Facebook Twitter Instagram
    Friday, April 24
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಕ್ರೈಂ ಸ್ಟೋರಿ»ಮಂಗಳೂರು: ಹಣ ದ್ವಿಗುಣ ಮಾಡುತ್ತೇನೆಂದು ನಂಬಿಸಿ 8.78 ಲಕ್ಷ ರೂ. ದೋಖಾ!
    ಕ್ರೈಂ ಸ್ಟೋರಿ

    ಮಂಗಳೂರು: ಹಣ ದ್ವಿಗುಣ ಮಾಡುತ್ತೇನೆಂದು ನಂಬಿಸಿ 8.78 ಲಕ್ಷ ರೂ. ದೋಖಾ!

    April 9, 2023
    Share

    ಮಂಗಳೂರು: ಆನ್‌ಲೈನ್‌ನಲ್ಲಿ ಹಣ ದ್ವಿಗುಣ ಮಾಡಲು ಹೋಗಿ ವಂಚನೆಗೊಳಗಾಗಿ ವ್ಯಕ್ತಿಯೊಬ್ಬರು 8.78 ಲಕ್ಷ ರೂ. ಕಳೆದುಕೊಂಡ ಬಗ್ಗೆ ನಗರದ ಸೆನ್ ಠಾಣೆಗೆ ದೂರು ದಾಖಲಿಸಿದ್ದಾರೆ ದೂರುದಾರ ವ್ಯಕ್ತಿಯ ವಾಟ್ಸ್ಆ್ಯಪ್ ಗೆ ಅಪರಿಚಿತ ವ್ಯಕ್ತಿಯ +447468726354 ದೂರವಾಣಿ ಸಂಖ್ಯೆಯಿಂದ . ಮಾ.13ರಂದು ಪಾರ್ಟ್‌ ಟೈಂ ಉದ್ಯೋಗದ ಸಂದೇಶ ಬಂದಿತ್ತು. ಬಳಿಕ ಟಾಸ್ಕ್ ನೀಡಿದ ಅಪರಿಚಿತ 100 ರೂ. ಪಾವತಿಸಲು ಸೂಚಿಸಿದ್ದ. ಅದರಂತೆ ದೂರುದಾರ ತಮ್ಮ ಫೋನ್ ಪೇಯಿಂದ ಹಣ ಪಾವತಿಸಿದ್ದಾರೆ. ಬಳಿಕ ಅಪರಿಚಿತ ವ್ಯಕ್ತಿಯು ಟೆಲಿಗ್ರಾಂ ಆ್ಯಪ್ ಲಿಂಕ್ ಕಳುಹಿಸಿ ಅದರಲ್ಲಿ ಹಣವನ್ನು ಆನ್‌ಲೈನ್ ಮೂಲಕ ದ್ವಿಗುಣ ಮಾಡಲು 8 ಟಾಸ್ಕ್ ಮಾಡುವಂತೆ ಸೂಚಿಸಿ ವಿವಿಧ ಬ್ಯಾಂಕ್‌ಗಳಿಗೆ ಹಂತ ಹಂತವಾಗಿ 4,25,068 ರೂ. ವರ್ಗಾಯಿಸಿಕೊಂಡಿದ್ದ. ಆ ಬಳಿಕ ಅಪರಿಚಿತ ಬಜಾಜ್ ಲೋನ್‌ನ ಆಫರ್ ನೀಡಿ ಪ್ರೋಸೆಸ್ ಚಾರ್ಜಸ್, ಟಿಡಿಎಸ್, ಜಿಎಸ್‌ಟಿ, ಬ್ಯಾಂಕ್ ಸೆಕ್ಯುರಿಟಿ ಡಿಪಾಸಿಟ್ ಎಂಬುದಾಗಿ ನಂಬಿಸಿ ವಿವಿಧ ಬ್ಯಾಂಕ್ ಖಾತೆಗಳಿಗೆ ಮತ್ತೆ 4,53,638 ರೂ.ವನ್ನು ವರ್ಗಾಯಿಸಿದ್ದಾನೆ. ಈ ಮೂಲಕ ಒಟ್ಟು 8,78,706 ರೂ.ಗಳನ್ನು ಮಾ.13ರಿಂದ ಎ.3ರ ಅವಧಿಯಲ್ಲಿ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ ಎಂದು ದೂರುದಾರ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Post Views: 220

    Related Posts

    ವಿಡಿಯೋ ಬೆದರಿಕೆ: ₹1.5 ಕೋಟಿ ಸುಲಿಗೆ ಆರೋಪ, ಇನ್‌ಫ್ಲೂಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ ಪ್ರಕರಣ

    April 23, 2026

    ಉಡುಪಿ: ರೌಡಿ ಶೀಟರ್ ಮನೆಗೆ ಪೊಲೀಸ್ ದಾಳಿ..!! ನಕಲಿ ನಂಬರ್ ಪ್ಲೇಟ್ ಕಾರುಗಳು ವಶ

    April 21, 2026

    ಲೋಕಾಯುಕ್ತ ಅಧಿಕಾರಿ ಎಂದು ಕರೆ ಮಾಡಿ ಉಡುಪಿ ನಗರಸಭೆ ಅಧಿಕಾರಿಗೆ ವಂಚಿಸಲು ಯತ್ನ : ದೂರು ದಾಖಲು

    January 24, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.