Facebook Twitter Instagram
    Friday, April 24
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಹಿಜಾಬ್‌ ಪ್ರಕರಣ ಹಿಂದೆ ಪಿಎಫ್‌ಐ ಸಂಘಟನೆ ಇದೆ: ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ವಾದ
    ಇತ್ತೀಚಿನ ಸುದ್ದಿ

    ಹಿಜಾಬ್‌ ಪ್ರಕರಣ ಹಿಂದೆ ಪಿಎಫ್‌ಐ ಸಂಘಟನೆ ಇದೆ: ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ವಾದ

    September 21, 2022
    Share

    ನವದೆಹಲಿ: ಹಿಜಾಬ್‌ ಪ್ರಕರಣ ಬಹುದೊಡ್ಡ ಪಿತೂರಿಯಾಗಿದ್ದು, ಇದರ ಹಿಂದೆ ಪಿಎಫ್‌ಐ ಸಂಘಟನೆ ಇದೆ. ಧಾರ್ಮಿಕ ಸಾಮರಸ್ಯವನ್ನು ಕದಡಿ ಆಂದೋಲನ ಸೃಷ್ಟಿ ಮಾಡುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮೊದಲು ಹಿಜಾಬ್‌ ಚಳವಳಿ ಪ್ರಾರಂಭಿಸಿ ಬಳಿಕ ಶಿಕ್ಷಣ ಸಂಸ್ಥೆಗಳಲ್ಲಿ ಮುಂದುವರಿಸಲಾಗಿತ್ತು ಎಂದು ರಾಜ್ಯ ಸರ್ಕಾರದ ಪರ ಸಾಲಿಸಿಟರ್‌ ಜನರಲ್‌ (Solicitor General) ತುಷಾರ್‌ ಮೆಹ್ತಾ ಅವರು ಸುಪ್ರೀಂ ಕೋರ್ಟಿನಲ್ಲಿ ವಾದಿಸಿದ್ದಾರೆ.

    ಸತತ 8 ದಿನಗಳಿಂದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಹೇಮಂತ್‌ ಗುಪ್ತಾ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ಹಿಜಾಬ್‌ ಅರ್ಜಿ ವಿಚಾರಣೆ ನಡೆಯುತ್ತಿದ್ದು, ಅರ್ಜಿದಾರರ ಪರವಾಗಿ ಸತತ 8 ದಿನಗಳ ಕಾಲ ಹಿರಿಯ ವಕೀಲರಾದ ಕಪಿಲ್‌ ಸಿಬಲ್‌, ದುಷ್ಯಂತ್‌ ದವೆ, ದೇವದತ್‌ ಕಾಮತ್‌, ಸಲ್ಮಾನ್‌ ಖುರ್ಷಿದ್‌ ಸೇರಿ 17 ವಕೀಲರು ವಾದ ಮಂಡಿಸಿದರು.

    ಮಂಗಳವಾರ ರಾಜ್ಯ ಸರ್ಕಾರದ ಪರ ತುಷಾರ್‌ ಮೆಹ್ತಾ ವಾದ ಮಂಡಿಸಿ, ಆಂದೋಲನ ರೂಪಿಸುವ ಉದ್ದೇಶದಿಂದಲೇ ಹಿಜಾಬ್‌ ಹೋರಾಟ ರೂಪಿಸಲಾಗಿತ್ತು. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಪಿಎಫ್‌ಐ ಇದರ ಭಾಗ ಆಗಿತ್ತು. ಇದು ಸ್ವಯಂಪ್ರೇರಿತ ಕೃತ್ಯವಾಗಿರಲಿಲ್ಲ. ಹಿಜಾಬ್‌ ಧರಿಸಲು ಪ್ರಾರಂಭಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಸಂದೇಶಗಳನ್ನು ರವಾನಿಸಲಾಗಿತ್ತು. ಮಕ್ಕಳು ಕೂಡ ಅವರ ಸಲಹೆಯಂತೆ ವರ್ತಿಸಿದರು. ಜೊತೆಗೆ ಈ ಸಂಬಂಧ ಕೆಲವು ದಾಖಲೆಗಳನ್ನು ಕವರ್‌ನಲ್ಲಿ ಪೀಠಕ್ಕೆ ಸಲ್ಲಿಸಿದ್ದೇನೆ. ಇನ್ನು 2021ರ ತನಕ ಯಾವುದೇ ವಿದ್ಯಾರ್ಥಿನಿ ಹಿಜಾಬ್‌ ಧರಿಸಿರಲಿಲ್ಲ. ಆಗ ಹಿಜಾಬ್‌ ಕುರಿತಾಗಿ ಪ್ರಶ್ನೆಗಳು ಉದ್ಬವಿಸಿರಲಿಲ್ಲ ಎಂದು ನ್ಯಾಯಪೀಠದ ಮುಂದೆ ವಿವರಿಸಿದರು.

