Facebook Twitter Instagram
    Friday, November 13
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಆರು ವರ್ಷಗಳ ಬಳಿಕ ಕೊಲೆಯಾದವಳು ಜೀವಂತವಾಗಿ ಪತ್ತೆ !!ಪೊಲೀಸರ ಎಡವಟ್ಟು – ನಿರಪರಾಧಿಗೆ 2 ವರ್ಷ 5 ತಿಂಗಳು ಜೈಲು
    ಇತ್ತೀಚಿನ ಸುದ್ದಿ

    ಆರು ವರ್ಷಗಳ ಬಳಿಕ ಕೊಲೆಯಾದವಳು ಜೀವಂತವಾಗಿ ಪತ್ತೆ !!ಪೊಲೀಸರ ಎಡವಟ್ಟು – ನಿರಪರಾಧಿಗೆ 2 ವರ್ಷ 5 ತಿಂಗಳು ಜೈಲು

    November 13, 2026
    Share

    ಮಂಡ್ಯ: ಕೊಲೆಯಾಗಿದ್ದಾಳೆಂದು ಭಾವಿಸಲಾಗಿದ್ದ ಮಹಿಳೆಯೊಬ್ಬಳು ಆರು ವರ್ಷಗಳ ಬಳಿಕ ಜೀವಂತವಾಗಿ ಪತ್ತೆಯಾಗಿರುವ ಅಚ್ಚರಿಯ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯನ್ನು ಕೊಲೆ ಮಾಡಿದ್ದಾನೆಂಬ ಆರೋಪದ ಮೇಲೆ ಬಂಧನಕ್ಕೊಳಗಾಗಿ 2 ವರ್ಷ 5 ತಿಂಗಳು ಜೈಲಿನಲ್ಲಿ ಕಳೆದಿದ್ದ ರಾಜೇಶ್ ಎಂಬಾತನಿಗೆ ಇದೀಗ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ.

    ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ರಾಜೇಶ್ (ಕಾಳ) ಕೊಲೆ ಆರೋಪ ಎದುರಿಸಿದ್ದ ವ್ಯಕ್ತಿ. ಪಾಂಡವಪುರ ಪಟ್ಟಣದ ಮಂಜು ಎಂಬ ಮಹಿಳೆ 2019ರ ಜೂನ್ 24ರಂದು ತಂದೆಯ ಮನೆಯಿಂದ ನಾಪತ್ತೆಯಾಗಿದ್ದರು. ಜುಲೈ 3ರಂದು ಮಹಿಳೆಯ ತಂದೆ ನಾಗರಾಜು ನೀಡಿದ ದೂರಿನ ಆಧಾರದಲ್ಲಿ ಪಾಂಡವಪುರ ಪೊಲೀಸರು ರಾಜೇಶ್ ವಿರುದ್ಧ ಕೊಲೆ ಆರೋಪ ಹೊರಿಸಿ ಬಂಧಿಸಿದ್ದರು.

    ಮಗನೊಂದಿಗೆ ಸಲುಗೆಯಿಂದಿದ್ದ ರಾಜೇಶ್, ತನ್ನ ಮದುವೆಗೆ ಅಡ್ಡಿಯಾಗುತ್ತಾಳೆ ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎಂದು ತಂದೆ ದೂರಿನಲ್ಲಿ ಆರೋಪಿಸಿದ್ದರು. ಪ್ರಕರಣದಲ್ಲಿ ಬಂಧಿತನಾಗಿದ್ದ ರಾಜೇಶ್ ಸುಮಾರು 2 ವರ್ಷ 5 ತಿಂಗಳು ಜೈಲಿನಲ್ಲಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

    ಪ್ರಿಯಕರನೊಂದಿಗೆ ಎರಡನೇ ಮದುವೆ!

    ಇದೀಗ ನಾಪತ್ತೆಯಾಗಿದ್ದ ಮಂಜು ನಾಗಮಂಗಲ ತಾಲೂಕಿನ ಮಾಯಿಗೋನಹಳ್ಳಿಯಲ್ಲಿ ಎರಡನೇ ಪತಿಯೊಂದಿಗೆ ವಾಸಿಸುತ್ತಿರುವುದು ಪತ್ತೆಯಾಗಿದೆ. ಮೊದಲ ಪತಿ ಮಂಜುನಾಥ್ ಜತೆಗೆ ವೈವಾಹಿಕ ಜೀವನ ಇಷ್ಟವಿಲ್ಲದ ಕಾರಣ, ತಾನು ಪ್ರೀತಿಸುತ್ತಿದ್ದ ಚಾಮರಾಜನಗರದ ನಾಗೇಂದ್ರ ಎಂಬಾತನೊಂದಿಗೆ ಮದುವೆಯಾಗಿ ತಮಿಳುನಾಡಿನಲ್ಲಿ ಕೆಲ ವರ್ಷ ವಾಸಿಸಿದ್ದೆ. ಬಳಿಕ ಮಾಯಿಗೋನಹಳ್ಳಿಗೆ ಬಂದು ನೆಲೆಸಿದ್ದೇನೆ ಎಂದು ಮಂಜು ತಿಳಿಸಿದ್ದಾರೆ.

