ಬಂಟ್ವಾಳ: ಪರವಾನಿಗೆ ಇಲ್ಲದೆ ಹಿಂಸಾತ್ಮಕವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿ ಆರೋಪಿ ಸಹಿತ ವಾಹನದಲ್ಲಿದ್ದ ದನಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಚಾಲಕ ಪ್ರವೀಣ್ ಪ್ರದೀಪ್ ಪೆರ್ನಾಂಡಿಸ್ ಬಂಧಿತ ಆರೋಪಿಯಾಗಿದ್ದು, ಉಳಿದ ಇಬ್ಬರು ಆರೋಪಿಗಳು ವಾಹನದಿಂದ ಜಿಗಿದು ಪರಾರಿಯಾಗಿದ್ದಾರೆ.
ವಾಹನದಲ್ಲಿ ಹಿಂಸಾತ್ಮಕವಾಗಿ ಕಟ್ಟಿಹಾಕಲಾಗಿದ್ದ ಎರಡು ಕರು, ಪಿಕಪ್ ವಾಹನ ಸೇರಿ ಒಟ್ಟು ಸುಮಾರು ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಉಪನಿರೀಕ್ಷಕನಾದ ಉದಯರವಿ ವೈಎಂ ಅವರು ಫರಂಗಿಪೇಟೆಯಲ್ಲಿ ರೌಂಡ್ಸ್ ನಲ್ಲಿ ಕರ್ತವ್ಯದಲ್ಲಿದ್ದ ವೇಳೆ ಪಿಕ್ ಅಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಲಭಿಸಿದೆ.
ಇನ್ನು ಈ ವೇಳೆ ಅಮ್ಮೆಮ್ಮಾರ್ ರೈಲ್ವೆ ಕ್ರಾಸಿಂಗ್ ಬಳಿ ಪಿಕ್ ಅಪ್ ವಾಹನ ಬಂದಿದ್ದು, ಕೂಡಲೇ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದಾಗ ಸ್ವಲ್ಪ ಮುಂದಕ್ಕೆ ನಿಲ್ಲಿಸಿದ್ದು, ಬಳಿಕ ವಾಹನದ ಹತ್ತಿರ ಹೋದಾಗ ಚಾಲಕ ಪ್ರವೀಣ್ ಪೋಲೀಸರ ಬಲೆಗೆ ಬಿದ್ದಿದ್ದಾನೆ ಉಳಿದಂತೆ ಇಬ್ಬರು ಪ್ರಮುಖ ಆರೋಪಿಗಳಾದ ರೋಯಲ್ ಸಲ್ದಾನ ಮತ್ತು ಸಮೀಮ್ ಅಡ್ಯಾರ್ ಪದವು ಎಂಬವರು ಪರಾರಿಯಾಗಿದ್ದಾರೆ