Facebook Twitter Instagram
    Sunday, October 25
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ದ್ವಿಚಕ್ರ ವಾಹನಗಳ ಕಳವು- 9 ದ್ವಿಚಕ್ರ ವಾಹನಗಳ ವಶಕ್ಕೆ
    ಇತ್ತೀಚಿನ ಸುದ್ದಿ

    ಮಂಗಳೂರು: ದ್ವಿಚಕ್ರ ವಾಹನಗಳ ಕಳವು- 9 ದ್ವಿಚಕ್ರ ವಾಹನಗಳ ವಶಕ್ಕೆ

    October 25, 2026
    Share

    ಮಂಗಳೂರು: ನಗರದಲ್ಲಿ ಸರಣಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಗ್ಯಾಂಗ್ ಅನ್ನು ಮಂಗಳೂರು ದಕ್ಷಿಣ ಪೊಲೀಸರು ಬಂಧಿಸಿದ್ದಾರೆ. ಮೂವರು ಬಾಲಕರು ಸೇರಿ ಒಟ್ಟು 7 ಆರೋಪಿಗಳನ್ನು ವಶಕ್ಕೆ ಪಡೆದು 9 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

    ವೆಲೆನ್ಸಿಯಾ ಜಂಕ್ಷನ್, ಜಪ್ಪು ಮಾರ್ಕೆಟ್, ಅತ್ತಾವರ ಕೆಎಂಸಿ ಆಸ್ಪತ್ರೆ ಬಳಿ ಮತ್ತು ಹೊಯಿಗೆ ಬಜಾರ್, ದೇರಳಕಟ್ಟೆ ಯೆನೆಪೋಯ ಆಸ್ಪತ್ರೆ ಬಳಿ, ಕುತಾರ್ ಪಂಡಿತ್ ಹೌಸ್ ಬಳಿ ಅ.12 ರಿಂದ ಅ.22 ರ ಅವಧಿಯಲ್ಲಿ 6 ಬೈಕ್‌ಗಳು ಕಳವಾಗಿದ್ದವು. ಈ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ 4 ಮತ್ತು ಉಳ್ಳಾಲ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿತ್ತು.

    ಪಿಎಸ್‌ಐ ನೇತೃತ್ವದ ವಿಶೇಷ ತಂಡ ತನಿಖೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದೆ.

    ಬಂಧಿತರನ್ನು ಮಹಮ್ಮದ್ ಸಿಯಾಮ್ (19) – ಮೂಡುಶೆಡ್ಡೆ, ಮುಹಮ್ಮದ್ ನಾಸೀಫ್ @ ನಸೀಫ್ (19) – ಜೋಕಟ್ಟೆ, ಮೊಹಮ್ಮದ್ ರಾಹೀಲ್ (18) – ಮೂಡುಶೆಡ್ಡೆ, ನಿಖಿಲ್ (18) – ಸದಾಶಿವ ನಗರ, ಎಂದು ಗುರುತಿಸಲಾಗಿದೆ.

    ಇವರಲ್ಲಿ ಮೂವರು ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕರಾಗಿದ್ದು, ಉಳಿದ 04 ಜನ ಆರೋಪಿಗಳನ್ನು ಬಂಧಿಸಿ, ಕಳವು ಮಾಡಿದ 6 ಬೈಕ್ ಮತ್ತು ಕೃತ್ಯಕ್ಕೆ ಬಳಸಿದ 3 ಬೈಕ್ ಸೇರಿ 9 ಬೈಕ್ ವಶಪಡಿಸಿಕೊಳ್ಳಲಾಗಿದ್ದು ಅವುಗಳ ಒಟ್ಟು ಮೌಲ್ಯ 4,50,000/- ರೂ ಎಂದು ಅಂದಾಜಿಸಲಾಗಿದೆ.

    ಐಷಾರಾಮಿ ಜೀವನಕ್ಕಾಗಿ ದುಬಾರಿ ಬೈಕ್‌ಗಳನ್ನು ಗುರಿಯಾಗಿಸಿ ಕದ್ದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ವಿಚಾರಣೆಯಲ್ಲಿ ಬಹಿರಂಗವಾಗಿದೆ. ಬಂಧಿತ 4 ಮಂದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

    ಈ ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ರಾಘವೇಂದ್ರ ಬೈಂದೂರ್ ರವರ ನೇತೃತ್ವದಲ್ಲಿ ಪಿ.ಎಸ್.ಐ ಮಾರುತಿ ಹಾಗೂ ಕ್ರೈಂ ಸಿಬ್ಬಂದಿಗಳಾದ ಲಕ್ಷ್ಮಣ ಸಾಲೋಟಗಿ, ಪುಟ್ಟರಾಮ್, ಸಾಗರ ದೇವಕತ್ತಿ, ಆಂಜನೇಯ ಕೆ.ಎಸ್, ರವರು ಭಾಗವಹಿಸಿದ್ದು, ಮಂಗಳೂರು ದಕ್ಷಿಣ ಠಾಣಾ ಅಧಿಕಾರಿ ಸಿಬ್ಬಂದಿಯವರು ಪತ್ತೆ ಕಾರ್ಯಕ್ಕೆ ಸಹಕರಿಸುತ್ತಾರೆ ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

    Post Views: 1

    Related Posts

    ಮಂಗಳೂರು: ಸಂಚಾರ ನಿಯಮ ಉಲ್ಲಂಘನೆ ದಂಡದ  ಹೆಸರಿನಲ್ಲಿ ₹1.71 ಲಕ್ಷ ಸೈಬರ್ ವಂಚನೆ

    October 25, 2026

    ಮಂಗಳೂರು: ಕೊಲೆ ಆರೋಪದ ಬೆದರಿಕೆ ಹಾಕಿ ಹಣ, ಆಸ್ತಿ ಸುಲಿಗೆಗೆ ಸಂಚು ಆರೋಪ- ಆರೋಪಿ ಅರೆಸ್ಟ್

    October 25, 2026

    ಬೆಳ್ತಂಗಡಿ: ಸೌಜನ್ಯ ಪ್ರಕರಣ ಮರು ತನಿಖೆ ಚುರುಕು; ತಾಯಿ ಕುಸುಮಾವತಿ ಡಿಎನ್ಎ ಪರೀಕ್ಷೆಗೆ ಕೋರ್ಟ್‌ಗೆ ಹಾಜರ್

    October 24, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಮಂಗಳೂರು: ದ್ವಿಚಕ್ರ ವಾಹನಗಳ ಕಳವು- 9 ದ್ವಿಚಕ್ರ ವಾಹನಗಳ ವಶಕ್ಕೆ

    October 25, 2026

    ಮಂಗಳೂರು: ಸಂಚಾರ ನಿಯಮ ಉಲ್ಲಂಘನೆ ದಂಡದ  ಹೆಸರಿನಲ್ಲಿ ₹1.71 ಲಕ್ಷ ಸೈಬರ್ ವಂಚನೆ

    October 25, 2026

    ಮಂಗಳೂರು: ಕೊಲೆ ಆರೋಪದ ಬೆದರಿಕೆ ಹಾಕಿ ಹಣ, ಆಸ್ತಿ ಸುಲಿಗೆಗೆ ಸಂಚು ಆರೋಪ- ಆರೋಪಿ ಅರೆಸ್ಟ್

    October 25, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.