    ಅಲ್ಲದೆ, ತನ್ನ ತಂದೆ ನೀಡಿದ್ದ ನಾಪತ್ತೆ ಹಾಗೂ ಕೊಲೆ ದೂರಿನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಕೊಲೆ ಆರೋಪ ಎದುರಿಸಿದ್ದ ರಾಜೇಶ್‌ನಿಂದಲೂ ತನಗೆ ಯಾವುದೇ ತೊಂದರೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.

    ಮಂಜು ಜೀವಂತವಾಗಿರುವ ವಿಚಾರ ರಾಜೇಶ್ ಅವರ ತಂದೆಗೆ ತಿಳಿದುಬಂದ ಹಿನ್ನೆಲೆಯಲ್ಲಿ ಮಗ ಹಾಗೂ ವಕೀಲರೊಂದಿಗೆ ಗ್ರಾಮಕ್ಕೆ ತೆರಳಿ ಆಕೆಯನ್ನು ಪತ್ತೆಹಚ್ಚಿದ್ದಾರೆ.

    ಚಿತ್ರಹಿಂಸೆ ನೀಡಿ ತಪ್ಪೊಪ್ಪಿಗೆ ಪಡೆದ ಆರೋಪ!

    ಇನ್ನೊಂದೆಡೆ, ಪ್ರಕರಣದ ತನಿಖೆ ವೇಳೆ ಪೊಲೀಸರು ತನಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ರಾಜೇಶ್ ಆರೋಪಿಸಿದ್ದಾನೆ. ಪಾಂಡವಪುರ ಬಸ್ ನಿಲ್ದಾಣದಲ್ಲಿ ಮಂಜು ತನ್ನ ಮೊಬೈಲ್ ಪಡೆದು ಯಾರಿಗೋ ಕರೆ ಮಾಡಿದ್ದ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ತನ್ನನ್ನು ಬಂಧಿಸಲಾಗಿತ್ತು. ಮಾಡದ ಕೊಲೆಯನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಿ ವಿದ್ಯುತ್ ಶಾಕ್ ನೀಡಲಾಗಿತ್ತು. ಚಿತ್ರಹಿಂಸೆ ತಾಳಲಾರದೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದೆ ಎಂದು ರಾಜೇಶ್ ಆರೋಪಿಸಿದ್ದಾನೆ.

    ಮಹಿಳೆ ಜೀವಂತವಾಗಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತನಗೆ ನ್ಯಾಯ ದೊರೆಯಬೇಕು ಹಾಗೂ ಸುಳ್ಳು ದೂರು ನೀಡಿದವರು ಮತ್ತು ತನಿಖೆ ನಡೆಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬೆಂಡಿಗನವಿಲೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

    ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ:

    ರಾಜೇಶ್ ನೀಡಿದ ದೂರಿನ ಮೇರೆಗೆ ಬೆಂಡಿಗನವಿಲೆ ಪೊಲೀಸರು ಮಂಜು ಅವರನ್ನು ವಿಚಾರಣೆ ನಡೆಸಿ ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ. ಬಳಿಕ ಮಹಿಳೆಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದಾರೆ.

    ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಗಳು, ಮಹಿಳೆ ಜೀವಂತವಾಗಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಹಿಂದಿನ ತನಿಖೆಯಲ್ಲಿನ ಲೋಪಗಳ ಬಗ್ಗೆ

    ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಪ್ರಕರಣದ ಹಿಂದಿನ ತನಿಖಾಧಿಕಾರಿಯಾಗಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಭಾಕರ್ ನಿವೃತ್ತರಾಗಿದ್ದು, ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿ

    Post Views: 7

    Related Posts

    ಕಡಬದಲ್ಲಿ ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಆರೋಪ – ಇಬ್ಬರ ವಿರುದ್ಧ ದೂರು ದಾಖಲು!

    November 13, 2026

    ಮಂಗಳೂರು: ನಂತೂರು ಜಂಕ್ಷನ್‌ನಲ್ಲಿ ಅಪಘಾತ-ಲಾರಿಗೆ ಕಾರು ಢಿಕ್ಕಿ, ಇಬ್ಬರಿಗೆ ಗಂಭೀರ ಗಾಯ

    November 13, 2026

    ಧರ್ಮಸ್ಥಳ: ನೇತ್ರಾವತಿ ಸ್ನಾನಘಟ್ಟದ ಸಮೀಪ ಮಾನವನ ತಲೆಬುರುಡೆ ಪತ್ತೆ!!

    November 13, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಕಡಬದಲ್ಲಿ ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಆರೋಪ – ಇಬ್ಬರ ವಿರುದ್ಧ ದೂರು ದಾಖಲು!

    November 13, 2026

    ಆರು ವರ್ಷಗಳ ಬಳಿಕ ಕೊಲೆಯಾದವಳು ಜೀವಂತವಾಗಿ ಪತ್ತೆ !!ಪೊಲೀಸರ ಎಡವಟ್ಟು – ನಿರಪರಾಧಿಗೆ 2 ವರ್ಷ 5 ತಿಂಗಳು ಜೈಲು

    November 13, 2026

    ಮಂಗಳೂರು: ನಂತೂರು ಜಂಕ್ಷನ್‌ನಲ್ಲಿ ಅಪಘಾತ-ಲಾರಿಗೆ ಕಾರು ಢಿಕ್ಕಿ, ಇಬ್ಬರಿಗೆ ಗಂಭೀರ ಗಾಯ

    November 13, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.