ಉಡುಪಿ: ಸುಸಜ್ಜಿತ ಮೀನುಗಾರಿಕಾ ಜೆಟ್ಟಿ ಬೇಕು ಅನ್ನೋದು ಉಡುಪಿಯ ಗಂಗೊಳ್ಳಿಯ ಮೀನುಗಾರರ ಬಹುವರ್ಷದ ಬೇಡಿಕೆ. ಮೀನುಗಾರರ ಕನಸಿನ ಜೆಟ್ಟಿಗೆ ಅಂತ ಸರ್ಕಾರದಿಂದ 12 ಕೋಟಿ ಬಿಡುಗಡೆ ಆಗಿ, ಕಾಮಗಾರಿಯೂ ನಡೆಯುತ್ತಿದೆ. ಆದ್ರೆ ಅಧಿಕಾರಿಗಳ ಲಅವೈಜ್ಞಾನಿಕ ಕಾಮಗಾರಿಯಿಂದ ನಿರ್ಮಾಣ ಹಂತದಲ್ಲಿದ್ದ ಜಟ್ಟಿ ನೋಡು ನೋಡುತ್ತಲೇ ಕುಸಿದು ಬಿದ್ದಿದೆ.
ಈ ನಡುವೆ ಮೀನುಗಾರ ಜಟ್ಟಿ ನಿರ್ಮಾಣದಲ್ಲೂ ಪರ್ಸೆಂಟೇಜ್ ಹೋಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಜೆಟ್ಟಿ ಕುಸಿತ ಕಂಡು ಮೀನುಗಾರರು ಆಕ್ರೋಶ ಹೊರಹಾಕಿದ್ದಾರೆ. ಹೊಟ್ಟೆಗೆ ಹಿಟ್ಟು ನೀಡುಲು ಸಹಕಾರಿಯಾಗಿದ್ದ ಜಟ್ಟಿ ಕುಸಿದು ಹೋಯಿತಲ್ಲಾ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಜೆಟ್ಟಿ ಅನ್ನೋದು ಮತ್ಸ್ಯ ಬೇಟೆ ಮುಗಿದ ಬಳಿಕ ಮೀನುಗಳನ್ನು ಖಾಲಿ ಮಾಡಲು ಹಾಗೂ ಹಡಗು, ದೋಣಿಗಳು ತಂಗಲು ಇರೋ ಪ್ರದೇಶ.