Facebook Twitter Instagram
    Friday, June 6
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಅಕ್ಟೋಬರ್ ಭಾರತದಲ್ಲಿ 25ಕ್ಕೆ ಭಾಗಶಃ ʻಸೂರ್ಯಗ್ರಹಣʼ: ಇಲ್ಲಿದೆ ಬೆಂಗಳೂರು ಸೇರಿದಂತೆ ಗ್ರಹಗೋಚರ ಸ್ಥಳಗಳ ಬಗ್ಗೆ ಮಾಹಿತಿ
    ಇತ್ತೀಚಿನ ಸುದ್ದಿ

    ಅಕ್ಟೋಬರ್ ಭಾರತದಲ್ಲಿ 25ಕ್ಕೆ ಭಾಗಶಃ ʻಸೂರ್ಯಗ್ರಹಣʼ: ಇಲ್ಲಿದೆ ಬೆಂಗಳೂರು ಸೇರಿದಂತೆ ಗ್ರಹಗೋಚರ ಸ್ಥಳಗಳ ಬಗ್ಗೆ ಮಾಹಿತಿ

    October 23, 2022
    Share

    ನವದೆಹಲಿ: 2022 ಅಕ್ಟೋಬರ್ 25ರಂದು ಭಾಗಶಃ ಸೂರ್ಯಗ್ರಹಣ ಸಂಭವಿಸಲಿದೆ(3 ಕಾರ್ತಿಕ, 1944 ಶಕ ಯುಗ). ಭಾರತದಲ್ಲಿ ಗ್ರಹಣವು ಮಧ್ಯಾಹ್ನದ ನಂತರ ಸೂರ್ಯಾಸ್ತದ ಮೊದಲು ಕಾಣಿಸಿಕೊಳ್ಳಲಿದ್ದು, ಇದು ಹೆಚ್ಚಿನ ಸ್ಥಳಗಳಲ್ಲಿ ಗೋಚರಿಸುತ್ತದೆ. ಆದಾಗ್ಯೂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ (ಐಜ್ವಾಲ್, ದಿಬ್ರುಗಢ್, ಇಂಫಾಲ್, ಇಟಾನಗರ, ಕೊಹಿಮಾ, ಸಿಬ್ಸಾಗರ್, ಸಿಲ್ಚಾರ್, ತಮೆಲಾಂಗ್ ಇತ್ಯಾದಿ) ಇದನ್ನು ನೋಡಲು ಸಾಧ್ಯವಿಲ್ಲ.

    ದೇಶದ ವಾಯವ್ಯ ಭಾಗಗಳಲ್ಲಿ ಗರಿಷ್ಠ ಗ್ರಹಣದ ಸಮಯದಲ್ಲಿ ಚಂದ್ರನು ಸೂರ್ಯನನ್ನು ಆವರಿಸಿದ ಪ್ರಮಾಣವು ಸರಿಸುಮಾರು ಶೇಕಡ 40 ಮತ್ತು 50ರ ನಡುವೆ ಇರುತ್ತದೆ. ದೇಶದ ಇತರ ಭಾಗಗಳಲ್ಲಿ, ಶೇಕಡಾವಾರು ವ್ಯಾಪ್ತಿಯು ಮೇಲಿನ ಮೌಲ್ಯಗಳಿಗಿಂತ ಕಡಿಮೆ ಇರುತ್ತದೆ.

    ದೆಹಲಿ ಮತ್ತು ಮುಂಬೈನಲ್ಲಿ, ಗ್ರಹಣದ ಪರ್ವ(ಉತ್ತುಂಗ) ಸಮಯದಲ್ಲಿ ಚಂದ್ರನು ಸೂರ್ಯನನ್ನು ಆವರಿಸಿಕೊಳ್ಳುವ ಶೇಕಡಾವಾರು ಪ್ರಮಾಣ ಕ್ರಮವಾಗಿ 44% ಮತ್ತು 24% ಇರುತ್ತದೆ. ಗ್ರಹಣ ಆರಂಭದಿಂದ ಸೂರ್ಯಾಸ್ತಮಾನದವರೆಗೆ ದೆಹಲಿ ಮತ್ತು ಮುಂಬೈನಲ್ಲಿ ಕ್ರಮವಾಗಿ 1 ಗಂಟೆ 13 ನಿಮಿಷ ಮತ್ತು 1 ಗಂಟೆ 19 ನಿಮಿಷ ಕಾಣಿಸಿಕೊಳ್ಳಲಿದೆ. ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಸೂರ್ಯಾಸ್ತದಿಂದ ಸೂರ್ಯಾಸ್ತಮಾನದವರೆಗೆ ಗ್ರಹಣದ ಅವಧಿ ಕ್ರಮವಾಗಿ 31 ನಿಮಿಷ ಮತ್ತು 12 ನಿಮಿಷ ಇರುತ್ತದೆ.

