ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಹೇಳಿಕೆ ವಿಚಾರವಾಗಿ ಸಿ.ಟಿ.ರವಿ ಅವರು ಎತ್ತಿದ ಪ್ರಶ್ನೆ, ಸದನದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಯ್ತು.
ಈ ವೇಳೆ ಮಾತನಾಡಿದ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಬೈಬಲ್, ಕುರಾನ್, ಭಗವದ್ಗೀತೆಯಲ್ಲಿ ಇನ್ನೊಬ್ಬರಿಗೆ ಅನ್ಯಾಯ ಮಾಡಬೇಕು ಎಂದು ಬರೆದಿಲ್ಲ. ತಾನು ವಾಸಿಸುವ ನೆಲದ ಕಾನೂನಿಗೆ ಗೌರವ ಕೊಡಬೇಕು ಎಂದು ಬರೆಯಲಾಗಿದೆ ಎಂದು ಯು.ಟಿ.ಖಾದರ್ ಹೇಳಿದರು.
ಭಯೋತ್ಪಾದಕರು, ಅಪರಾಧಿಗಳು, ಕ್ರೈಮ್ ಮಾಡುವವರು ಎಲ್ಲ ಸಮುದಾಯದಲ್ಲಿಯೂ ಇದ್ದಾರೆ. ಅವರನ್ನು ಧರ್ಮದ ಆಧಾರದಲ್ಲಿ ಗುರುತಿಸುವುದು ದೊಡ್ಡ ತಪ್ಪು ಎಂದು ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಗೆ ಬಂದಾತ ದೇವರ ದಯದಲ್ಲಿ ರಿಕ್ಷಾದಲ್ಲಿಯೇ ಬಾಂಬ್ ಸ್ಫೋಟವಾದ ಕಾರಣ ಸಿಕ್ಕಿ ಬಿದ್ದ ಎಂದು ಯು.ಟಿ.ಖಾದರ್ ಹೇಳಿದರು.