ಮೂಡಬಿದ್ರಿ: ಹುಡ್ಕೊ ಕಾಲನಿಯ ಪರಿಶಿಷ್ಟ ಜಾತಿ ಮೀಸಲು ವಾರ್ಡ್‌ಗೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ ಪುರಸಭೆ ಸದಸ್ಯ ಕೊರಗಪ್ಪ, ಸಾಮಾನ್ಯ ಸಭೆಯಲ್ಲಿ ಅಂಗಿ ಕಳಚಿ ಪ್ರತಿಭಟನೆ ನಡೆಸಿದರು. ಅಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.
ನನ್ನ ವಾರ್ಡ್‌ನಲ್ಲಿ ಚರಂಡಿ ನಿರ್ಮಾಣಕ್ಕೆ ಮನವಿ ನೀಡಿದ್ದೆ. ವಿಷಯವೇ ಅಜೆಂಡಾದಲ್ಲಿ ಇಲ್ಲ. ಅನುದಾನವು ಬಿಡುಗಡೆಯಾಗಿಲ್ಲ. ನನ್ನ ಕ್ಷೇತ್ರವನ್ನು ಕಡೆಗಣಿಸಿದ್ದೀರಿ. ಇದನ್ನು ನಾನು ಖಂಡಿಸುತ್ತೇನೆ ಎಂದು ಅಂಗಿ ಬಿಚ್ಚಿ ಪ್ರತಿಭಟನೆ ನಡೆಸಿದರು.
ನಾನು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಅಂದಾಜುಪಟ್ಟಿ ತಯಾರಿಸಲು ಎಂಜಿನಿಯರ್‌ಗೆ ಸೂಚಿಸಿದ್ದೆವು. ಪುರಸಭೆ ಸದಸ್ಯರಾಗಿ ಈ ರೀತಿ ವರ್ತಿಸಿರುವುದು ಖಂಡನಾರ್ಹ ಎಂದು ಅಧ್ಯಕ್ಷರು ಹೇಳಿದರು.
ಮಹಿಳಾ ಸದಸ್ಯರೂ ಇರುವ ಈ ಸಭೆಯಲ್ಲಿ ನೀವು ಅಂಗಿ ಬಿಚ್ಚಿದ್ದು ಸರಿ ಅಲ್ಲ ಎಂದು ಉಪಾಧ್ಯಕ್ಷೆ ಸುಜಾತಾ ಶಶಿಧರ್ ಹೇಳಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಪೂಜಾರಿ ಸೇರಿಂತೆ ಬಿಜೆಪಿಯ ಸದಸ್ಯರು ಆಕ್ಷೇಪಿಸಿದರು. ಇಬ್ಬರ ಮಧ್ಯೆ ಸ್ವಲ್ಪ ಹೊತ್ತು ಆರೋಪ ಪ್ರತ್ಯಾರೋಪ ನಡೆಯಿತು.