Facebook Twitter Instagram
    Monday, June 8
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಉಳ್ಳಾಲ: ಕಾರಿನಲ್ಲಿ ಸಾಗಿಸಲಾಗುತ್ತಿದ್ದ 2 ಲಕ್ಷ ಮೌಲ್ಯದ ಗಾಂಜಾ, ಎಮ್ ಡಿಎಮ್ ಎ ವಶಕ್ಕೆ, ನಾಲ್ವರ ಬಂಧನ
    ಇತ್ತೀಚಿನ ಸುದ್ದಿ

    ಉಳ್ಳಾಲ: ಕಾರಿನಲ್ಲಿ ಸಾಗಿಸಲಾಗುತ್ತಿದ್ದ 2 ಲಕ್ಷ ಮೌಲ್ಯದ ಗಾಂಜಾ, ಎಮ್ ಡಿಎಮ್ ಎ ವಶಕ್ಕೆ, ನಾಲ್ವರ ಬಂಧನ

    December 19, 2022
    Share

    ಉಳ್ಳಾಲ: ಬೆಂಗಳೂರಿಂದ ಮಂಗಳೂರಿನ ನರಿಂಗಾನ ಗ್ರಾಮದ ತೌಡುಗೋಳಿಗೆ ಕಾರಲ್ಲಿ ಸಾಗಿಸಲಾಗುತ್ತಿದ್ದ 2 ಲಕ್ಷ ಮೌಲ್ಯದ ಎಮ್ ಡಿಎಮ್ ಎ ಮತ್ತು ಗಾಂಜಾವನ್ನು ಕೊಣಾಜೆ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದು, ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.

    ಬೆಂಗಳೂರಿಂದ ನರಿಂಗಾನ ಗ್ರಾಮದ ತೌಡುಗೋಳಿಗೆ ಗಾಂಜಾ ಮತ್ತು ಎಮ್ ಡಿಎಮ್ ಎ ಮಾದಕ‌ ವಸ್ತುವನ್ನ ತರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪಿಎಸ್‌ಐ ಶರಣಪ್ಪ ತಂಡವು ನಿನ್ನೆ ರಾತ್ರಿ ಬೊಳಿಯಾರ್ ನಲ್ಲಿ ದಾಳಿ ನಡೆಸಿ ನಿಷೇದಿತ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಮಾರುತಿ ಅಲ್ಟೊ ಕಾರ್ ಸಮೇತ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ನರಿಂಗಾನ ಗ್ರಾಮದ ನಿವಾಸಿಗಳಾದ ಮೊಯ್ದಿನ್ ಹಫೀಜ್ (36) ಮಹಮ್ಮದ್ ಸಿರಾಜ್ (43 ) ಅಡ್ಯಾರ್ ಕಟ್ಟೆ,ವಳಚ್ಚಿಲ್ ನಿವಾಸಿ ಇಕ್ಬಾಲ್ (30) ಕೋಡಿಕಲ್ ,ಅಶೋಕ ನಗರ ನಿವಾಸಿ ಮಹಮದ್ ಅಝೀಜ್ (33) ಬಂಧಿತ ಆರೋಪಿಗಳು. ಬಂಧಿತರಿಂದ 2,10,000 ಮೌಲ್ಯದ ನಿಷೇದಿತ 4 ಕೆ.ಜಿ ಗಾಂಜಾ, 40 ಗ್ರಾಂ.ಎಮ್ ಡಿಎಮ್ ಎ ಮತ್ತು 2 ಲಕ್ಷ ಮೌಲ್ಯದ ಆಲ್ಟೊ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕೊಣಾಜೆ ಠಾಣಾ ಪಿಎಸ್‌ಐ ಶರಣಪ್ಪ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಬ್ಬಂದಿಗಳಾದ ಶಿವಕುಮಾರ್, ಪುರುಷೋತ್ತಮ್, ಶೈಲೇಂದ್ರ, ದೀಪಕ್, ಸುರೇಶ್ , ಹೇಮಂತ್, ಗೌಸ್ ಪಾಲ್ಗೊಂಡಿದ್ದರು.

    Post Views: 210

    Related Posts

    ಹುಲಿಕಲ್ ಘಾಟ್‌ನಲ್ಲಿ ಖಾಸಗಿ ಬಸ್‌ಗೆ ಬೆಂಕಿ; 17 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು

    June 7, 2026

    ಆನ್‌ಲೈನ್ ಗೇಮ್ ವ್ಯಸನದ ಭೀಕರ ಅಂತ್ಯ: ತಂದೆ-ಅಕ್ಕನನ್ನೇ ಚಾಕುವಿನಿಂದ ಕೊಂದ ಪುತ್ರ

    June 7, 2026

    ತಲೆಮರೆಸಿಕೊಂಡಿದ್ದ ದರೋಡೆಕೋರನಿಗೆ ಪೊಲೀಸರ ಬಲೆ: ಉಳ್ಳಾಲ ಠಾಣೆ ತಂಡದ ಯಶಸ್ಸು

    June 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.