ಮಂಗಳೂರು: ಕೆಲ ತಿಂಗಳ ಹಿಂದೆ ನಡೆದಿದ್ದಂತ ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟಕ ಪ್ರಕರಣ ಸಂಬಂಧ, ಇಂದು ಕೊನೆಗೂ ಪ್ರಕರಣದ ಹೊಣೆಗಾರಿಕೆಯನ್ನು ಐಎಸ್ಐಎಸ್ ತಾನೇ ನಡೆದಿರೋದಾಗಿ ಒಪ್ಪಿಕೊಂಡಿದೆ.
ಈ ಕುರಿತಂತೆ ಮಾಹಿತಿಯನ್ನು ಬಿಡುಗಡೆ ಮಾಡಿರುವಂತ ಐಸಿಸ್ ಸಂಘಟನೆಯು, ಮಂಗಳೂರು ಮತ್ತು ಕೊಯಮತ್ತೂರು ಸ್ಪೋಟಕವನ್ನು ಮಾಡಿದ್ದು ತಾನೇ ಎಂಬುದಾಗಿ ಹೊಣೆ ಹೊತ್ತುಕೊಂಡಿದೆ.
ಈ ಬಗ್ಗೆ ಐಎಸ್ ಕೆಪಿ ನಿಯತಕಾಲಿಕ ವಾಯ್ಸ್ ಆಫ್ ಕೋರಸನ್ ನಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಐಸಿಸ್ ವಕ್ತಾರರೊಬ್ಬರುಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿಸಿದ್ದು ತಾವೇ ಎಂಬುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಅಂದಹಾಗೇ ಮಂಗಳೂರಿನಲ್ಲಿ ನಡೆದಿದ್ದಂತ ಕುಕ್ಕಲ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಆಟೋ ಚಾಲಕ ಸೇರಿದಂತೆ ಆರೋಪಿ ಕೂಡ ಗಾಯಗೊಂಡಿದ್ದನು. ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದರು.