Facebook Twitter Instagram
    Thursday, November 26
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ದೀಪೋತ್ಸವಕ್ಕೆ ಬಂದ ವೃದ್ಧನಿಗೆ ಸುತ್ತಿಗೆಯಿಂದ ಹಲ್ಲೆ, ಚಿನ್ನದ ಸರ ದೋಚಿ ಪರಾರಿ- ಆರೋಪಿ ಅರೆಸ್ಟ್
    ಇತ್ತೀಚಿನ ಸುದ್ದಿ

    ದೀಪೋತ್ಸವಕ್ಕೆ ಬಂದ ವೃದ್ಧನಿಗೆ ಸುತ್ತಿಗೆಯಿಂದ ಹಲ್ಲೆ, ಚಿನ್ನದ ಸರ ದೋಚಿ ಪರಾರಿ- ಆರೋಪಿ ಅರೆಸ್ಟ್

    November 26, 2026
    Share

    ಶಿರ್ವ: ಕುಂಜಾರುಗಿರಿ ದೇವಸ್ಥಾನದ ದೀಪೋತ್ಸವಕ್ಕೆ ಆಗಮಿಸಿದ್ದ 68 ವರ್ಷದ ವೃದ್ಧನ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ, ಸುಮಾರು 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.

    ಪಡುಬೆಳ್ಳೆಯ ಬಿ. ರಾಜಮೂರ್ತಿ ಭಟ್ (68) ಹಲ್ಲೆಗೊಳಗಾದವರು. ನ.24ರಂದು ಅವರು ಕುರ್ಕಾಲು ಗ್ರಾಮದ ಕುಂಜಾರುಗಿರಿ ದುರ್ಗಾದೇವಿ ದೇವಸ್ಥಾನದ ದೀಪೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೆ ಅವರಿಗೆ ಪರಿಚಯವಿದ್ದ ಮುರಳಿಕೃಷ್ಣ ಎಂಬಾತ ರಾತ್ರಿ ಸುಮಾರು 8:30ಕ್ಕೆ ಮಾತನಾಡುವುದಿದೆ ಎಂದು ಹೇಳಿ ದೇವಸ್ಥಾನದಿಂದ ಹೊರಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ತನ್ನ ಕಾರಿನಲ್ಲಿ ಕೂರಿಸಿಕೊಂಡಿದ್ದಾನೆ.

    ತಾನು ಸುಮಾರು 60 ಎಕರೆ ಜಾಗದಲ್ಲಿ ಭತ್ತದ ಬೇಸಾಯ ಮಾಡುತ್ತಿದ್ದು, ಅದನ್ನು 200 ಎಕರೆಗೆ ವಿಸ್ತರಿಸಲು 25 ಲಕ್ಷ ರೂ. ಅಗತ್ಯವಿದೆ. ಸಹಾಯ ಮಾಡುವಂತೆ ಮುರಳಿಕೃಷ್ಣ ಕೇಳಿದ್ದಾನೆ. ಇದಕ್ಕೆ ರಾಜಮೂರ್ತಿ ಭಟ್ ಒಪ್ಪದಿದ್ದಾಗ, ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರಗಳನ್ನು ದೋಚುವ ಉದ್ದೇಶದಿಂದ ಕಾರಿನೊಳಗೇ ಸುತ್ತಿಗೆಯಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ.

    ಹಲ್ಲೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ರಾಜಮೂರ್ತಿ ಭಟ್ ಅವರನ್ನು ಬೆನ್ನಟ್ಟಿ ದೂಡಿ, ಸುಮಾರು 20 ಗ್ರಾಂ ತೂಕದ ಚಿನ್ನದ ಸರ ಹಾಗೂ 28 ಗ್ರಾಂ ತೂಕದ ತುಳಸಿ ಮಣಿಗಳಿರುವ ಚಿನ್ನದ ಸರವನ್ನು ಕಿತ್ತುಕೊಂಡು ಆರೋಪಿ ಕಾರು ಸಹಿತ ಪರಾರಿಯಾಗಿದ್ದನು. ದೋಚಲಾದ ಚಿನ್ನಾಭರಣಗಳ ಒಟ್ಟು ಅಂದಾಜು ಮೌಲ್ಯ 4.50 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಲಾಗಿತ್ತು.

    ಪ್ರಕರಣದ ತನಿಖೆ ನಡೆಸಿದ ಶಿರ್ವ ಪೊಲೀಸರು, ಪಡುಬೆಳ್ಳೆ ಸಂಪತ್ ಬಾರ್ ಸಮೀಪದ ನಿವಾಸಿ ಮುರಳಿಕೃಷ್ಣ ಉಪಾಧ್ಯಾಯ (47) ಎಂಬಾತನನ್ನು ನ.25ರಂದು ಬಂಧಿಸಿದ್ದಾರೆ.

    ಆರೋಪಿಯಿಂದ ತುಳಸಿ ಮಣಿಗಳಿರುವ ತುಂಡಾದ ಚಿನ್ನದ ಸರ (ಅಂದಾಜು ಮೌಲ್ಯ 1.90 ಲಕ್ಷ ರೂ.) ಹಾಗೂ ತುಂಡಾದ ಹವಳದ ಚಿನ್ನದ ಸರ (ಅಂದಾಜು ಮೌಲ್ಯ 2.60 ಲಕ್ಷ ರೂ.) ಸೇರಿದಂತೆ ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

    ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 97/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 311, 309(6) ಹಾಗೂ 118(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

    Post Views: 12

    Related Posts

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ಜಾಲ ಪತ್ತೆ: ಹೊರಗುತ್ತಿಗೆ ಸಿಬ್ಬಂದಿ ಸಹಿತ ಮೂವರ ಬಂಧನ- ₹2.73 ಕೋಟಿ ಮೌಲ್ಯದ ಚಿನ್ನ, ನಗದು ವಶ

    November 26, 2026

    ಬೃಹತ್‌ ಡ್ರಗ್ಸ್ ಜಾಲ ಪತ್ತೆ: 11 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ, ಇಬ್ಬರು ಅರೆಸ್ಟ್!!

    November 25, 2026

    ಪುತ್ತೂರು: ಮೆಸ್ಕಾಂ ಅಧಿಕಾರಿಯಿಂದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ – ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು

    November 25, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ಜಾಲ ಪತ್ತೆ: ಹೊರಗುತ್ತಿಗೆ ಸಿಬ್ಬಂದಿ ಸಹಿತ ಮೂವರ ಬಂಧನ- ₹2.73 ಕೋಟಿ ಮೌಲ್ಯದ ಚಿನ್ನ, ನಗದು ವಶ

    November 26, 2026

    ದೀಪೋತ್ಸವಕ್ಕೆ ಬಂದ ವೃದ್ಧನಿಗೆ ಸುತ್ತಿಗೆಯಿಂದ ಹಲ್ಲೆ, ಚಿನ್ನದ ಸರ ದೋಚಿ ಪರಾರಿ- ಆರೋಪಿ ಅರೆಸ್ಟ್

    November 26, 2026

    ಬೃಹತ್‌ ಡ್ರಗ್ಸ್ ಜಾಲ ಪತ್ತೆ: 11 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ, ಇಬ್ಬರು ಅರೆಸ್ಟ್!!

    November 25, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.