ದಾವಣಗೆರೆ: ಹೊನ್ನಾಳಿ BJP ಶಾಸಕ ರೇಣುಕಾಚಾರ್ಯ ( Renukacharya) ಅವರ ತಮ್ಮನ ಮಗ ಚಂದ್ರಶೇಖರ್ ಮೃತದೇಹವು ತುಂಗಾ ಕಾಲುವೆಯಲ್ಲಿ ಪತ್ತೆಯಾದ ಪ್ರಕರಣ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಆದರೆ ಇನ್ನೂ ಪ್ರಕರಣ ತಾರ್ಕಿಕ ಅಂತ್ಯ ಕಂಡುಕೊಂಡಿಲ್ಲ.
ಇದರ ನಡುವೆ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ಚಂದ್ರಶೇಖರ್ ಸಾವಿನ ಬಗ್ಗೆ ಉಲ್ಲೇಖಿಸಲಾಗಿದೆ.ಚಂದ್ರಶೇಖರ್ ದೇಹದ ಮೇಲೆ ಯಾವುದೇ ಹಲ್ಲೆಯ ಕಲೆಗಳಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ರೇಣುಕಾಚಾರ್ಯ ಕುಟುಂಬ ಆರೋಪಿಸಿದಂತೆ ಹಲ್ಲೆ ನಡೆದಿಲ್ಲ, ಚಂದ್ರು ದೇಹದ ಮೇಲೆ ಯಾವುದೇ ಆಯುಧದ ಕಲೆಗಳಿಲ್ಲ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಚಂದ್ರು ಕೈಗೆ ಹಗ್ಗದಿಂದ ಕಟ್ಟಿದ ಯಾವುದೇ ಗುರುತು ಇಲ್ಲ, ತಲೆಗೆ ಹಿಂದಿನಿಂದ ಹಲ್ಲೆ ಮಾಡಿದ ಯಾವುದೇ ಗುರುತು ಇಲ್ಲ, ದೇಹದ ಮೇಲೆ ಯಾವುದೇ ಆಯುಧಗಳಿಂದ ಹಲ್ಲೆ ಮಾಡಿಲ್ಲ ಎಂದು ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಇನ್ನೂ, ಚಂದ್ರಶೇಖರ್ ಗೆ ಏನಾದರೂ ಇಂಜೆಕ್ಟ್ ಮಾಡಿದ್ದಾರಾ ಎಂಬುದರ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ.
ಇನ್ನೂ, ಎಫ್‌ಎಸ್‌ಎಲ್ ವರದಿ ಪ್ರಕಾರ ಕಾರು ವೇಗವಾದ ಸ್ಪೀಡ್ನಿಂದ ಡಿಕ್ಕಿ ಹೊಡೆದು ನೀರಿಗೆ ಬಿದ್ದಿದೆ ಎನ್ನಲಾಗಿದೆ. ಖಾಸಗಿ ವಿಧಿ ವಿಜ್ಞಾನ ತಜ್ಞ ಫಣೀಂದ್ರ ಕೂಡ 40 ಪುಟಗಳ ವರದಿಯನ್ನು ನೀಡಿದ್ದಾರೆ. ವರದಿಯ ಪ್ರಕಾರ ಅಪಘಾತ ಸಂಭವಿಸಿದೆ ಎಂದು ವರದಿ ನೀಡಿದ್ದಾರೆ. ಇನ್ನು ಒಂದು ಹಂತದ ಪರೀಕ್ಷೆ ಬಾಕಿ ಇದೆ ಎಂದು ಫಣೀಂದ್ರ ಹೇಳಿದ್ದಾರೆ ಎನ್ನಲಾಗಿದೆ.
ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ಮೃತದೇಹವು ಕೊಳೆತ ಸ್ಥಿತಿಯಲ್ಲಿ ನಾಲೆಯಲ್ಲಿ ಪತ್ತೆಯಾಗಿದ್ದು, ಇದು ಕೊಲೆ ಎಂದು ರೇಣುಕಾಚಾರ್ಯ ಹಾಗೂ ಮೃತ ಚಂದ್ರು ತಂದೆ ರಮೇಶ್ ಗಂಭೀರವಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನೂ, ನನ್ನ ಮಗನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಗಿದೆ ಎಂದು ಮೃತ ಚಂದ್ರಶೇಖರ್ ತಂದೆ ರಮೇಶ್ ಹಾಗೂ ಶಾಸಕ ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದರು.