Facebook Twitter Instagram
    Thursday, September 17
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಕಾರ್ಕಳ: ವಂಚನೆ ಪ್ರಕರಣ – ಚಿನ್ನಾಭರಣ ಅಂಗಡಿ ಮಾಲಕನಿಗೆ ಜೈಲು ಶಿಕ್ಷೆ
    ಇತ್ತೀಚಿನ ಸುದ್ದಿ

    ಕಾರ್ಕಳ: ವಂಚನೆ ಪ್ರಕರಣ – ಚಿನ್ನಾಭರಣ ಅಂಗಡಿ ಮಾಲಕನಿಗೆ ಜೈಲು ಶಿಕ್ಷೆ

    February 15, 2023
    Share

    ಕಾರ್ಕಳ: ಗ್ರಾಹಕರನ್ನು ವಂಚಿಸಿದ ಚಿನ್ನಾಭರಣ ಅಂಗಡಿಯೊಂದರ ಮಾಲಕನಿಗೆ ಮತ್ತೊಂದು ಪ್ರಕರಣಕ್ಕೆ ಸಂಬಧಿಸಿದಂತೆ ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಚೇತನಾ ಎಸ್.ಎಫ್ ಅವರು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಹೊರಡಿಸಿದ್ದಾರೆ.

    ಕಾರ್ಕಳ ನಗರದ ಮಾರ್ಕೆಟ್ ರಸ್ತೆಯಲ್ಲಿ ಶ್ರೀದುರ್ಗಾ ಜುವೆಲ್ಲರ್‍ಸ್ ವ್ಯವಹಾರ ನಡೆಸುತ್ತಿದ್ದ ರವೀಂದ್ರ ಆಚಾರ್ಯ ಯಾನೆ ರವೀಂದ್ರ ಶಿಕ್ಷೆಗೊಳಗಾದವನು.2009 ಅಕ್ಟೋಬರ್ 30ರಂದು ಸುರೇಶ್ ಕೆ ಸಾಲ್ಯಾನ್ ಇವರಿಂದ 8.580 ಗ್ರಾಂ ತೂಕದ ರೂ 17,160 ಮೌಲ್ಯದ ಹಳೆಯ ರೇಡಿಯೋ ಚೈನನ್ನು ಪಡೆದುಕೊಂಡು ಇದರಿಂದ ಹೊಸ ರೋಪ್ ಚೈನನ್ನು ಮಾಡಿಕೊಡುವುದಾಗಿ ನಂಬಿಸಿ ವಂಚನೆಗೈದಿದ್ದನು.2010 ಆಗಸ್ಟ್ ೨೦ರಂದು ಪ್ರೇಮಾ ಎಂಬವರಿಂದ 8.500 ಗ್ರಾಂ ತೂಕದ ರೂ. 17,000 ಮೌಲ್ಯದ ಹಳೆ ಡಿಸೈನಿನ ಚಿನ್ನದ ಚೈನನ್ನು ಪಡೆದುಕೊಂಡು ಇದರಿಂದ ೨೪ ಇಂಚು ಉದ್ದದ ಕಟ್ಟಿಂಗ್ ಹವಳದ ಹೊಸ ಸರವನ್ನು ಮಾಡಿಕೊಡುವುದಾಗಿ ನಂಬಿಸಿ ವಂಚನೆಗೈದಿದ್ದನು.2010 ಆಗಸ್ಟ್ 20ರಂದು ವಸಂತಿ ಎಂಬವರಿಂದ 8 ಗ್ರಾಂ ತೂಕದ ರೂ. 16,000 ಮೌಲ್ಯದ ಹಳೆಯ ಚಿನ್ನದ ಚಕ್ರಸರವನ್ನು ಪಡೆದುಕೊಂಡು ಅದರಿಂದ ಹೊಸ ರೇಡಿಯೋ ಚೈನ್ ಮಾಡಿಕೊಡುವುದಾಗಿ ನಂಬಿಸಿ ವಂಚನೆಗೈದಿದ್ದನು. ಈ ಎಲ್ಲಾ ಪ್ರಕರಣದಲ್ಲಿ ಒಟ್ಟು ರೂ. 50,160 ಮೌಲ್ಯದ ಚಿನ್ನಾಭರಣವನ್ನು ವಂಚಿಸಿ ನಂಬಿಕೆ ದ್ರೋಹವೆಸಗಿದ್ದನು.ಈ ಬಗ್ಗೆ ಆರೋಪಿಯ ವಿರುದ್ದ ಭಾ.ದಂ.ಸಂ. ಕಲಂ.409,420ರ ರೀತ್ಯಾ ಶಿಕ್ಷಿಸಲ್ಪಡುವ ಅಪರಾಧಗಳಿಗೆ ಸಂಬಂಧಿಸಿ ಕಾರ್ಕಳ ನಗರ ಠಾಣೆಯ ಪೋಲೀಸ್ ಮುಖ್ಯ ಪೇದೆಯಾಗಿದ್ದ ಯಶವಂತ ಎಂ..ವಿ. ಪ್ರಥಮ ವರ್ತಮಾನ ತಯಾರಿಸಿದರು. ಪೋಲೀಸ್ ಉಪನಿರೀಕ್ಷಕರಾಗಿದ್ದ ಪ್ರಮೋದ್ ಕುಮಾರ್ ಪಿ. ಮತ್ತು ಕಬ್ಬಾಳ್ ರಾಜ್ ಹೆಚ್.ಡಿ ಇವರುಗಳು ಪ್ರಕರಣದ ಅಂಶಿಕ ತನಿಖೆ ನಡೆಸಿದ್ದರು. ಮುಂದಿನ ತನಿಖೆಯನ್ನು ಪೋಲೀಸ್ ಉಪನಿರೀಕ್ಷಕ ಇಮ್ರಾನ್ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.ಪ್ರಕರಣದ ವಿಚಾರಣೆಯನ್ನು ಕೈಗೊಂಡ ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಚೇತನಾ ಎಸ್.ಎಫ್. ಅವರು ಆರೋಪಿಯ ವಿರುದ್ಧದ ಪ್ರಕರಣವು ಸಾಭೀತು ಆಗಿದೆ ಎಂದು ಅಭಿಪ್ರಾಯಪಟ್ಟಿದ್ದರು. ಆರೋಪಿಯಾಗಿದ್ದ ರವೀಂದ್ರ ಆಚಾರ್ಯ ಯಾನೆ ರವೀಂದ್ರ ಇವನನ್ನು ಅಪರಾಧಿ ಎಂದು ಘೋಷಿಸಿದರು. ಕಲಂ.409 ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ 3 ವರ್ಷಗಳ ಸಾದಾ ಸಜೆ ಮತ್ತು ರೂ.5,000 ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಸಜೆ. ಕಲಂ.420 ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ 2 ವರ್ಷಗಳ ಸಾದಾ ಸಜೆ ಮತ್ತು ರೂ.5,000  ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಶಿಕ್ಷೆಯನ್ನು ಅನುಭವಿಸುವಂತೆ ತೀರ್ಪು ನೀಡಿ ಆದೇಶಿಸಿದ್ದಾರೆ.ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕಿ ಶೋಭಾ ಮಹಾದೇವ ನಾಯ್ಕ ಪ್ರಕರಣದ ಸಾಕ್ಷಿದಾರರ ವಿಚಾರಣೆ ನಡೆಸಿ, ವಾದ ಮಂಡಿಸಿರುತ್ತಾರೆ.

    Post Views: 189

    Related Posts

    “ನನಗೆ ಮುಸ್ಲಿಮರೇ ಮೊದಲು” ತುಳುನಾಡ ಮಾಣಿಕ್ಯ ನ ವಿವಾದಾತ್ಮಕ ಹೇಳಿಕೆಗೆ ತಿರುಗಿಬಿದ್ದ ಫ್ಯಾನ್ಸ್

    September 17, 2026

    ಬೀಡಿ ಕೊಡಲಿಲ್ಲ ಎಂಬ ವಿಚಾರಕ್ಕೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಗಲಾಟೆ: ಗ್ಯಾಸ್ ಬ್ಲಾಸ್ಟ್ ಬೆದರಿಕೆ!!

    September 17, 2026

    ಮಂಗಳೂರು: ಸುಲಿಗೆ ಪ್ರಕರಣ- ಇಬ್ಬರು ಆರೋಪಿಗಳಿಗೆ 7 ವರ್ಷ ಜೈಲು, ₹25 ಸಾವಿರ ದಂಡ

    September 17, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    “ನನಗೆ ಮುಸ್ಲಿಮರೇ ಮೊದಲು” ತುಳುನಾಡ ಮಾಣಿಕ್ಯ ನ ವಿವಾದಾತ್ಮಕ ಹೇಳಿಕೆಗೆ ತಿರುಗಿಬಿದ್ದ ಫ್ಯಾನ್ಸ್

    September 17, 2026

    ಬೀಡಿ ಕೊಡಲಿಲ್ಲ ಎಂಬ ವಿಚಾರಕ್ಕೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಗಲಾಟೆ: ಗ್ಯಾಸ್ ಬ್ಲಾಸ್ಟ್ ಬೆದರಿಕೆ!!

    September 17, 2026

    ಮಂಗಳೂರು: ಸುಲಿಗೆ ಪ್ರಕರಣ- ಇಬ್ಬರು ಆರೋಪಿಗಳಿಗೆ 7 ವರ್ಷ ಜೈಲು, ₹25 ಸಾವಿರ ದಂಡ

    September 17, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.