ಕೇರಳ: ದೇಶದೆಲ್ಲೆಡೆ ತಾಪಮಾನ ಭಾರೀ ಏರಿಳಿತಗೊಂಡಿದ್ದು ಇದೀಗ ಪ್ರವಾಸಿ ತಾಣಗಳಲ್ಲಿ ಒಂದಾಗ ಕೇರಳದಲ್ಲೂ ತಾಪಮಾನ ದಾಖಲೆ ಮಟ್ಟದಲ್ಲಿ ಹೆಚ್ಚಳವಾಗಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.
ಚಳಿಗಾಲದಲ್ಲಿ ಭಾರೀ ಚಳಿಯಲ್ಲಿದ್ದ ಜನರಿಗೆ ಇದೀಗ ಬೇಸಿಗೆಯ ಬಿಸಿಲಿನ ತಾಪಕ್ಕೆ ದಿಢೀರ್ ಏರಿಕೆ ಗೊಂಡಿದ್ದು,ತಿರುವನಂತಪುರಂ, ಕೊಲ್ಲಂ, ಕೊಟ್ಟಾಯಂ,ಕೋಳಿಕ್ಕೋಡ್, ಕಣ್ಣೂರಿನಲ್ಲಿ 45-54 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು ಎಂದು ವರದಿಯಾಗಿದೆ.ಕರಾವಳಿ ಭಾಗದಲ್ಲಿ ಕೂಡ ಶಾಖದ ಹೆಚ್ಚಾಗಿದ್ದು, ಹವಮಾನ ಇಲಾಖೆ ಈಗಾಗಲೇ ಎಚ್ಚರಿಕೆ ಸಂದೇಶವನ್ನು ನೀಡಿದೆ.
ಬೇಸಿಗೆಯ ಬಿಸಿಲಿಗೆ ಮೈಒಡ್ಡುವುದರಿಂದ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜವಾಗಿದೆ.
ವಿಶೇಷವಾಗಿ ಮಧ್ಯಾಹ್ನ 12.00 ರಿಂದ 3.00 ರವರೆಗೆ ತಾಪಮಾನ ಭಾರೀ ಹೆಚ್ಚಾಗಿರುತ್ತದೆ. ನಗರದಲ್ಲಿ ಓಡಾಡುವ ಜನರು ಬಿರುಬಿಸಿಲಿಗೆ ತತ್ತರಿಸಿ ಹೋಗಿದ್ದಾರೆ. ಈ ನಿಟ್ಟಿನಲ್ಲಿ ಜನರು ಮನೆಯಿಂದ ಆಚೆ ತೆರಳುವಾಹ ಕೆಲವೊಂದು ಎಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯವಾಗಿದೆ .ಯತ್ತೇಚ್ಚವಾಗಿ ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ, ಜತೆಗೆ ಹಣ್ ಹಂಪಲುಗಳನ್ನು ಸೇವಿಸು ಆಯಾಸವನ್ನು ತಪ್ಪಿಸಬಹುದಾಗಿದೆ.