Facebook Twitter Instagram
    Monday, October 19
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಬಂಟ್ವಾಳ: “ಹಣ ಕೇಳುತ್ತೀಯಾ, ಮುಗಿಸಿಬಿಡುತ್ತೇನೆ” ಎಂದು ವ್ಯಕ್ತಿಗೆ ಚೂರಿ ಇರಿತ
    ಇತ್ತೀಚಿನ ಸುದ್ದಿ

    ಬಂಟ್ವಾಳ: “ಹಣ ಕೇಳುತ್ತೀಯಾ, ಮುಗಿಸಿಬಿಡುತ್ತೇನೆ” ಎಂದು ವ್ಯಕ್ತಿಗೆ ಚೂರಿ ಇರಿತ

    October 19, 2026
    Share

    ಬಂಟ್ವಾಳ: ಹಣಕಾಸಿನ ವಿಚಾರವಾಗಿ ನಡೆದ ಮಾತಿನ ಚಕಮಕಿಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿದ ಘಟನೆ ಬಂಟ್ವಾಳದ ಬಿ.ಮೂಡ ಗ್ರಾಮದ ಪಲ್ಲಮಜಲು ಜಂಕ್ಷನ್ ನಲ್ಲಿ ಅ.17ರ ರಾತ್ರಿ ನಡೆದಿದೆ. ಬಿ.ಮೂಡ ಗ್ರಾಮದ ಕುಪ್ಪಿಲ ನಿವಾಸಿ ಉದಯ್ ಚೂರಿ ಇರಿತಕ್ಕೊಳಗಾದವರು. ಅಜಿತ್ ಕಲ್ಲಗುಡ್ಡೆ ಎಂಬಾತ ಆರೋಪಿಯಾಗಿದ್ದಾನೆ ಎಂದು ದೂರು ನೀಡಿದ್ದಾರೆ.

    ಉದಯ್ ಅವರು ಅಜಿತ್ ಗೆ ಹಲವು ವರ್ಷಗಳಿಂದ ಹಣ ನೀಡಿದ್ದು, ವಾಪಸ್ ಕೇಳುತ್ತಿದ್ದರೂ ಆತ ನೀಡಿರಲಿಲ್ಲ ಎನ್ನಲಾಗಿದೆ. ಅ.17ರಂದು ರಾತ್ರಿ ಹಣ ಕೇಳುವ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಹಣ ನೀಡುವುದಾಗಿ ಹೇಳಿ ಅಜಿತ್, ಉದಯ್ ಅವರನ್ನು ಪಲ್ಲಮಜಲು ಜಂಕ್ಷನ್ ಗೆ ಕರೆಸಿಕೊಂಡಿದ್ದ. ಅದರಂತೆ ರಾತ್ರಿ 8.50ರ ಸುಮಾರಿಗೆ ಆಟೋರಿಕ್ಷಾದಲ್ಲಿ ಬಂದ ಉದಯ್ ಅವರೊಂದಿಗೆ ಮತ್ತೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ, ಹಣ ಕೇಳುತ್ತೀಯಾ, ನಿನ್ನನ್ನು ಮುಗಿಸಿದರೆ ಹಣ ನೀಡುವ ಅಗತ್ಯವಿಲ್ಲ ಎಂದು ಹೇಳಿ ಅಜಿತ್ ಚೂರಿಯಿಂದ ಉದಯ್ ಅವರ ಹೊಟ್ಟೆಯ ಬಲಭಾಗಕ್ಕೆ ಇರಿದಿದ್ದಾನೆ. ಮತ್ತೊಮ್ಮೆ ಇರಿಯಲು ಯತ್ನಿಸಿದಾಗ ತಡೆಯಲು ಹೋದ ಉದಯ್ ಅವರ ಎಡಗೈ ಮಣಿಕಟ್ಟಿಗೂ ಗಾಯವಾಗಿದೆ ಎನ್ನಲಾಗಿದೆ.

    ಈ ಸಂದರ್ಭ ಅಣ್ಣನ ಕೂಗು ಕೇಳಿ ಸ್ಥಳಕ್ಕೆ ಬಂದ ಲೋಕೇಶ್ ಅವರ ಮೇಲೂ ಚೂರಿ ಹಿಡಿದು ಅಜಿತ್ ಅಟ್ಟಿಸಿಕೊಂಡು ಬಂದಿದ್ದಾನೆ. ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಇನ್ನು ಗಂಭೀರವಾಗಿ ಗಾಯಗೊಂಡ ಉದಯ್ ಅವರನ್ನು ಸ್ಥಳೀಯರಾದ ಸಾಜಿದ್ ಮತ್ತು ಸಫಾಜ್ ಅವರು ಆಟೋರಿಕ್ಷಾದಲ್ಲಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕರೆದೊಯ್ಯಲಾಯಿತು. ಈ ಕುರಿತು ಸಹೋದರ ಲೋಕೇಶ್ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Post Views: 5

    Related Posts

    ಉಡುಪಿ: ಎಂಡಿಎಂಎ ಮಾರಾಟಕ್ಕೆ ಯತ್ನ- ರೂಢಿಗತ ಆರೋಪಿ ಬಂಧನ17.66 ಗ್ರಾಂ ಮಾದಕ ವಸ್ತು ಸಹಿತ ₹85 ಸಾವಿರ ಮೌಲ್ಯದ ಸೊತ್ತು ವಶ

    October 19, 2026

    ‘ಪೆನ್ ಡ್ರೈವ್’ ಪ್ರಕರಣ:HDK ದೇವಸ್ಥಾನಕ್ಕೆ ಬರಲಿ, ಪ್ರಮಾಣ ಮಾಡ್ತೀನಿ; ಸಂಪುಟದಿಂದ ವಜಾ ಮಾಡುವಂತೆ ಮೋದಿಗೆ ದೂರು- ಶ್ರೇಯಸ್

    October 18, 2026

    ವೆಲೆನ್ಸಿಯಾ ಚರ್ಚ್ ಪಾದ್ರಿಯ ವಿರುದ್ಧ ಪೋಕ್ಸೊ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    October 18, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಉಡುಪಿ: ಎಂಡಿಎಂಎ ಮಾರಾಟಕ್ಕೆ ಯತ್ನ- ರೂಢಿಗತ ಆರೋಪಿ ಬಂಧನ17.66 ಗ್ರಾಂ ಮಾದಕ ವಸ್ತು ಸಹಿತ ₹85 ಸಾವಿರ ಮೌಲ್ಯದ ಸೊತ್ತು ವಶ

    October 19, 2026

    ಬಂಟ್ವಾಳ: “ಹಣ ಕೇಳುತ್ತೀಯಾ, ಮುಗಿಸಿಬಿಡುತ್ತೇನೆ” ಎಂದು ವ್ಯಕ್ತಿಗೆ ಚೂರಿ ಇರಿತ

    October 19, 2026

    ‘ಪೆನ್ ಡ್ರೈವ್’ ಪ್ರಕರಣ:HDK ದೇವಸ್ಥಾನಕ್ಕೆ ಬರಲಿ, ಪ್ರಮಾಣ ಮಾಡ್ತೀನಿ; ಸಂಪುಟದಿಂದ ವಜಾ ಮಾಡುವಂತೆ ಮೋದಿಗೆ ದೂರು- ಶ್ರೇಯಸ್

    October 18, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.