Facebook Twitter Instagram
    Sunday, September 6
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ತಂದೆಯಿಂದಲ್ಲೇ ನಟಿ ಖುಷ್ಬೂಗೆ ಲೈಂಗಿಕ ದೌರ್ಜನ್ಯ; ಅನುಭವಿಸಿದ್ದರ ಬಗ್ಗೆ ಬಾಯ್ಬಿಟ್ಟ ನಟಿ ಖುಷ್ಬೂ!
    ಇತ್ತೀಚಿನ ಸುದ್ದಿ

    ತಂದೆಯಿಂದಲ್ಲೇ ನಟಿ ಖುಷ್ಬೂಗೆ ಲೈಂಗಿಕ ದೌರ್ಜನ್ಯ; ಅನುಭವಿಸಿದ್ದರ ಬಗ್ಗೆ ಬಾಯ್ಬಿಟ್ಟ ನಟಿ ಖುಷ್ಬೂ!

    March 6, 2023
    Share

    ಚೆನ್ನೈ : ಇತ್ತೀಚೆಗಷ್ಟೇ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ನೇಮಕಗೊಂಡ ಬಹುಭಾಷಾ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಅವರು ತಾವು ಬಾಲ್ಯದಲ್ಲಿ ಅನುಭವಿಸಿದ ನೋವನ್ನು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೊರಹಾಕಿದ್ದಾರೆ. “ನಾನು ತಂದೆಯಿಂದಲೇ ಲೈಂಗಿಕ ಮತ್ತು ದೈಹಿಕವಾಗಿ ಕಿರುಕುಳಕ್ಕೊಳಗಾಗಿದ್ದೆ. ನನಗೆ ಆಗ 8 ವರ್ಷ ವಯಸ್ಸಾಗಿತ್ತು. ಒಂದು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಳಿಕ ಆ ಗಾಯದ ಗುರುತು ಜೀವನ ಪರ್ಯಂತ ಉಳಿಯುತ್ತದೆ. ಮಗು ಗಂಡೋ ಅಥವಾ ಹೆಣ್ಣೋ ಎಂಬುದಿಲ್ಲಿ ಮುಖ್ಯವಲ್ಲ” ಎಂದು ಹೇಳಿದ್ದಾರೆ.

    “ನನ್ನ ತಾಯಿ ಅತ್ಯಂತ ಅಸಹನೀಯ ದಾಂಪತ್ಯ ಜೀವನ ಅನುಭವಿಸಿದ್ದರು. ಹೆಂಡತಿ ಮತ್ತು ಮಕ್ಕಳಿಗೆ ಹೊಡೆಯುವುದು ಹಾಗು ತನ್ನದೇ ಏಕೈಕ ಮಗಳನ್ನು ಲೈಂಗಿಕವಾಗಿ ಬಳಸಿಕೊಳ್ಳುವುದನ್ನು ನನ್ನ ತಂದೆ ಜನ್ಮಸಿದ್ಧ ಹಕ್ಕು ಎಂದು ಭಾವಿಸಿದ್ದರು. ನನ್ನ ಮೇಲೆ ನಡೆದ ದೌರ್ಜನ್ಯದ ನೋವು ನನ್ನನ್ನೂ ಕಾಡುತ್ತಲೇ ಇತ್ತು. ನನಗೆ 15 ವರ್ಷ ತುಂಬಿದಾಗ ತಂದೆ ನಡೆಸಿದ ದೌರ್ಜನ್ಯ, ನಿಂದನೆಯ ವಿರುದ್ಧ ಮಾತನಾಡುವ ಧೈರ್ಯ ಮಾಡಿದೆ” ಎಂದು ಖುಷ್ಬೂ ವಿವರಿಸಿದರು. “8ನೇ ವಯಸ್ಸಿನಲ್ಲಿದ್ದಾಗಲೇ ನನಗೆ ಸರಿಯಾದ ನಿಲುವು ತೆಗೆದುಕೊಳ್ಳುವ ಪಕ್ವತೆ ಬೆಳೆದಿತ್ತು. ಆದರೆ ಕುಟುಂಬದ ಇತರರು ನನ್ನಿಂದ ನೋವು ಅನುಭವಿಸುತ್ತಾರೆ ಎಂಬ ಭಯ ಕಾಡುತ್ತಿತ್ತು. ಇದು ನನ್ನ ಹಲವು ವರ್ಷಗಳವರೆಗೆ ನನ್ನ ಬಾಯಿ ಮುಚ್ಚಿಸಿತ್ತು” ಎಂದು ಅವರು ತಿಳಿಸಿದರು. ಇದೇ ವೇಳೆ ತಾಯಿಯ ಬಗ್ಗೆ ಮಾತನಾಡುತ್ತಾ, “ತಾಯಿ ನನ್ನ ಮಾತು ನಂಬುತ್ತಿರಲಿಲ್ಲ. ಅವರಂತೂ ಕುಚ್ ಭಿ ಹೋತಾ ಹೈ, ಮೇರಿ ಪತಿ ದೇವತಾ ಹೈ ಎಂಬ ಮನಸ್ಥಿತಿಯಲ್ಲಿದ್ದರು” ಎಂದರು.

