Facebook Twitter Instagram
    Friday, April 24
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಸುರತ್ಕಲ್‌: ಗುಡ್ಡ ಕುಸಿದು ಕಾರ್ಮಿಕ ಮೃತ್ಯು
    ಇತ್ತೀಚಿನ ಸುದ್ದಿ

    ಸುರತ್ಕಲ್‌: ಗುಡ್ಡ ಕುಸಿದು ಕಾರ್ಮಿಕ ಮೃತ್ಯು

    January 14, 2023
    Share

    ಸುರತ್ಕಲ್‌ : ಕೆಲಸ ಮಾಡುವಾಗ ಗುಡ್ಡ ಕುಸಿತ ಉಂಟಾಗಿ ಓರ್ವ ಕಾರ್ಮಿಕ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚೇಳೈರು ಗ್ರಾಮದ ಚೇಳೈರು ರೈಲ್ವೇ ಬ್ರಿಡ್ಜ್ ಬಳಿ ನಡೆದಿದೆ.

    ಘಟನೆಯಲ್ಲಿ ಮೃತಪಟ್ಟ ಕಾರ್ಮಿಕನನ್ನು ಓಬಲೇಶ್ವರ ಎಂದು ಗುರುತಿಸಲಾಗಿದೆ. ರೈಲ್ವೇ ಸೇತುವೆಯ ಮೇಲ್ಭಾಗದಲ್ಲಿ ಕಂಬಿಗಳನ್ನು ನೇರಮಾಡುತ್ತಿದ್ದ ಸಂದರ್ಭ ಕಾರ್ಮಿಕರು ಕೆಳಭಾಗದಲ್ಲಿ ಗುಡ್ಡ ಅಗೆಯುತ್ತಿದ್ದರು. ಈ ವೇಳೆ ರೈಲೊಂದು ಏಕಾಏಕಿ ಬಂದ ಹಾದುಹೋದ ಪರಿಣಾಮ ಮಣ್ಣು ಕುಸಿದು ಗುಡ್ಡದ ಕೆಳಭಾಗದಲ್ಲಿ ಅಗೆಯುತ್ತಿದ್ದ ಕಾರ್ಮಿಕರ ಮೇಲೆ ಬಿದ್ದಿದೆ.

    ಈ ವೇಳೆ ಆರೇಳು ಕಾರ್ಮಿಕರ ಮೇಲೆ ಮಣ್ಣು ಬಿದ್ದಿದೆ. ಈ ಪೈಕಿ ಓಬಳೇಶ್ವರ ಮತ್ತು ಬಳ್ಳಾರಿಯ ಗೋವಿಂದಪ್ಪ ಅವರ ಮೈಮೇಲೆ ಹೆಚ್ಚಿನ ಪ್ರಮಾಣದ ಮಣ್ಣುಬಿದ್ದು ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನು ರಕ್ಷಿಸಿ ಖಾಸಗಿ ಆಸ್ಪತೆರೆಗ ದಾಖಲಿಸಲಾಗಿದ್ದು, ಈ ವೇಳೆ ಓಬಳೇಶ್ವರ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಗೋವಿಂದಪ್ಪ ಅವರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.

    ಘಟನೆಗೆ ಸಂಬಂಧಿಸಿ ಕಾರ್ಮಿಕರಾದ ಕಿಟ್ಟರಾಜ ಎಂಬವರು ಸುರತ್ಕಲ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

    Post Views: 218

    Related Posts

    DrDevansAcademy.org ನಿಂದ ವೈದ್ಯಕೀಯ ಶಿಕ್ಷಣಕ್ಕೆ ಕ್ರಾಂತಿಕಾರಿ ಕ್ಲೌಡ್ ಆಧಾರಿತ ಸಂವಾದಾತ್ಮಕ ಕಲಿಕಾ ವೇದಿಕೆ ಬಿಡುಗಡೆ

    April 23, 2026

    ವಿಡಿಯೋ ಬೆದರಿಕೆ: ₹1.5 ಕೋಟಿ ಸುಲಿಗೆ ಆರೋಪ, ಇನ್‌ಫ್ಲೂಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ ಪ್ರಕರಣ

    April 23, 2026

    ಚುನಾವಣಾ ಹಂತದಲ್ಲಿ ಉದ್ವಿಗ್ನತೆ: ಮತದಾನ ವೇಳೆ ಕಚ್ಚಾ ಬಾಂಬ್ ದಾಳಿ, ಹಲವರಿಗೆ ಗಾಯ

    April 23, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.