    ಯಾವುದೇ ಧರ್ಮಾಚರಣೆ ಇದ್ದರೂ ಅದರ ಅನುಸರಣೆ ಮತ್ತು ಅನುಕರಣೆ ಕಾನೂನಿನ ಮಿತಿಯಲ್ಲಿದೆ. ರಾಜ್ಯ ಸರ್ಕಾರದ ಆದೇಶ ನಿರ್ದಿಷ್ಟ ಸಮುದಾಯದ ನಿರ್ದಿಷ್ಟ ಉಡುಪು ಧರಿಸಲು ನಿಯಂತ್ರಣ ಹೇರುವುದಿಲ್ಲ. ಬದಲಿಗೆ ಸಮವಸ್ತ್ರದ ಅಗತ್ಯದ ಬಗ್ಗೆ ಹೇಳಿದೆ. ಕರ್ನಾಟಕ ಸರ್ಕಾರ ಕೇವಲ ಹಿಜಾಬ್‌ ಧರಿಸುವುದಕ್ಕೆ ಮಾತ್ರ ನಿರ್ಬಂಧ ವಿಧಿಸಿದೆ ಎನ್ನುವುದು ಅಪಚಾರವಾಗುತ್ತದೆ. ಇತರೆ ಸಮುದಾಯದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುವುದಕ್ಕೂ ನಿರ್ಬಂಧ ವಿಧಿಸಲಾಗಿದೆ ಎಂದರು.

    ಇದಕ್ಕೂ ಮೊದಲು ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ದುಷ್ಯಂತ್‌ ದವೆ, ಸಮವಸ್ತ್ರ ಸಮಾಜದ ಬಹುಪಾಲು ವರ್ಗದ ಮೇಲೆ ಅನಗತ್ಯ ಹೊರೆ. ಅನೇಕ ಜನರ ಬಳಿ ಸಮವಸ್ತ್ರ ಖರೀದಿಸಲು ಹಣವಿಲ್ಲ ಎಂದರು. ಇದೇ ವೇಳೆ ಪ್ರಶ್ನಿಸಿದ ನ್ಯಾಯಮೂರ್ತಿ ಹೇಮಂತ್‌ ಗುಪ್ತಾ, ಅಸಮಾನತೆ ತಪ್ಪಿಸಲು ಸಮವಸ್ತ್ರ ಅಗತ್ಯ. ಇಲ್ಲಿ ಬಡವರು, ಶ್ರೀಮಂತ ಎಂದು ಎಣಿಸಲು ಸಾಧ್ಯವಿಲ್ಲ ಎಂದೂ ಹೇಳಿದರು.

    ಹಿಜಾಬ್‌ ನಿಷೇಧಿಸಿದ್ದಕ್ಕೆ 17000 ಮಂದಿ ಪರೀಕ್ಷೆ ಗೈರು!ಇನ್ನು ಹಿಜಾಬ್‌ ಧರಿಸಿದ ಮಹಿಳೆಯರು ಯಾರ ಹಕ್ಕುಗಳನ್ನು ಉಲ್ಲಂಫಿಸುತ್ತಾರೆ ಎಂದು ದೇವದತ್‌ ಅವರು ಪೀಠದ ಮುಂದೆ ವಾದ ಇಟ್ಟರು. ಅಲ್ಲದೇ 75 ವರ್ಷಗಳ ಬಳಿಕ ರಾಜ್ಯವು ಏಕಾಏಕಿ ಈ ನಿರ್ಬಂಧವನ್ನು ಹೇರಿದ್ದು ಏಕೆ ? ಅಲ್ಪಸಂಖ್ಯಾತರನ್ನು ಕಡೆಗಣಿಸುವ ಉದ್ದೇಶ ಇತ್ತು ಎಂದರು. ಹಾಗೂ, ಶಾಲಾ ಮಕ್ಕಳು ಕಟ್ಟುನಿಟ್ಟು ಶಿಸ್ತು ಇರುವ ರೆಜಿಮೆಂಟ್‌ ಪಡೆಗಳ ಭಾಗವಲ್ಲ ಎಂದೂ ಸುಪ್ರೀಂಕೋರ್ಟ್‌ ಪೀಠದ ಮುಂದೆ ವಾದ ಮಂಡಿಸಿದರು. ಕರ್ನಾಟಕ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಕೂಡ ವಾದ ಮಂಡಿಸಿದರು. ಬಳಿಕ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಯಿತು.

    Post Views: 193

    Related Posts

    DrDevansAcademy.org ನಿಂದ ವೈದ್ಯಕೀಯ ಶಿಕ್ಷಣಕ್ಕೆ ಕ್ರಾಂತಿಕಾರಿ ಕ್ಲೌಡ್ ಆಧಾರಿತ ಸಂವಾದಾತ್ಮಕ ಕಲಿಕಾ ವೇದಿಕೆ ಬಿಡುಗಡೆ

    April 23, 2026

    ವಿಡಿಯೋ ಬೆದರಿಕೆ: ₹1.5 ಕೋಟಿ ಸುಲಿಗೆ ಆರೋಪ, ಇನ್‌ಫ್ಲೂಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ ಪ್ರಕರಣ

    April 23, 2026

    ಚುನಾವಣಾ ಹಂತದಲ್ಲಿ ಉದ್ವಿಗ್ನತೆ: ಮತದಾನ ವೇಳೆ ಕಚ್ಚಾ ಬಾಂಬ್ ದಾಳಿ, ಹಲವರಿಗೆ ಗಾಯ

    April 23, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.