ಮಂಗಳೂರು: ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಯಗೊಂಡಿರುವ ಜನತೆ ಬೂಸ್ಟರ್ ಲಸಿಕೆ ಪಡೆಯಲು ಮುಂದಾಗಿದ್ದಾರೆ. ಹೇಗೂ ಕೊರೊನಾ ಕಡಿಮೆಯಾಗಿದೆ ಎಂದು ಬೂಸ್ಟರ್ ಲಸಿಕೆ ಪಡೆಯಲು ಜನರು ಹಿಂದೇಟು ಹಾಕಿದ್ದರು. ಆದರೆ ಮತ್ತೆ ಇದೀಗ ಜನ ಲಸಿಕೆ ಪಡೆಯುವತ್ತ ಒಲವು ತೋರಿದರೂ ಲಸಿಕೆ ಕೊರತೆ ಎದುರಾಗಿದೆ.
ದ.ಕ. ಜಿಲ್ಲೆಯ ಶೇ. 80ರಷ್ಟು ಅರ್ಹರು ಲಸಿಕೆ ಪಡೆದುಕೊಳ್ಳಲು ಇನ್ನೂ ಬಾಕಿ ಇದ್ದಾರೆ. ಕೋವಿಶೀಲ್ಡ್ ಲಸಿಕೆ ಪಡೆದ ಮಂದಿ, ಎರಡನೇ ಡೋಸ್ ಮತ್ತು ಬೂಸ್ಟರ್ ಡೋಸ್ ಲಸಿಕೆಯನ್ನು ಕೋವಿಶೀಲ್ಡ್ ಮಾತ್ರವೇ ಪಡೆಯಬೇಕಾಗುತ್ತದೆ. ಆದರೆ ಲಸಿಕೆ ಪಡೆಯುವ ಅವಧಿ ಕಳೆದರೂ ಲಸಿಕೆ ಸಿಗುತ್ತಿಲ್ಲ ಎನ್ನುತ್ತಾರೆ ಸಾರ್ವಜನಿಕರು.ಆರೋಗ್ಯ ಇಲಾಖೆ ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯಿಸಿದ್ದು, ಉಡುಪಿ ಹಾಗೂ ದ.ಕ ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯಾದ್ಯಾಂತ ಲಸಿಕೆ ಕೊರತೆ ಎದುರಾಗಿದೆ. ಶೀಘ್ರವೇ ಹೊಸ ಲಸಿಕೆ ಬರಲಿದೆ. ಲಸಿಕೆ ಬಂದ ತಕ್ಷಣ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.ಇನ್ನೊಂದೆಡೆ ವಿದೇಶದಲ್ಲಿ ಕೊವೀಡ್ ಏರಿಕೆಯಾಗುತ್ತಿರುವುದರಿಂದ ಮತ್ತೆ ಲಸಿಕೆ ಆರಂಭಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.