ಉಡುಪಿ: ಪಿಎಫ್ ಐ ಸಂಘಟನೆ ಮುಖಂಡರ ಮನೆ ಮೇಲಿನ ದಾಳಿಯನ್ನು ಖಂಡಿಸಿ ಯಾವುದೇ ಅನುಮತಿ ಪಡೆಯದೇ ಉಡುಪಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೈಲಕೆರೆ ಮಲ್ಪೆ ನಿವಾಸಿ ಸಾದೀಕ್ ಅಹಮ್ಮದ್, ಮಲ್ಪೆ ಹೊಸತೋಟ ನಿವಾಸಿ ಅಫ್ರೋಜ್ ಕೆ,ಕಂಬ್ಲತೋಟ ನಿವಾಸಿ ಇಲಿಯಾಸ್ ಸಾಹೇಬ್, ಬ್ರಹ್ಮಾವರ ಸಾಸ್ತನ ನಿವಾಸಿ ಇರ್ಷಾದ್, ಸಾಸ್ತಾನ ಕೊಡಿರಸ್ತೆ ನಿವಾಸಿ ಫಯಾಜ್ ಅಹಮ್ಮದ್,ಅಂಬಲಪಾಡಿ ನಿವಾಸಿ ಮಹಮ್ಮದ್ ಅಶ್ರಫ್, ದೊಡ್ಡನಗುಡ್ಡೆ ನಿವಾಸಿ ಎ. ಹಾರೂನ್ ರಶೀದ್ ,ಬೈಲೂರು ನಿವಾಸಿ ಮೊಹಮ್ಮದ್ ಜುರೈಜ್, ಕೊಡವೂರು ಬಹುತೋಟ ನಿವಾಸಿ ಇಶಾಕ್ ಕಿದ್ವಾಯಿ, ಗುಂಡ್ಮಿ ನಿವಾಸಿ ಶೌಕತ್ ಅಲಿ, ಮಲ್ಪೆ ಬೈಲಕೆರೆ ರಸ್ತೆ ನಿವಾಸಿ ಮಹಮ್ಮದ್ ಝಹೀದ್ ಎಂಬವರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನಲ್ಲಿ ನಡೆದ ಎನ್ಐಎ ದಾಳಿಯನ್ನು ಖಂಡಿಸಿ ಪಿಎಫ್ಐ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆಗೆ ನಿರ್ಧರಿಸಿದ್ದರು. ಆದ್ರೆ ಪೊಲೀಸರು ಪ್ರತಿಭಟನಕಾರರ ಮನವೊಲಿಸಿ, ಚದುರಿಸಿದ್ದರು. ಬಳಿಕ ಡಯಾನಾ ಸರ್ಕಲ್ ಬಳಿ ಗುಂಪುಗೂಡಿದ ಪಿಎಫ್ ಐ ಕಾರ್ಯಕರ್ತರು, ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಉಡುಪಿ ನಗರ ಠಾಣಾ ಪೊಲೀಸರು ಲಾಠಿ ಚಾರ್ಜ್ ಮಾಡಿದ್ರು. ಬಳಿಕ ಸಂಘಟನೆ ಮುಖಂಡರನ್ನು ಬಂಧಿಸಿದ್ದರು. ಇದೀಗ ವಾಹನ ಸಂಚಾರ ತಡೆದು ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ.