ಬೆಂಗಳೂರು: 545 ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಕಲಬುರ್ಗಿ ಜಿಲ್ಲೆಯ ಅಫಜಲಪುರದ ದೇಸಾಯಿ ಕಲ್ಲೂರ ನಿವಾಸಿ ಕುಪೇಂದ್ರ ಬಾಸಗಿ ಬಂಧಿತ ಆರೋಪಿ. ಹಗರಣದ ಕಿಂಗ್ ಪಿನ್ ಆರ್.ಡಿ.
ಪಾಟೀಲ್ ಗೆ ಕುಪೇಂದ್ರ ಬಾಸಗಿ ಅಭ್ಯರ್ಥಿಗಳನ್ನು ಪರಿಚಯಿಸುತ್ತಿದ್ದ.
ಈಗಾಗಲೇ ಪಿಎಸ್ಐ ಹಗರಣದಲ್ಲಿ ಬಂಧಿತಳಾಗಿರುವ ಸುಪ್ರಿಯಾಳನ್ನು ಆರ್.ಡಿ. ಪಾಟೀಲ್ ಗೆ ಪರಿಚಯಿಸಿದ್ದ.
ಸುಪ್ರಿಯಾ ಪಿಎಸ್ಐ ಹುದ್ದೆ ಲಿಖಿತ ಪರೀಕ್ಷೆಯಲ್ಲಿ ಅಕ್ರಮವಾಗಿ ಬ್ಲುಟೂಥ್ ಬಳಸಿ ಪರೀಕ್ಷೆ ಬರೆದಿದ್ದಳು.