ಬೆಳ್ತಂಗಡಿ: ನ.8 ರಂದು ಮಂಗಳವಾರ ಗ್ರಸ್ತೋದಯ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿರುವ ಹಿನ್ನಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮಧ್ಯಾಹ್ನ 01.30 ರಿಂದ ರಾತ್ರಿ 7 ಗಂಟೆಯವರೆಗೆ ಭಕ್ತಾದಿಗಳಿಗೆ ದೇವರ ದರ್ಶನ ಮತ್ತು ಯಾವುದೇ ಪೂಜೆಗೆ ಅವಕಾಶ ಇರುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ದೇವರ ದರ್ಶನದ ಸಮಯ ಬದಲಾವಣೆಯನ್ನು ಮನಗಂಡು ದೂರದೂರಿನ ಭಕ್ತರು ಯಾತ್ರೆಗೆ ಹೊರಡಬೇಕಿದೆ.ಮಧ್ಯಾಹ್ನ 1.30 ರವರೆಗೆ ಭೋಜನಾ ವ್ಯವಸ್ಥೆ ಇರಲಿದ್ದು ಬಳಿಕ ಸಂಜೆ 7 ರ ಬಳಿಕ ಅನ್ನಪೂರ್ಣ ಅನ್ನಛತ್ರದಲ್ಲಿ ಭೋಜನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ದೇವಳದ ಪ್ರಕಟನೆಯಲ್ಲಿ ತಿಳಿಸಿದೆ.