Facebook Twitter Instagram
    Thursday, November 26
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮೂಡುಬಿದಿರೆ: ನಿರ್ಲಕ್ಷ್ಯದ ಚಾಲನೆಗೆ ಶಿಕ್ಷೆ, ಕಾರು ಚಾಲಕನಿಗೆ 6 ತಿಂಗಳ ಜೈಲು, ₹7,500 ದಂಡ
    ಇತ್ತೀಚಿನ ಸುದ್ದಿ

    ಮೂಡುಬಿದಿರೆ: ನಿರ್ಲಕ್ಷ್ಯದ ಚಾಲನೆಗೆ ಶಿಕ್ಷೆ, ಕಾರು ಚಾಲಕನಿಗೆ 6 ತಿಂಗಳ ಜೈಲು, ₹7,500 ದಂಡ

    November 26, 2026
    Share

    ಮೂಡುಬಿದಿರೆ: ನಿರ್ಲಕ್ಷ್ಯದ ಚಾಲನೆಯಿಂದ ವ್ಯಕ್ತಿಯೊಬ್ಬರ ಸಾವಿಗೆ ಹಾಗೂ ಮತ್ತೊಬ್ಬರು ಗಂಭಿಯಗಾಯಗೊಳ್ಳಲು ಕಾರಣನಾದ ಕಾರು ಚಾಲಕನಿಗೆ ಮೂಡುಬಿದಿರೆಯ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯವು 6 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ 7,500 ರೂ.ದಂಡ ವಿಧಿಸಿ ತೀರ್ಪು ನೀಡಿದೆ. ತೌಸಿಫ್ ಅಹ್ಮದ್ ಶಿಕ್ಷೆಗೊಳಗಾದ ಅರೋಪಿ ಎಂದು ತಿಳಿದುಬಂದಿದೆ.

    2022ರ ಜನವರಿ 20ರಂದು ಬೆಳಿಗ್ಗೆ ಸುಮಾರು 6.30ರ ವೇಳೆಗೆ ಈ ಅಪಘಾತ ಸಂಭವಿಸಿತ್ತು. ವಾಮನ ದೇವಾಡಿಗ ಎಂಬವರು ತಮ್ಮ ಬೈಕ್‌ನಲ್ಲಿ ಕಲ್ಲಬೆಟ್ಟು ಎಂ.ಕೆ. ಶೆಟ್ಟಿ ಶಾಲೆಗೆ ಹೋಗುವ ಕ್ರಾಸ್ ರಸ್ತೆಯ ಬಳಿ, ಉಡುಪಿ ಕಡೆಯಿಂದ ಮೂಡುಬಿದಿರೆ ಮಾರ್ಗವಾಗಿ ವೇಣೂರು ಕಡೆಗೆ ಹೋಗುತ್ತಿದ್ದರು. ಈ ವೇಳೆ ವೇಣೂರು ಕಡೆಯಿಂದ ಮೂಡುಬಿದಿರೆ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿಕೊಂಡು ಬಂದ ಆರೋಪಿ ತೌಸಿಫ್ ಅಹ್ಮದ್, ರಸ್ತೆಯ ಬಲಬದಿಗೆ ಬಂದು ವಾಮನ ದೇವಾಡಿಗರ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ.

    ಡಿಕ್ಕಿಯ ರಭಸಕ್ಕೆ ತಲೆಗೆ ಗಂಭೀರ ಗಾಯಗೊಂಡ ವಾಮನ ದೇವಾಡಿಗ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದರು. ಅಲ್ಲದೆ, ಕಾರಿನಲ್ಲಿದ್ದ ಸಾಕ್ಷಿ ಕಲಂದರ್ ಎಂಬವರ ತಲೆಯ ಎಡಬದಿ ಹಾಗೂ ಎಡ ಕೈಗೆ ಗಂಭೀರ ಗಾಯಗಳಾಗಿದ್ದವು.

    ಈ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಅಂದಿನ ಪೊಲೀಸ್ ನಿರೀಕ್ಷಕರಾದ ನಿರಂಜನ್ ಕುಮಾ‌ರ್ ಕೆ.ಇ. ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 6ತಿಂಗಳ ಸಾದಾ ಜೈಲು ಹಾಗೂ 7,500ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಶೋಭಾ ಎಸ್. ಅವರು ವಾದ ಮಂಡಿಸಿದ್ದರು.

    Post Views: 1

    Related Posts

    ಉಪ್ಪಳದಲ್ಲಿ ಮಾದಕವಸ್ತು ಸಾಗಾಟ: ಮೂವರು ಅರೆಸ್ಟ್!!

    November 26, 2026

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ಜಾಲ ಪತ್ತೆ: ಹೊರಗುತ್ತಿಗೆ ಸಿಬ್ಬಂದಿ ಸಹಿತ ಮೂವರ ಬಂಧನ- ₹2.73 ಕೋಟಿ ಮೌಲ್ಯದ ಚಿನ್ನ, ನಗದು ವಶ

    November 26, 2026

    ದೀಪೋತ್ಸವಕ್ಕೆ ಬಂದ ವೃದ್ಧನಿಗೆ ಸುತ್ತಿಗೆಯಿಂದ ಹಲ್ಲೆ, ಚಿನ್ನದ ಸರ ದೋಚಿ ಪರಾರಿ- ಆರೋಪಿ ಅರೆಸ್ಟ್

    November 26, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಮೂಡುಬಿದಿರೆ: ನಿರ್ಲಕ್ಷ್ಯದ ಚಾಲನೆಗೆ ಶಿಕ್ಷೆ, ಕಾರು ಚಾಲಕನಿಗೆ 6 ತಿಂಗಳ ಜೈಲು, ₹7,500 ದಂಡ

    November 26, 2026

    ಉಪ್ಪಳದಲ್ಲಿ ಮಾದಕವಸ್ತು ಸಾಗಾಟ: ಮೂವರು ಅರೆಸ್ಟ್!!

    November 26, 2026

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ಜಾಲ ಪತ್ತೆ: ಹೊರಗುತ್ತಿಗೆ ಸಿಬ್ಬಂದಿ ಸಹಿತ ಮೂವರ ಬಂಧನ- ₹2.73 ಕೋಟಿ ಮೌಲ್ಯದ ಚಿನ್ನ, ನಗದು ವಶ

    November 26, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.