ಬೆಂಗಳೂರು: ವಿವಿಧ ಪ್ರಕರಣಗಳ ಸಂಬಂಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾದ ಬಳಿಕ, ಎಫ್‌ಐಆರ್ ಪ್ರತಿಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸೋದಕ್ಕೆ ತಡ ಮಾಡಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಸಲ್ಲಿಕೆಯಾದಂತ ಪಿಐಎಸ್ ಸಂಬಂಧ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಇಂದು ವಕೀಲ ಉಮಾಪತಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಮತ್ತು ನ್ಯಾಯಮೂರ್ತಿ ಕಿಣಿಗಿ ನೇತೃತ್ವದ ಕರ್ನಾಟಕ ವಿಭಾಗೀಯ ಪೀಠವು ಕರ್ನಾಟಕ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಿಪಿಎಆರ್ ಮತ್ತು ಎಡಿಜಿಪಿ ಲೋಮಾಯುಕ್ತ ಅವರಿಗೆ ನೋಟಿಸ್ ಜಾರಿ ಮಾಡಿದೆ. ನೋಂದಣಿಯಾದ 24 ಗಂಟೆಗಳ ಒಳಗೆ ತನ್ನ ವೆಬ್ಸೈಟ್ನಲ್ಲಿ ಎಫ್‌ಐಆರ್ ಅನ್ನು ಲೋಡ್ ಮಾಡದಿರುವ ಬಗ್ಗೆ ಉಚ್ಚ ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ಎಡಿಜಿಪಿ ಲೋಕಾಯುಕ್ತರಿಗೆ ನೋಟಿಸ್ ಜಾರಿಗೊಳಿಸಿದೆ. ಈ ಬಳಿಕ ಪ್ರಕರಣವನ್ನು ನವೆಂಬರ್.9ಕ್ಕೆ ಮುಂದೂಡುವ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿದೆ.