Facebook Twitter Instagram
    Sunday, March 8
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಪುತ್ರಿಯಿಂದಲೇ ತಂದೆ ವಿರುದ್ಧ ಅತ್ಯಾಚಾರ ದೂರು: ಖುಲಾಸೆ
    ಇತ್ತೀಚಿನ ಸುದ್ದಿ

    ಪುತ್ರಿಯಿಂದಲೇ ತಂದೆ ವಿರುದ್ಧ ಅತ್ಯಾಚಾರ ದೂರು: ಖುಲಾಸೆ

    March 3, 2023
    Share

    ಮಂಗಳೂರು: ಇಬ್ಬರು ಪುತ್ರಿಯರೇ ತಮ್ಮ ತಂದೆಯ ಮೇಲೆ ಮಾಡಿದ ಅತ್ಯಾಚಾರ ಆರೋಪದ ಪೈಕಿ ಒಂದು ಪ್ರಕರಣ ನಗರದ ಪೋಕ್ಸೋ ನ್ಯಾಯಾಲಯದಲ್ಲಿ ಖುಲಾಸೆಗೊಂಡಿದೆ.

    2021ರ ಜೂನ್‌ ತಿಂಗಳಿನಲ್ಲಿ ಕಾಟಿಪಳ್ಳದ ನಿವಾಸಿ ಅಬ್ದುಲ್‌ ಹಕೀಂ (48) ಅವರ ಮೇಲೆ ಅವರ ಇಬ್ಬರು ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳು ತಂದೆ ನಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಆರೋಪಿಸಿದ್ದರು.

    ಪ್ರಕರಣದ ಕುರಿತು ಮಂಗಳೂರಿನ ಮಹಿಳಾ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ಪೋಕ್ಸೋ ಕಾಯ್ದೆಯಡಿ ದಾಖಲಾಗಿತ್ತು.

    ಕಿರಿಯ ಮಗಳು ತನ್ನ ತಂದೆಯು ಸತತ ಮೂರು ವರ್ಷಗಳಿಂದ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿದ್ದಳು. ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಮಂಗಳೂರಿನ ಹೆಚ್ಚುವರಿ ಸತ್ರ ಮತ್ತು ಎರಡನೇ ಎಫ್‌ಟಿಎಸ್‌ಸಿ ಪೋಕ್ಸೋ ನ್ಯಾಯಾಲಯ ಪ್ರಕರಣದಲ್ಲಿ ಆರೋಪಿಯ ಮೇಲೆ ಆರೋಪ ಸಾಬೀತು ಮಾಡಲು ಯಾವುದೇ ಸರಿಯಾದ ಸಾಕ್ಷಾಧಾರಗಳು ಇಲ್ಲ ಎಂದು ನಿರ್ಧರಿಸಿತು.

    ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಅವರು ಆರೋಪಿಯನ್ನು ಬಿಡುಗಡೆ ಮಾಡಲು ಆದೇಶ ಮಾಡಿದ್ದಾರೆ. ಆರೋಪಿ ಕಳೆದ ಒಂದೂವರೆ ವರ್ಷಗಳಿಂದ ಜೈಲುವಾಸ ಅನಭವಿಸಿದ್ದರು. ಆರೋಪಿ ಪರ ಆಸಿಫ್‌ ಬೈಕಾಡಿ, ಮಹಮ್ಮದ್‌ ಅಸ್ಗರ್‌ ಮುಡಿಪು, ರುಬಿಯಾ ಅಖ್ತರ್‌, ಶ್ರೀನಿಧಿ ಪ್ರಕಾಶ್‌, ನಿರೀಕ್ಷಾ ವಾದ ಮಂಡಿಸಿದ್ದರು.

    Post Views: 181

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.