Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಪಡುಬಿದ್ರಿ: ವರದಕ್ಷಿಣೆ ಕಿರುಕುಳ, ಕೊಲೆ ಯತ್ನ ದೂರು ದಾಖಲು..!
    ಇತ್ತೀಚಿನ ಸುದ್ದಿ

    ಪಡುಬಿದ್ರಿ: ವರದಕ್ಷಿಣೆ ಕಿರುಕುಳ, ಕೊಲೆ ಯತ್ನ ದೂರು ದಾಖಲು..!

    September 28, 2022
    Share

    ಪಡುಬಿದ್ರಿ: ನಾಲ್ಕು ವರ್ಷಗಳ ಹಿಂದೆ ಉಚ್ಚಿಲ ಪೊಲ್ಯ ನಿವಾಸಿ ಇರ್ಫಾನ್‌ ಶೇಖ್‌ ಅವರನ್ನು ವಿವಾಹವಾಗಿದ್ದ ಝಾಯಿದಾ (27) ಅವರು ಗಂಡ, ಅತ್ತೆ, ಮಾವ, ಬಾವ ಹಾಗೂ ಆತನ ಹೆಂಡತಿ ಸೇರಿ ಐವರ ವಿರುದ್ಧ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಕೊಲೆಯತ್ನದ ದೂರನ್ನು ದಾಖಲಿಸಿದ್ದಾರೆ.

    ತನಗೆ ಗಂಡನೂ ಸೇರಿ ಅತ್ತೆ ಮನೆಯವರು ನಿರಂತರ 5 ಲಕ್ಷ ರೂ. ನಗದು ಹಾಗೂ ಚಿನ್ನವನ್ನು ತರುವಂತೆ ಕಿರುಕುಳ ನೀಡುತ್ತಿದ್ದರು. ಸೆ. 25ರ ರಾತ್ರಿ ತನ್ನನ್ನು ಕೊಲ್ಲುವ ಯತ್ನವನ್ನೂ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

    ಕಳೆದ ನಾಲ್ಕು ವರ್ಷಗಳಿಂದಲೂ ಈ ಕಿರುಕುಳವು ನಡೆಯುತ್ತಲೇ ಬಂದಿದೆ. ಈಗ ತಾನು ಮೂರು ವರ್ಷದ ಗಂಡು ಮಗುವಿನ ತಾಯಿಯಾಗಿದ್ದು, ಸೆ. 25ರ ರಾತ್ರಿ ಮಾವ ಸುಲೈಮಾನ್‌ ಶೇಖ್‌, ಅತ್ತೆ ಆಲೀಮಾ, ಬಾವ ಅಫ್ಜಲ್‌ ಶೇಖ್‌ ಹಾಗೂ ಆತನ ಪತ್ನಿ ಸಬೀನಾ ಒಟ್ಟು ಸೇರಿ ಕುತ್ತಿಗೆ ಹಿಸುಕಿ, ಕೈಬೆರಳನ್ನು ತಿರುಚಿ, ಸೀಮೆ ಎಣ್ಣೆ ಸುರಿದು ಸುಡಲು ಯತ್ನಿಸಿದ್ದಾರೆ. ಬಾವನ ಹೆಂಡ್ತಿ ತಲೆಗೂದಲನ್ನು ಎಳೆದು ಸುತ್ತಿಗೆಯಿಂದ ಹೆಗಲಿಗೆ ಹೊಡೆದಿದ್ದಾರೆ. ಬಾವ ಅಫ್ಜಲ್‌ ಶೇಖ್‌ ಕೈಯಿಂದ, ಮರದ ಸೋಂಟೆಯಿಂದ ಹೊಡೆದಿದ್ದಾರೆ.

    ಅವರಿಂದ ಬಿಡಿಸಿಕೊಂಡು ಮಗುವನ್ನೆತ್ತಿಕೊಂಡು ಹೊರ ಹೋಗಿ ರಿಕ್ಷಾದಲ್ಲಿ ತಾಯಿ ಮನೆ ನಿಟ್ಟೆಗೆ ಹೋಗಿದ್ದು, ಸೆ. 26ರಂದು ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವೆ ಎಂದು ಝಾಹಿದಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಡುಬಿದ್ರಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

    Post Views: 198

    Related Posts

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026

    ಮಂಗಳೂರು: ನಿವೃತ್ತ ಬ್ಯಾಂಕ್ ಮಹಿಳಾ ಉದ್ಯೋಗಿಗೆ ಸೈಬರ್ ವಂಚನೆ

    March 6, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.