    ಯುರೋಪ್, ಮಧ್ಯಪ್ರಾಚ್ಯ, ಆಫ್ರಿಕಾದ ಈಶಾನ್ಯ ಭಾಗಗಳು, ಪಶ್ಚಿಮ ಏಷ್ಯಾ, ಉತ್ತರ ಅಟ್ಲಾಂಟಿಕ್ ಸಾಗರ ಮತ್ತು ಉತ್ತರ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಗ್ರಹಣ ಸ್ಪಷ್ಟವಾಗಿ ಗೋಚರಿಸುತ್ತದೆ. ಮುಂದಿನ ಸೂರ್ಯಗ್ರಹಣವು 2027 ಆಗಸ್ಟ್ 2ರಂದು ಭಾರತದಲ್ಲಿ ಗೋಚರಿಸಲಿದೆ. ಇದು ಪರಿಪೂರ್ಣ ಸೂರ್ಯಗ್ರಹಣವಾಗಿರಲಿದೆ. ಆದರೆ, ಇದು ಭಾರತದ ಎಲ್ಲಾ ಭಾಗಗಳಲ್ಲೂ ಭಾಗಶಃ ಸೂರ್ಯಗ್ರಹಣದಂತೆ ಗೋಚರಿಸುತ್ತದೆ.

    ಅಮಾವಾಸ್ಯೆಯ ದಿನದಂದು ಚಂದ್ರನು ಪೃಥ್ವಿ ಮತ್ತು ಸೂರ್ಯನ ನಡುವೆ ಬಂದಾಗ ಮತ್ತು ಈ ಎಲ್ಲಾ 3 ಗ್ರಹಗಳು ಜೋಡಣೆಯಾದಾಗ(ಸಾಲುಗೂಡಿದಾಗ) ಸೂರ್ಯಗ್ರಹಣ ಸಂಭವಿಸುತ್ತದೆ. ಚಂದ್ರ ಮುದ್ರಿಕೆಯು(ಡಿಸ್ಕ್) ಸೌರ ಮುದ್ರಿಕೆಯನ್ನು ಭಾಗಶಃ ಆವರಿಸಿದಾಗ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ.

    ಸೂರ್ಯಗ್ರಹಣವನ್ನು ಕ್ಷಣ ಮಾತ್ರಕ್ಕೂ ಬರಿಗಣ್ಣಿನಿಂದ ನೋಡಬಾರದು. ಚಂದ್ರನು ಸೂರ್ಯನ ಹೆಚ್ಚಿನ ಭಾಗವನ್ನು ಆವರಿಸಿದಾಗಲೂ ಇದು ಕಣ್ಣುಗಳಿಗೆ ಶಾಶ್ವತ ಹಾನಿ ಉಟುಮಾಡುತ್ತದೆ, ಕುರುಡುತನಕ್ಕೆ ಕಾರಣವಾಗುತ್ತದೆ. ಅಲ್ಯೂಮಿನೈಸ್ಡ್ ಮೈಲಾರ್, ಕಪ್ಪು ಪಾಲಿಮರ್, ಶೇಡ್ ಸಂಖ್ಯೆ 14ರ ವೆಲ್ಡಿಂಗ್ ಗ್ಲಾಸ್‌ನಂತಹ ಸಮರ್ಪಕ ಫಿಲ್ಟರ್ ಬಳಸಬೇಕು ಅಥವಾ ದೂರದರ್ಶಕದ ಮೂಲಕ ಬಿಳಿ ಹಲಗೆಯಲ್ಲಿ ಸೂರ್ಯನ ಚಿತ್ರ ಪ್ರಕ್ಷೇಪಿಸುವ ಮೂಲಕ ಸೂರ್ಯಗ್ರಹಣ ವೀಕ್ಷಿಸುವುದು ಸುರಕ್ಷಿತ ವಿಧಾನವಾಗಿದೆ.