    ಖುಷ್ಬೂ ಬಹುಭಾಷಾ ನಟಿಯಾಗಿ ತನ್ನದೇ ವಿಶಿಷ್ಟ ರೀತಿಯ ಛಾಪು ಮೂಡಿಸಿರುವ ಜನಪ್ರಿಯ ನಟಿ. 2010ರಲ್ಲಿ ರಾಜಕೀಯ ರಂಗಕ್ಕೂ ಕಾಲಿಟ್ಟಿದ್ದರು. ಇತ್ತೀಚೆಗೆ ಚಿತ್ರರಂಗಕ್ಕಿಂತ ರಾಜಕೀಯದಲ್ಲೇ ಹೆಚ್ಚು ಸಕ್ರಿಯರಾಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ವಿವಿಧ ವಿಚಾರಗಳ ಬಗ್ಗೆ ಬರೆದು ಪೋಸ್ಟ್​ ಮಾಡುತ್ತಿರುತ್ತಾರೆ. ಇದೀಗ ತಮ್ಮದೇ ಬಾಲ್ಯದ ಕಹಿ ಘಟನೆಯನ್ನು ಹೇಳಿಕೊಂಡಿದ್ದಾರೆ. ಖುಷ್ಬೂ ಸುಂದರ್‌ (52) ಅವರು ಮುಂಬೈ ಮೂಲದ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದರು. ಇವರ ಮೂಲ ಹೆಸರು ನಿಖತ್ ಖಾನ್. ಸಿನಿಮಾ ಕ್ಷೇತ್ರದಲ್ಲಿ ನಟಿ, ನಿರ್ಮಾಪಕಿಯಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ಖುಷ್ಬೂ ಅವರು ಕಾಂಗ್ರೆಸ್, ಡಿಎಂಕೆ ಪಕ್ಷಗಳಲ್ಲಿದ್ದು ಆ ಬಳಿಕ ಬಿಜೆಪಿ ಸೇರಿದ್ದರು. ಇತ್ತೀಚೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ನೇಮಕಗೊಂಡಿದ್ದಾರೆ.

    Post Views: 406

    Related Posts

    ಪುತ್ತೂರು: ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು

    September 6, 2026

    ಪುತ್ತೂರು: ಪೊಲೀಸ್ ಸಿಬ್ಬಂದಿಗೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಮೂವರ ವಿರುದ್ಧ ಪ್ರಕರಣ

    September 6, 2026

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಪುತ್ತೂರು: ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು

    September 6, 2026

    ಪುತ್ತೂರು: ಪೊಲೀಸ್ ಸಿಬ್ಬಂದಿಗೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಮೂವರ ವಿರುದ್ಧ ಪ್ರಕರಣ

    September 6, 2026

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.