Facebook Twitter Instagram
    Thursday, April 23
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಅಂತಾರಾಷ್ಟ್ರೀಯ»ಕೈದಿಗಳೊಂದಿಗೆ ದೈಹಿಕ ಸಂಬಂಧ: ವೇಲ್ಸ್ ಜೈಲಿನ 18 ಮಹಿಳಾ ಗಾರ್ಡ್‌ಗಳು ವಜಾ
    ಅಂತಾರಾಷ್ಟ್ರೀಯ

    ಕೈದಿಗಳೊಂದಿಗೆ ದೈಹಿಕ ಸಂಬಂಧ: ವೇಲ್ಸ್ ಜೈಲಿನ 18 ಮಹಿಳಾ ಗಾರ್ಡ್‌ಗಳು ವಜಾ

    March 14, 2023
    Share

     ಯುನೈಟೆಡ್ ಕಿಂಗಡಮ್‌ನ ನಾರ್ತ್‌ ವೇಲ್ಸ್‌ನ ಜೈಲಿನಲ್ಲಿ ಪುರುಷ ಕೈದಿಗಳೊಂದಿಗೆ ದೈಹಿಕ ಸಂಬಂಧ ಹಾಗೂ ಅವರಿಗೆ ಸಹಾಯ ಸೌಲಭ್ಯ ನೀಡಲು ನೆರವಾದ 18 ಮಹಿಳಾ ಗಾರ್ಡ್‌ಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ.

    ಈ ಕುರಿತು ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿದೆ ಎಂದು ಯುಕೆ ಡೈಲಿಪೋಸ್ಟ್ ವರದಿ ಮಾಡಿದೆ.

    ನಾರ್ತ್‌ ವೇಲ್ಸ್‌ನ ರೆಕ್ಸ್‌ಹ್ಯಾಮ್‌ನ ಎಚ್‌ಎಂಪಿ ಬರ್ವಿನ್‌ನ ಜೈಲಿನಲ್ಲಿ 18 ಮಹಿಳಾ ಗಾರ್ಡ್‌ಗಳು ಅನೇಕ ಪುರುಷ ಕೈದಿಗಳೊಂದಿಗೆ ದೈಹಿಕ ಸಂಬಂಧ ಹೊಂದಿದ್ದರು. ಅಲ್ಲದೇ ಪರಸ್ಪರ ವಾಟ್ಸಪ್‌ನಲ್ಲಿ ನಗ್ನಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಈ ಮಹಿಳಾ ಗಾರ್ಡ್‌ಗಳು ಕಳೆದ ಆರು ವರ್ಷದಿಂದ ಈ ರೀತಿಯ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರೆಂದು ಆರೋಪಿಸಲಾಗಿದೆ.

    ಜೈಲಾಧಿಕಾರಿಗಳ ಅಸೋಸಿಯೇಷನ್‌ನ ಅಧ್ಯಕ್ಷ ಮಾರ್ಕ್ ಫೇರ್‌ಹರ್ಸ್ಟ್ ಅವರು ‘ಸರಿಯಾದ ಮಹಿಳೆಯರನ್ನು ಗಾರ್ಡ್‌ಗಳಾಗಿ ನೇಮಿಸಿಕೊಳ್ಳಲಾಗಿಲ್ಲ’ ಎಂದು ಆರೋಪಿಸಿದ್ದಾರೆ. ನೇಮಕಾತಿಯಾಗುತ್ತಿರುವ ಸಿಬ್ಬಂದಿಗೆ ಮುಖಾಮುಖಿ ಸಂದರ್ಶನಗಳಿಲ್ಲ. ಎಲ್ಲವನ್ನೂ ಆನ್‌ಲೈನ್‌ನಲ್ಲಿ ಮಾಡಲಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    2019 ರಿಂದ, ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಸುಮಾರು 31 ಮಹಿಳಾ ಜೈಲು ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ಅನುಚಿತ ಸಂಬಂಧಗಳಿಗಾಗಿ ವಜಾಗೊಳಿಸಲಾಗಿದೆ ಎಂದು ಕಾನೂನು ಸಚಿವಾಲಯದ ಅಂಕಿ-ಅಂಶಗಳು ಹೇಳುತ್ತವೆ. ಇದರಲ್ಲಿ ಒಬ್ಬ ಮಹಿಳಾ ಜೈಲು ಅಧಿಕಾರಿ ಕೈದಿಯಿಂದಲೇ ಗರ್ಭಿಣಿಯಾಗಿ ಮಗು ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.

    Post Views: 308

    Related Posts

    DrDevansAcademy.org ನಿಂದ ವೈದ್ಯಕೀಯ ಶಿಕ್ಷಣಕ್ಕೆ ಕ್ರಾಂತಿಕಾರಿ ಕ್ಲೌಡ್ ಆಧಾರಿತ ಸಂವಾದಾತ್ಮಕ ಕಲಿಕಾ ವೇದಿಕೆ ಬಿಡುಗಡೆ

    April 23, 2026

    ವಿಡಿಯೋ ಬೆದರಿಕೆ: ₹1.5 ಕೋಟಿ ಸುಲಿಗೆ ಆರೋಪ, ಇನ್‌ಫ್ಲೂಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ ಪ್ರಕರಣ

    April 23, 2026

    ಚುನಾವಣಾ ಹಂತದಲ್ಲಿ ಉದ್ವಿಗ್ನತೆ: ಮತದಾನ ವೇಳೆ ಕಚ್ಚಾ ಬಾಂಬ್ ದಾಳಿ, ಹಲವರಿಗೆ ಗಾಯ

    April 23, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.