Facebook Twitter Instagram
    Saturday, June 13
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್‌ನಲ್ಲಿ ದೈವಾರಾಧನೆಗೆ ಅಪಮಾನ; ಟ್ರೋಲ್ ಬಳಿಕ ಪೇಜ್ ಡಿಲಿಟ್
    ಇತ್ತೀಚಿನ ಸುದ್ದಿ

    ಮಂಗಳೂರು: ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್‌ನಲ್ಲಿ ದೈವಾರಾಧನೆಗೆ ಅಪಮಾನ; ಟ್ರೋಲ್ ಬಳಿಕ ಪೇಜ್ ಡಿಲಿಟ್

    September 26, 2022
    Share

    ಮಂಗಳೂರು: ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್‌ನಲ್ಲಿ ದೈವಾರಾಧನೆ ವಿಚಾರದಲ್ಲಿ ಅನುಚಿತವಾಗಿ ಬರೆಯಲಾಗಿದ್ದು, ಇದನ್ನು ತುಳುವಿನ ಟ್ರೋಲ್ ಪೇಜ್‌ನವರು ಟ್ರೋಲ್ ಮಾಡಿದ್ದರು. ಇದು ಗಮನಕ್ಕೆ ಬರುತ್ತಿದ್ದಂತೆ ಪ್ರವಾಸೋದ್ಯಮ ಇಲಾಖೆಯು ವೆಬ್‌ಸೈಟ್‌ನಲ್ಲಿನ ‘ಭೂತ ಕೋಲ’ ಪೇಜ್ ಅನ್ನು ಡಿಲಿಟ್ ಮಾಡಿದೆ.

    ಭೂತದ ಕೊಳ/ ಭೂತಾರಾಧನೆ ಎಂಬ ತಲೆಬರಹದಲ್ಲಿರುವ ದೈವಾರಾಧನೆ ವಿಚಾರ ವಿಚಾರ ಟ್ರೋಲ್ ಆಗಿದೆ. ಇಲ್ಲಿ ಭೂತದ ಕೋಲ ಎಂಬ ಪದವು ಭೂತದ ಕೊಳ ಎಂದಾಗಿದೆ‌. ಅಲ್ಲದೆ ಭೂತಾರಾಧನೆಯನ್ನು ದೆವ್ವದ ಆರಾಧನೆ ಎಂದು ಬರೆಯಲಾಗಿದೆ. ಭೂತಗಳನ್ನು ಪ್ರತಿನಿಧಿಸುವ ವಿಗ್ರಹಗಳನ್ನು ಮೆರವಣಿಗೆಯಲ್ಲಿ ಡ್ರಮ್‌ಗಳನ್ನು ಬಾರಿಸುವುದು ಮತ್ತು ಪಟಾಕಿಗಳನ್ನು ಸಿಡಿಸುವ ಮೂಲಕ ಮೆರವಣಿಗೆ ಮಾಡುತ್ತಾರೆ. ಕತ್ತಿ ಮತ್ತು ಗಂಟೆಗಳೊಂದಿಗೆ ಕುಣಿಯುತ್ತ ನರ್ತಕಿ ತಾನು ಪ್ರತಿನಿಧಿಸುವ ದೆವ್ವದ ಅನುಕರಣೆಯಲ್ಲಿ ಸುತ್ತುತ್ತಾನೆ‌. ಉದ್ರಕ್ತವಾಗಿ ಮೇಲಕ್ಕೆ ಕೆಳಕ್ಕೆ ಹೆಜ್ಜೆ ಹಾಕುತ್ತಾನೆ ಎಂದು ಆಕ್ಷೇಪಾರ್ಹವಾಗಿ ಬರೆಯಲಾಗಿದೆ.

