ಮಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಹೊಸವರ್ಷ ಬರಲಿದ್ದು, ಇದೀಗ ಹೊಸ ವರ್ಷಾಚರಣೆ ಸಂಭ್ರಮದಲ್ಲಿದ್ದವರ ಮೇಲೆ ಹಿಂದೂ ಸಂಘಟನೆಗಳ ಕಣ್ಣು ಬಿದ್ದಿದ್ದು, ಹೊಸ ವರ್ಷದ ಪಾರ್ಟಿಗಳನ್ನು ನಿಲ್ಲಿಸಲು ಮಂಗಳೂರು ಪೊಲೀಸರಿಗೆ ಭಜರಂಗದಳ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ.
ಹೊಸ ವರ್ಷದ ಹೆಸರಲ್ಲಿ ಪಬ್, ಹೊಟೇಲ್, ಸಾರ್ವಜನಿಕ ಸ್ಥಳಗಳಲ್ಲಿ ಆಯೋಜಿಸುವ ಪಾರ್ಟಿಗಳಲ್ಲಿ ಲವ್ ಜಿಹಾದ್ ಬಗ್ಗೆ ಭಜರಂಗದಳ ಕಿಡಿಕಾರಿದೆ. ಡ್ರಗ್ಸ್ ಮತ್ತು ಸೆಕ್ಸ್ ಮಾಫಿಯಾಗಳಲ್ಲಿ ಕೇರಳದ ಅನ್ಯಕೋಮಿನ ಯುವಕರ ಭಾಗಿಯಾಗುತ್ತಾರೆ ಎಂಬ ಆರೋಪ ಕೇಳಿಬಂದಿದ್ದು, ನ್ಯೂ ಇಯರ್ ಪಾರ್ಟಿಗಳಿಗೆ ನಿರ್ಬಂಧ ಹೇರುವಂತೆ ಭಜರಂಗದಳದ ಕಾರ್ಯಕರ್ತರು ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.
ಹೊಸ ವರ್ಷಾಚರಣೆಗೆ ನೈತಿಕ ಪೊಲೀಸ್‌ಗಿರಿಯ ಕರಿನೆರಳು ಬೀಳುವ ಸುಳಿವಿನ ಬೆನಲ್ಲೇ ಮಂಗಳೂರು ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಸಿಆರ್‌ಪಿಸಿ 107 ಅಸ್ತ್ರ ಪ್ರಯೋಗಿಸಿದ್ದಾರೆ. ಭಜರಂಗದಳ ಸೇರಿ ಹಿಂದೂ ಪರ ಸಂಘಟನೆಗಳ ಪ್ರಮುಖರಿಗೆ ನೋಟಿಸ್ ನೀಡಿದ್ದಾರೆ. ಭಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಸೇರಿ ಕೆಲ ನಾಯಕರು ಹಾಗೂ ಕಾರ್ಯಕರ್ತರಿಗೆ ಪೊಲೀಸರು ನೋಟಿಸ್ ನೀಡಿದ್ದು, ಸಿಆರ್‌ಪಿಸಿ 107ರ ಅಡಿಯಲ್ಲಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.