ಮುಂಬೈ: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಬಂದಿದೆ. ಬೆದರಿಕೆ ಹಾಕಿರುವ ವ್ಯಕ್ತಿ ಇಂಡಿಯನ್ ಮುಜಾಹಿದ್ದೀನ್ ಎಂಬ ಭಯೋತ್ಪಾದಕ ಸಂಘಟನೆ ಹೆಸರಿನಲ್ಲಿ ಬೆದರಿಕೆ ಹಾಕಿದ್ದಾನೆ. ಈ ಬೆದರಿಕೆ ಕರೆ ನಂತರ, ಮುಂಬೈ ಪೊಲೀಸರು ಸೇರಿದಂತೆ ಎಲ್ಲಾ ಏಜೆನ್ಸಿಗಳು ಅಲರ್ಟ್ ಆಗಿವೆ.
ಮುಂಬೈ ಪೊಲೀಸರ ಪ್ರಕಾರ, ಸೋಮವಾರ ವಿಮಾನ ನಿಲ್ದಾಣದಲ್ಲಿ ಈ ಬೆದರಿಕೆ ಕರೆ ಬಂದಿದೆ. ಇದಾದ ಬಳಿಕ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿಮಾನ ನಿಲ್ದಾಣದ ಎಲ್ಲಾ ಏಜೆನ್ಸಿಗಳಿಗೂ ಎಚ್ಚರಿಕೆಯನ್ನು ಕಳುಹಿಸಲಾಗಿದೆ. ಮುಂಬೈನ ಸಹರ್ ಪೊಲೀಸರು ಅಪರಿಚಿತರ ವಿರುದ್ಧ ಐಪಿಸಿ ಸೆಕ್ಷನ್ 505(1) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಶುಕ್ರವಾರ ಮುಂಜಾನೆ ಮುಂಬೈನಲ್ಲಿ ಉಗ್ರರ ದಾಳಿಯ ಭೀತಿ ಎದುರಾಗಿತ್ತು. ತನಿಖಾ ಸಂಸ್ಥೆ ಎನ್‌ಐಎಗೆ ಬೆದರಿಕೆ ಮೇಲ್ ಕಳುಹಿಸಲಾಗಿದೆ. ಈ ಮೇಲ್ ಅನ್ನು ಎನ್‌ಐಎ ಇಮೇಲ್ ಐಡಿಯಲ್ಲಿ ಸ್ವೀಕರಿಸಲಾಗಿದೆ. ಇದರಲ್ಲಿ ಮುಂಬೈನಲ್ಲಿ ದಾಳಿಯ ಬೆದರಿಕೆ ಇತ್ತು. ಇದಾದ ನಂತರ ಮುಂಬೈ ಪೊಲೀಸರು ಮತ್ತು ಏಜೆನ್ಸಿಗಳು ಅಲರ್ಟ್ ಆಗಿದ್ದವು. ಇ-ಮೇಲರ್ ತನ್ನನ್ನು ತಾಲಿಬಾನ್ ಸದಸ್ಯ ಎಂದು ವಿವರಿಸಿದ್ದಾನೆ.