ದೇಶದಲ್ಲಿ ರಣಹದ್ದುಗಳ ಸಂಖ್ಯೆ ತೀರಾ ಕಡಿಮೆಯಾಗುತ್ತಿದ್ದು, ಇದೀಗ ಅಪರೂಪದ ಬಿಳಿಯ ರಣಹದ್ದುವೊಂದನ್ನು ಉತ್ತರ ಪ್ರದೇಶದ ಕಾನ್ಪುರದ ಸ್ಥಳೀಯರು ಸೆರೆ ಹಿಡಿದಿದ್ದಾರೆ. ಹಿಮಾಲಯನ್ ಗ್ರಿಫನ್ ಎಂಬ ಜಾತಿಗೆ ಸೇರಿದ ರಣಹದ್ದು ಇದಾಗಿದ್ದು, ಕರ್ನಲ್ಗಂಜ್ನ ಈದ್ಗಾ ಸ್ಮಶಾನದಲ್ಲಿ ಸಿಕ್ಕಿದೆ. ಸುಮಾರು ಒಂದು ವಾರದಿಂದ ಈ ಪ್ರದೇಶದಲ್ಲಿ ಓಡಾಡುತ್ತಿತ್ತು ಎಂದು ಹೇಳಲಾಗುತ್ತಿದೆ.
ಸ್ಥಳೀಯರೊಬ್ಬರು ಈ ಬಗ್ಗೆ ಮಾತನಾಡಿದ್ದು, ‘ರಣಹದ್ದು, ಒಂದು ವಾರದಿಂದ ಇಲ್ಲಿತ್ತು. ನಾವು ಅದನ್ನು ಹಿಡಿಯಲು ಪ್ರಯತ್ನಿಸಿದೆವು, ಆದರೆ ಯಶಸ್ವಿಯಾಗಲಿಲ್ಲ. ಆದರೆ ಅದು ಹಾರುತ್ತಾ ಕೆಳಗೆ ಬಂದಂತೆ ಸೆರೆ ಹಿಡಿದಿದ್ದೇವೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಹಸ್ತಾಂತರಿಸಿದ್ದೇವೆ‘ ಎಂದರು.
ಸ್ಥಳೀಯರು ಸಿಕ್ಕ ಅಪರೂಪದ ಹಿಮಾಲನ್ ಗ್ರಿಫನ್ ರಣಹದ್ದುವಿನ ಜೊತೆಗೆ ವಿಡಿಯೋ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.