ಮಕ್ಕಳ ಚರ್ಮ ತುಂಬ ಮೃದವಾಗಿರುತ್ತದೆ. ಅವರನ್ನು ಎಷ್ಟು ಜಾಗ್ರತೆಯಿಂದ ನೋಡಿಕೊಳ್ಳುತ್ತೇವೋ ಅಷ್ಟು ಒಳ್ಳೆಯದು.
ಅದರಲ್ಲೂ ಚಳಿಗಾಲದಲ್ಲಿ ಮಕ್ಕಳ ಚರ್ಮ ತೇವಾಂಶ ಕಳೆದುಕೊಳ್ಳುತ್ತದೆ. ಹವಾಮಾನದಲ್ಲಿ ಸಣ್ಣ ಬದಲಾವಣೆ ಆದರೂ ಕೂಡಾ ಅದು ಮಕ್ಕಳ ಆರೋಗ್ಯದ ಮೇಲೆ ತಕ್ಷಣ ಪರಿಣಾಮ ಬೀರುತ್ತದೆ. ಹಾಗೆಯೇ ಅವರ ಚರ್ಮವೂ ಒಣಗುತ್ತದೆ.ಚಳಿಗಾಲದಲ್ಲಿ ನಿಮ್ಮ ಮಗುವಿನ ಚರ್ಮವು ಬಹಳ ಒಣಗಿದ್ದರೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ಮಗುವಿನ ಕೋಮಲ ತ್ವಚೆಯನ್ನು ನೋಡಿಕೊಳ್ಳಲು ಇಲ್ಲಿ ತಿಳಿಸಿರುವ ಕೆಲವೊಂದು ಸಲಹೆಗಳು ನಿಮಗೆ ಅನುಕೂಲವಾಗಬಹುದು.
ಮಕ್ಕಳ ಉಡುಪುಗಳ ಬಗ್ಗೆ ಇರಲಿ ಗಮನ
ಯಾವುದೇ ಹವಾಮಾನವಾದರೂ ಮಕ್ಕಳ ಬಟ್ಟೆಗಳ ಫ್ಯಾಬ್ರಿಕ್ ಬಹಳ ಮೃದುವಾಗಿರಬೇಕು. ಚಳಿಗಾಲದಲ್ಲಿ ಮಕ್ಕಳ ಚರ್ಮವು ಹೆಚ್ಚು ಸೂಕ್ಷ್ಮವಾಗುತ್ತದೆ. ಆದ್ದರಿಂದ ದದ್ದುಗಳು ಅಥವಾ ಕಿರಿಕಿರಿಯನ್ನು ತಡೆಯುವ ಬಟ್ಟೆಗಳನ್ನು ತೊಡಿಸಿ. ಅವರಿಗೆ ಮೃದುವಾದ, ಸರಳವಾದ ಬಟ್ಟೆಗಳನ್ನು ಆರಿಸಿ. ಈ ಬಟ್ಟೆಗಳನ್ನು ಮಾರುಕಟ್ಟೆಯಿಂದ ತಂದ ಕೂಡಲೇ ಮಕ್ಕಳಿಗೆ ತೊಡಿಸಬೇಡಿ. ಅವುಗಳನ್ನು ಮೊದಲು ಬೇಬಿ ಡಿಟರ್ಜೆಂಟ್‌ನಲ್ಲಿ ತೊಳೆಯಿರಿ.
ಮಕ್ಕಳ ಉತ್ಪನ್ನಗಳನ್ನು ಎಚ್ಚರಿಕೆಯಿಂದ ಆರಿಸಿ
ಮಕ್ಕಳಿಗೆ ಬಳಸುವ ಸಾಬೂನು, ಶಾಂಪೂ, ಹೇರ್ ಆಯಲ್, ಮಸಾಜ್ ಆಯಿಲ್, ಪೌಡರ್ ಯಾವುದೇ ಆಗಲಿ ಅವು ರಾಸಾಯನಿಕ-ಮುಕ್ತ, ಪ್ಯಾರಾಬೆನ್-ಮುಕ್ತವಾಗಿರಬೇಕು. ಮಕ್ಕಳ ಚರ್ಮವನ್ನು ತೇವಗೊಳಿಸಲು ನೈಸರ್ಗಿಕ ತೈಲಗಳನ್ನು ಬಳಸಿದರೆ ಉತ್ತಮ. ಚಳಿಗಾಲದಲ್ಲಿ ಆಲಿವ್ ಎಣ್ಣೆ ತುಂಬಾ ಒಳ್ಳೆಯದು. ಇದರಿಂದ ಮಕ್ಕಳಿಗೆ ಮಸಾಜ್ ಮಾಡಿದರೆ ತ್ವಚೆ ಒಣಗುವುದಿಲ್ಲ.
ಬಿಸಿ ನೀರಿನ ಸ್ನಾನ ಬಿಡಿ
ಚಳಿ ಇದೆ ಎಂಬ ಕಾರಣ ಮಕ್ಕಳಿಗೆ ಅತಿ ಬಿಸಿನೀರಿನ ಸ್ನಾನ ಮಾಡಿಸಬೇಡಿ. ಸ್ನಾನಕ್ಕೆ ಬೆಚ್ಚಗಿನ ನೀರು ಬಳಸಿ, ಮಗುವಿಗೆ ಬಿಸಿನೀರಿನಿಂದ ಸ್ನಾನ ಮಾಡಿಸುವುದರಿಂದ ಚರ್ಮ ಒಣಗಬಹುದು. ಆದ್ದರಿಂದ ಬೆಚ್ಚಗಿನ ನೀರಿನಿಂದ ಮಕ್ಕಳಿಗೆ ಸ್ನಾನ ಮಾಡಿಸಿ. ಹಾಗೇ ಸ್ನಾನದ ನಂತರ ಮಕ್ಕಳನ್ನು ಬೇಗ ಕೋಣೆಗೆ ಕರೆದೊಯ್ಯಿ