ಗಾಂಧಿನಗರ: ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್ ಭಾರತದಲ್ಲಿ ಓಮಿಕ್ರಾನ್ ಹೊಸ ರೂಪಾಂತರ BF.7ನ ಮೊದಲ ಪ್ರಕರಣವನ್ನು ಪತ್ತೆ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್‌ನ ಹಿರಿಯ ವಿಜ್ಞಾನಿ ಡಾ ಮಾಧವಿ ಜೋಶಿ ಅವರು, ಜನರು ಭಯಭೀತರಾಗಬಾರದು. ಆದರೆ ಮಾಸ್ಕ್ ಧರಿಸಲು, ಗುಂಪುಗೂಡುವುದನ್ನು ತಪ್ಪಿಸಬೇಕು ಹಾಗೂ ಹ್ಯಾಂಡ್ ಸ್ಯಾನಿಟೈಸರ್ ನೈರ್ಮಲ್ಯವನ್ನು ಅನುಸರಿಸಲು ವಿನಂತಿಸಿದ್ದಾರೆ. ಗಮನಾರ್ಹ ವಿಚಾರವೆಂದರೆ ಎರಡು ಹೊಸ ಓಮಿಕ್ರಾನ್ ಉಪ-ರೂಪಾಂತರಗಳು BF.7 ಮತ್ತು BA.5.1.7 ಇತ್ತೀಚೆಗೆ ಚೀನಾದಲ್ಲಿ ಪತ್ತೆಯಾಗಿವೆ.