ಮಂಗಳೂರು: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನೀಡಲ್ಪಡುವ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. ವಿವಿಧ ಕ್ಷೇತ್ರದ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕರಾವಳಿಯಿಂದ ಪ್ರತಿಷ್ಠಿತ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಸಮಾಜ ಸೇವಕ ಹೊನ್ನಯ್ಯ ಕುಲಾಲ್ ರವರು ಆಯ್ಕೆಯಾಗಿದ್ದರೆ.
ಇವರ ಹಿನ್ನೆಲೆ:
ಅದೆಷ್ಟೋ ನಿರ್ಗತಿಕರಿಗೆ,ಆಸರೆ ಕಲ್ಪಿಸಿ,ಸಮಾಜದಲ್ಲಿ ನೊಂದವರಿಗೆ ಸಹಾಯ ಮಾಡಿ,ಜತೆಗೆ ಜನ ಜಾಗೃತಿ ಮೂಡಿಸಿ ಬಡ ಜನರ ಆಶಕ್ತರ ಅಪತ್ ಬಾಂಧವರರಾಗಿ ದಿವಂಗತ ಗೋಪಾಲ ಸಾಲ್ಯಾನ್ ರವರ ಪುತ್ರ ಹೊನ್ನಯ್ಯ ಕುಲಾಲ್ ರವರು ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನ ಚಾರಿಟೇಬಲ್ ಟ್ರಸ್ಟ್ ಎಂಬ ಸಂಸ್ಥೆ ಯನ್ನು ಕಳೆದ 2006ನೇ ಇಸವಿಯಲ್ಲಿ ಸ್ಥಾಪಿಸಿ ಸಮಾಜ ಸೇವೆಗೈದವರು.ಮೂಲತ: ಮಂಗಳೂರು ತಾಲೂಕಿನ ಕಾಟಿಪಳ್ಳ ಹುಟ್ಟೂರಾದರೆ, ಬೆಳ್ತಂಗಡಿ ತಾಲೂಕಿನ ಗುಂಡೂರಿ ಗ್ರಾಮದಲ್ಲಿ ಶಾಶ್ವತ ನೆಲೆನಿಂತು ಅಲ್ಲೇ ಅಬಲೆಯರ ಪುನರ್ವಸತಿ ಕೇಂದ್ರ ಸ್ಥಾಪಿಸಿ ಇತರೇ ಫಲಾಪೇಕ್ಷೆ ಪಡೆಯದೇ ಜನಸೇವೆ ಮಾಡುತ್ತಾ ಬಂದಿರುತ್ತಾರೆ.
ಇವರು 2022ನೇ ಸಾಲಿನ ಸಮಾಜ ಸೇವೆಗಾಗಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗೆ ಭಾಜನರಾಗಿದ್ದಾರೆ.