    ಭಾಗಶಃ ಸೂರ್ಯಗ್ರಹಣ ಗೋಚರಿಸುವ ಭಾರತದ ಕೆಲವು ಪ್ರಮುಖ ನಗರಗಳು ಮತ್ತು ಪಟ್ಟಣಗಳೆಂದರೆ ನವದೆಹಲಿ, ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಉಜ್ಜಯಿನಿ, ವಾರಣಾಸಿ ಮತ್ತು ಮಥುರಾ. ಆಗಿದೆ

    25 ಅಕ್ಟೋಬರ್ 2022 ಭಾರತದ ವಿವಿಧ ನಗರಗಳಿಗೆ ಸೂರ್ಯಗ್ರಹಣದ ಪ್ರಾರಂಭ ಸಮಯ ಮತ್ತು ಅಂತಿಮ ಸಮಯದ ಬಗ್ಗೆ ಇಲ್ಲಿದೆ ಮಾಹಿತಿ

    ನವದೆಹಲಿ: 04:28 PM ರಿಂದ 05:42 PM

    ಜೈಪುರ, ರಾಜಸ್ಥಾನ: 04:31 PM ರಿಂದ 05:50 PM

    ಅಹಮದಾಬಾದ್, ಗುಜರಾತ್: 04:38 PM ರಿಂದ 06:06 PM

    ಪಾಟ್ನಾ, ಬಿಹಾರ: 04:42 PM ರಿಂದ 05:14 PM

    ಮುಂಬೈ, ಮಹಾರಾಷ್ಟ್ರ: 04:49 PM ರಿಂದ 06:09 PM

    ಬೆಂಗಳೂರು, ಕರ್ನಾಟಕ: 05:12 PM ರಿಂದ 05:56 PM

    ಭೋಪಾಲ್, ಮಧ್ಯಪ್ರದೇಶ: 04:42 PM ರಿಂದ 05:47 PM

    ರಾಯ್ಪುರ್, ಛತ್ತೀಸ್ಗಢ: 04:50 PM ರಿಂದ 05:32 PM

    ಹೈದರಾಬಾದ್, ತೆಲಂಗಾಣ: 04:58 PM ರಿಂದ 05:48 PM

    ಚೆನ್ನೈ, ತಮಿಳುನಾಡು: 05:13 PM ರಿಂದ 05:45 PM

    ಕೋಲ್ಕತ್ತಾ, ಪಶ್ಚಿಮ ಬಂಗಾಳ: 04:51 PM ರಿಂದ 05:04 PM

    ಲಕ್ನೋ, ಉತ್ತರ ಪ್ರದೇಶ: 04:36 PM ರಿಂದ 05:29 PM

    ಚಂಡೀಗಢ: 04:23 PM ರಿಂದ 05:41 PM

    ಭುವನೇಶ್ವರ್, ಒಡಿಶಾ: 04:56 PM ರಿಂದ 05:16 PM

    ಶಿಮ್ಲಾ, ಹಿಮಾಚಲ ಪ್ರದೇಶ: 04:23 PM ರಿಂದ 05:39 PM

    ಡೆಹ್ರಾಡೂನ್, ಉತ್ತರಾಖಂಡ: ಸಂಜೆ 04:25 ರಿಂದ 05:37 ರವರೆಗೆ

    ರಾಂಚಿ, ಜಾರ್ಖಂಡ್: 04:48 PM ರಿಂದ 05:15 PM

    ಪುಣೆ, ಮಹಾರಾಷ್ಟ್ರ: 04:51 PM ರಿಂದ 06:06 PM

    Post Views: 135

    Related Posts

    ಹಿಂದೂ ಮುಖಂಡರ ಮನೆಗೆ ಮಧ್ಯರಾತ್ರಿ ದಾಳಿಗೆ ಭಾರೀ ವಿರೋಧ:ದಕ್ಷಿಣ ಕನ್ನಡ ಪೊಲೀಸರಿಗೆ ನೋಟಿಸ್

    June 6, 2025

    ಕಡಬದಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡನ ವಿರುದ್ಧ ಎಫ್‌ಐಆರ್

    June 5, 2025

    ಭರತ್ ಕುಮ್ಡೇಲು ಮನೆಗೆ ಪೊಲೀಸರ ದಾಳಿ: ನ್ಯಾಯಾಲಯದಿಂದ ಸರ್ಚ್ ವಾರೆಂಟ್

    June 5, 2025
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2025 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.