಪಿ: SIR ನೆಪದಲ್ಲಿ ಮನೆಯೊಳಗೆ ಬಂದು ವೃದ್ಧೆಯ ಚಿನ್ನದ ಸರ ದರೋಡೆ

    October 9, 2026
    Share

    ಉಡುಪಿ : ಜನಗಣತಿ (SIR) ಸರ್ವೇ ಹೆಸರಿನಲ್ಲಿ ಮನೆಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು 74 ವರ್ಷದ ವೃದ್ಧೆಯನ್ನು ಕೆಳಗೆ ತಳ್ಳಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದೋಚಿ ಪರಾರಿಯಾಗಿರುವ ಘಟನೆ ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ನಿಟ್ಟೂರಿನಲ್ಲಿ ನಡೆದಿದೆ. ಉಡುಪಿ ಪುತ್ತೂರು ಗ್ರಾಮದ ನಿಟ್ಟೂರು ನಿವಾಸಿ ಶಾಂತ ಕಾರಂತ್ (74) ವಂಚನೆ ಹಾಗೂ ದರೋಡೆಗೆ ಒಳಗಾದ ವೃದ್ಧೆ.

    ಶಾಂತ ಕಾರಂತ್ ಅವರು ನಿಟ್ಟೂರಿನ ಮನೆಯಲ್ಲಿ ಒಬ್ಬರೇ ಇದ್ದ ವೇಳೆ, ಅಕ್ಟೋಬರ್ 7 ರಂದು ಸಂಜೆ 3:47 ರ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದಿದ್ದಾರೆ. ತಾವು ಜನಗಣತಿ (SIR) ಕುರಿತು ಮಾಹಿತಿ ಸಂಗ್ರಹಿಸಲು ಬಂದಿರುವುದಾಗಿ ಹೇಳಿ ಮಾತನಾಡಿಸಿದ್ದಾರೆ. ಈ ವೇಳೆ ಶಾಂತ ಕಾರಂತ್ ಅವರು, “ಮಗ ಬಂದ ಮೇಲೆ ಕೇಳಿ ಅವರು ತಂದ ಕಾಗದಕ್ಕೆ ಸಹಿ ಮಾಡುತ್ತೇನೆ” ಎಂದು ಹೇಳಿ ಮನೆಯೊಳಗೆ ತೆರಳಿದ್ದಾರೆ.
    ಶಾಂತ ಕಾರಂತ್ ಅವರ ಹಿನ್ನಡೆಯನ್ನೇ ಕಾದಿದ್ದ ಅಪರಿಚಿತರು, ಏಕಾಏಕಿ ಮನೆಯೊಳಗೆ ಅಕ್ರಮವಾಗಿ ನುಗ್ಗಿದ್ದಾರೆ. ಬಳಿಕ ವೃದ್ಧೆಯನ್ನು ಬಲವಾಗಿ ದೂಡಿ ಕೆಳಗೆ ಬೀಳಿಸಿ, ಅವರ ಕುತ್ತಿಗೆಯಲ್ಲಿದ್ದ ಸುಮಾರು 30 ಗ್ರಾಂ ತೂಕದ ಗಾರ್ನೇಟ್ ಮಣಿ ಇರುವ ಬೆಲೆಬಾಳುವ ಚಿನ್ನದ ಸರವನ್ನು ಬಲವಂತವಾಗಿ ಎಳೆದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

    ಘಟನೆ ಕುರಿತು ಶ್ರೀನಿವಾಸ ಕಾರಂತ್ ಅವರು ನೀಡಿದ ದೂರಿನನ್ವಯ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 136/2026, ಬಿಎನ್‌ಎಸ್ (BNS) ಕಲಂ 309(4) ಹಾಗೂ 3(5) ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಖದೀಮರ ಪತ್ತೆಗೆ ಜಾಲ ಬೀಸಿದ್ದಾರೆ.

    Post Views: 8

    Related Posts

    ಮಂಗಳೂರು: ದಾಂಡಿಯಾ ಹೆಸರಿನಲ್ಲಿ ಕಾನೂನುಬಾಹಿರ ಚಟುವಟಿಕೆಗೆ ಕಾನೂನು ಕ್ರಮ

    October 9, 2026

    ರೇಣುಕಾಸ್ವಾಮಿ ಕೊಲೆ: ನಟ ದರ್ಶನ್‌ ಜತೆಗಿದ್ದ ಚಿಕ್ಕಣ್ಣ ಸೇರಿ ಇಬ್ಬರು ನಟರಿಗೆ ಕೋರ್ಟ್‌ನಿಂದ ನೋಟಿಸ್‌!

    October 9, 2026

    ಬೆಳ್ತಂಗಡಿ: ಅಡಿಕೆ ಕೊಯ್ಯುತ್ತಿದ್ದ ವೇಳೆ ದುರ್ಘಟನೆ – ವಿದ್ಯುತ್ ತಂತಿಗೆ ಕೋಲು ತಾಗಿ ಯುವಕ ಸಾವು

    October 8, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಮಂಗಳೂರು: ದಾಂಡಿಯಾ ಹೆಸರಿನಲ್ಲಿ ಕಾನೂನುಬಾಹಿರ ಚಟುವಟಿಕೆಗೆ ಕಾನೂನು ಕ್ರಮ

    October 9, 2026

    ಉಡುಪಿ: SIR ನೆಪದಲ್ಲಿ ಮನೆಯೊಳಗೆ ಬಂದು ವೃದ್ಧೆಯ ಚಿನ್ನದ ಸರ ದರೋಡೆ

    October 9, 2026

    ರೇಣುಕಾಸ್ವಾಮಿ ಕೊಲೆ: ನಟ ದರ್ಶನ್‌ ಜತೆಗಿದ್ದ ಚಿಕ್ಕಣ್ಣ ಸೇರಿ ಇಬ್ಬರು ನಟರಿಗೆ ಕೋರ್ಟ್‌ನಿಂದ ನೋಟಿಸ್‌!

    October 9, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.