    ತುಳುವಿನ ಟ್ರೋಲ್ ಪೇಜ್ @Tuluvas speaks ಕರ್ನಾಟಕ ಸರಕಾರದಿಂದ ತುಳುವರ ದೈವಕ್ಕೆ ಅವಮಾನ ಎಂದು ಈ ಬರಹದ ಪೇಜ್ ಅನ್ನು ಪೋಸ್ಟ್ ಮಾಡಿ ಟ್ರೋಲ್ ಮಾಡಿದೆ. ನಾವು ನಂಬುವ ದೈವಗಳನ್ನು, ಸತ್ಯಗಳನ್ನು ದೆವ್ವವೆಂದು ಪ್ರವಾಸೋದ್ಯಮ ಇಲಾಖೆ ಹೇಳಿದೆ. ಅಲ್ಲದೆ ದೆವ್ವ?, ಕತ್ತಿ?, ಕೊಳ?, ಡ್ರಮ್, ನರ್ತಕಿ? ಎಂದು ಆಕ್ಷೇಪವುಳ್ಳ ಪದ ಬಳಕೆ ಮಾಡಿದೆ. ತುಳುವರನ್ನು ಅರ್ಥ ಮಾಡಿಕೊಳ್ಳದ ದರಿದ್ರ ರಾಜ್ಯ ಬೇಕೇ ನಮಗೆ ? ಎಂದು ಪ್ರಶ್ನಿಸಿದೆ.

    ಈ ಟ್ರೋಲ್ ಪೇಜ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತನ್ನ ವೆಬ್ ಸೈಟ್ ನ ಪೇಜ್ ಟ್ರೋಲ್ ಆಗುತ್ತಿದ್ದಂತೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಭೂತ ಕೋಲ ಎಂಬ ಪೇಜ್ ಅನ್ನು ಡಿಲಿಟ್ ಮಾಡಿದೆ.

    ಈ ಟ್ರೋಲ್ ಪೇಜ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತನ್ನ ವೆಬ್ ಸೈಟ್ ನ ಪೇಜ್ ಟ್ರೋಲ್ ಆಗುತ್ತಿದ್ದಂತೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಭೂತ ಕೋಲ ಎಂಬ ಪೇಜ್ ಅನ್ನು ಡಿಲಿಟ್ ಮಾಡಿದೆ.

    Post Views: 251

    Related Posts

    ಬಜಪೆ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ನಿರಂತರ ಅತ್ಯಾಚಾರ- ಪೋಕ್ಸೋ ಪ್ರಕರಣ ದಾಖಲು

    June 13, 2026

    ಬಂಟ್ವಾಳ : ಅಸ್ವಸ್ಥಗೊಂಡ ವ್ಯಕ್ತಿಯ ಜೀವ ಉಳಿಸಿದ ನೈಟ್ ಬೀಟ್ ಸಿಬ್ಬಂದಿ – ವ್ಯಾಪಕ ಶ್ಲಾಘನೆ

    June 13, 2026

    ಬೆಳ್ತಂಗಡಿ: ವಿವಾಹಿತ ಮಹಿಳೆಯ ಅತ್ಯಾಚಾರ ಪ್ರಕರಣ; ಅಂಚೆ ವಿತರಕ ಸುರೇಶ್ ಬಂಧನ

    June 12, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಬಜಪೆ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ನಿರಂತರ ಅತ್ಯಾಚಾರ- ಪೋಕ್ಸೋ ಪ್ರಕರಣ ದಾಖಲು

    June 13, 2026

    ಬಂಟ್ವಾಳ : ಅಸ್ವಸ್ಥಗೊಂಡ ವ್ಯಕ್ತಿಯ ಜೀವ ಉಳಿಸಿದ ನೈಟ್ ಬೀಟ್ ಸಿಬ್ಬಂದಿ – ವ್ಯಾಪಕ ಶ್ಲಾಘನೆ

    June 13, 2026

    ಬೆಳ್ತಂಗಡಿ: ವಿವಾಹಿತ ಮಹಿಳೆಯ ಅತ್ಯಾಚಾರ ಪ್ರಕರಣ; ಅಂಚೆ ವಿತರಕ ಸುರೇಶ್ ಬಂಧನ

    June 12, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.