Facebook Twitter Instagram
    Sunday, October 11
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು ದಸರಾ: ಅ.11ರಿಂದ ಅ.21ರವರೆಗೆ ವಾಹನ ಸಂಚಾರದಲ್ಲಿ ಬದಲಾವಣೆ
    ಇತ್ತೀಚಿನ ಸುದ್ದಿ

    ಮಂಗಳೂರು ದಸರಾ: ಅ.11ರಿಂದ ಅ.21ರವರೆಗೆ ವಾಹನ ಸಂಚಾರದಲ್ಲಿ ಬದಲಾವಣೆ

    October 11, 2026
    Share

    ಮಂಗಳೂರು: ಮಂಗಳೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ಪ್ರತಿದಿನ ಸಂಜೆ 4 ಗಂಟೆಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಗಣ್ಯರು ಹಾಗೂ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ.

    ಈ ಹಿನ್ನೆಲೆಯಲ್ಲಿ ಕೂಳೂರು ಫೆರಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಮಂಗಳೂರು ನಗರ ಪೊಲೀಸ್ ಇಲಾಖೆ ಸಂಚಾರ ಸಲಹೆ ಪ್ರಕಟಿಸಿದೆ.ಕೂಳೂರು ಫೆರಿ ರಸ್ತೆಯ ಕಾರ್‌ಸ್ಟ್ರೀಟ್, ಬಾಲಾಜಿ ಜಂಕ್ಷನ್, ನ್ಯೂ ಚಿತ್ರಾ ಜಂಕ್ಷನ್, ಅಳಕೆ ಬ್ರಿಡ್ಜ್, ಕುದ್ರೋಳಿ ದೇವಸ್ಥಾನದ ದ್ವಾರ, ದುರ್ಗಾಮಹಲ್ ಜಂಕ್ಷನ್ ಹಾಗೂ ಮಣ್ಣಗುಡ್ಡೆ ಜಂಕ್ಷನ್ ಮಾರ್ಗದಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.ಕೊಟ್ಟಾರ ಚೌಕಿ ಕಡೆಯಿಂದ ಕಾರ್‌ಸ್ಟ್ರೀಟ್‌ಗೆ ತೆರಳುವ ವಾಹನಗಳು ಲಾಲ್‌ಬಾಗ್, ಪಿ.ವಿ.ಎಸ್. ಹಾಗೂ ನವಭಾರತ್ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ. ಕಾರ್‌ಸ್ಟ್ರೀಟ್‌ನಿಂದ ಕೂಳೂರು ಫೆರಿ ರಸ್ತೆಯ ಕಡೆಗೆ ತೆರಳುವ ವಾಹನಗಳು ನವಭಾರತ್ ಹಾಗೂ ಪಿ.ವಿ.ಎಸ್. ಮಾರ್ಗವನ್ನು ಬಳಸುವಂತೆ ಪೊಲೀಸ್ ಇಲಾಖೆ ತಿಳಿಸಿದೆ.ಇದಲ್ಲದೆ, ಕೂಳೂರು ಫೆರಿ ರಸ್ತೆಯಲ್ಲಿ ನ್ಯೂ ಚಿತ್ರಾ ಜಂಕ್ಷನ್‌ನಿಂದ ಲೇಡಿಹಿಲ್‌ವರೆಗೆ ಹಾಗೂ ಸಂಪರ್ಕ ರಸ್ತೆಗಳ ಎರಡೂ ಬದಿಗಳಲ್ಲಿ ವಾಹನ ನಿಲುಗಡೆಗೆ ನಿಷೇಧ ಹೇರಲಾಗಿದೆ.

    ಸಾರ್ವಜನಿಕರು ನಿಗದಿತ ಪಾರ್ಕಿಂಗ್ ಸ್ಥಳಗಳಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡಬೇಕು. ಸುಗಮ ಸಂಚಾರಕ್ಕಾಗಿ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

    Post Views: 6

    Related Posts

    ಉಡುಪಿ: ವೃದ್ಧೆಯ ಚಿನ್ನದ ಸರ ದರೋಡೆ ಪ್ರಕರಣ- ಇಬ್ಬರ ಬಂಧನ

    October 11, 2026

    ಬಂಟ್ವಾಳ: ಬ್ರಹ್ಮರಕೂಟ್ಲು ಸರ್ವಿಸ್ ರಸ್ತೆಯಲ್ಲಿ ಪೊಲೀಸ್ ಕಾರ್ಯಾಚರಣೆ; ಮಾದಕ ವಸ್ತು ಸಹಿತ ವ್ಯಕ್ತಿಯ ಬಂಧನ

    October 10, 2026

    ಮಂಗಳೂರು: 13 ವರ್ಷಗಳಿಂದ ವಿಳಾಸ ಬದಲಾಯಿಸಿಕೊಂಡು ತಲೆಮರೆಸಿಕೊಂಡಿದ್ದ ಎಲ್‌ಪಿಸಿ ಆರೋಪಿ ಅರೆಸ್ಟ್

    October 10, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಉಡುಪಿ: ವೃದ್ಧೆಯ ಚಿನ್ನದ ಸರ ದರೋಡೆ ಪ್ರಕರಣ- ಇಬ್ಬರ ಬಂಧನ

    October 11, 2026

    ಮಂಗಳೂರು ದಸರಾ: ಅ.11ರಿಂದ ಅ.21ರವರೆಗೆ ವಾಹನ ಸಂಚಾರದಲ್ಲಿ ಬದಲಾವಣೆ

    October 11, 2026

    ಬಂಟ್ವಾಳ: ಬ್ರಹ್ಮರಕೂಟ್ಲು ಸರ್ವಿಸ್ ರಸ್ತೆಯಲ್ಲಿ ಪೊಲೀಸ್ ಕಾರ್ಯಾಚರಣೆ; ಮಾದಕ ವಸ್ತು ಸಹಿತ ವ್ಯಕ್ತಿಯ ಬಂಧನ

    October 10, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.