ಹಲ್ವಾ ಎಂದರೆ ಬಾಯಲ್ಲಿ ನೀರು ಬರುತ್ತದೆಯೇ.? ಹಾಗಾದ್ರೆ ಇಲ್ಲಿದೆ ನೋಡಿ ಒಂದು ರುಚಿಕರವಾದ ಕೊಕೊನಟ್ ಹಲ್ವಾ ಮಾಡುವ ವಿಧಾನ. ಮಕ್ಕಳಿಗಂತೂ ಇದು ತುಂಬ ಇಷ್ಟವಾಗುತ್ತೆ.
ಬೇಕಾಗುವ ಸಾಮಗ್ರಿಗಳು:
1 ¼ ಕಪ್ – ತೆಂಗಿನಕಾಯಿ ಹಾಲು, 2/3 ಕಪ್ – ಹಾಲು, 2/3 ಕಪ್ – ಸಕ್ಕರೆ, ¼ ಕಪ್ – ತೆಂಗಿನಕಾಯಿ ತುರಿ, 2 ಟೇಬಲ್ ಸ್ಪೂನ್ – ಬೆಣ್ಣೆ, 2 ಟೇಬಲ್ ಸ್ಪೂನ್ – ಬಾದಾಮಿ, 2 ಟೇಬಲ್ ಸ್ಪೂನ್ – ಪಿಸ್ತಾ.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಹಾಲು ಹಾಕಿ ಹದ ಉರಿಯಲ್ಲಿ ಕುದಿಸಿಕೊಳ್ಳಿ. ನಂತರ ಇದಕ್ಕೆ ಸಕ್ಕರೆ ಹಾಗೂ ತೆಂಗಿನಕಾಯಿ ತುರಿ ಸೇರಿಸಿ ಈ ಮಿಶ್ರಣ ದಪ್ಪಗಾಗುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಬೆಣ್ಣೆ ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ.
ಒಂದು ಪ್ಲೇಟ್ ಗೆ ತುಸು ತುಪ್ಪ ಸವರಿ ಈ ಮಿಶ್ರಣವನ್ನು ಹಾಕಿ ಇದರ ಮೇಲೆ ಬಾದಾಮಿ ಹಾಗೂ ಪಿಸ್ತಾ ಚೂರುಗಳನ್ನು ಹಾಕಿ ಸಮತಟ್ಟು ಮಾಡಿಕೊಳ್ಳಿ. ಇದು ತುಸು ಬಿಸಿ ಇರುವಾಗಲೇ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ.