ಬೆಂಗಳೂರು: ಬೇಸಾದಯ ಉದ್ದೇಶಕ್ಕಾಗಿ ಹೊಂದಿರುವ ಯಾವುದೇ ಭೂಮಿಯನ್ನು ಬೇಸಾಯೇತರ ಉದ್ದೇಶಕ್ಕಾಗಿ ಪರಿವರ್ತಿಸುವಾಗ ಸಲ್ಲಿಸುವಂತ ಅರ್ಜಿ ಶುಲ್ಕದಲ್ಲಿ ಭಾರೀ ಹೆಚ್ಚಳ ಮಾಡಲಾಗಿದೆ.
ಈ ಸಂಬಂಧ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯಿಂದ ರಾಜ್ಯ ಪಾಲರ ಪರವಾಗಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ.
ಅದರಲ್ಲಿ ಮೂಲ ಅಧಿನಿಯಮದಲ್ಲಿನ 96ನೇ ಪ್ರಕರಣದಲ್ಲಿ ಉಪಪ್ರಕರಣ(1)ರಲ್ಲಿ ಸುಳ್ಳು ಅಥವಾ ತಪ್ಪು ಅಫಿಡವಿಟ್ ಘೋಷಣೆಯನ್ನಾಧರಿಸಿ ಎಂಬ ಪದಗಳನ್ನು ಸೇರಿಸುವುದು ಎಂದಿದ್ದಾರೆ.
ಇನ್ನೂ ಭೂ ಪರಿವರ್ತನೆ ಶುಲ್ಕಲದಲ್ಲಿ ಭಾರೀ ಹೆಚ್ಚಳ ಮಾಡಲಾಗಿದೆ. ಒಂದು ಸಾವಿರ ರೂಪಾಯಿಯ ಶುಲ್ಕವನ್ನು ಒಂದು ಲಕ್ಷಕ್ಕೆ ಹೆಚ್ಚಿಸಿದ್ದರೇ, ಇಪ್ಪತ್ತೈದು ರೂಪಾಯಿಗಳ ಶುಲ್ಕವನ್ನು ಎರಡು ಸಾವಿರದ ಐದುನೂರು ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.