ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದಂತ ಯುವತಿಯೊಬ್ಬಳು, ನ್ಯಾಯಾಲಯದ ಆವರಣದಲ್ಲೇ ವಕೀಲರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವಂತ ಆಘಾತಕಾರಿ ಘಟನೆ ಇಂದು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ನಡೆದಿದೆ.
ಬೆಂಗಳೂರಿನ ಕಾರ್ಪೊರೇಷನ್ ಸರ್ಕಲ್ ಬಳಿಯಿರುವಂತ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹರೀಶ್ ಎಂಬುವರಿಂದ ಕಾಂಚನಾ ಎಂಬುವರು 3 ಲಕ್ಷ ಸಾಲ ಪಡೆದ ಚೌಕ್ ಬೌನ್ಸ್ ಪ್ರಕರಣದ ವಿಚಾರಣೆ ನಡೆಸಲಾಗುತ್ತಿತ್ತು. ಮೊದಲ ಹಂತದ ವಿಚಾರಣೆ ವೇಳೆ ಹರೀಶ್ ಚೆಕ್ ಬೌನ್ಸ್ ಪ್ರಕರಣದ ಪರವಾಗಿ ಕೇಸ್ ಮುಂದುವರೆಸುವುದಾಗಿ ನ್ಯಾಯಾಲಯಕ್ಕೆ ಮನವರಿಕೆಯನ್ನು ವಕೀಲ ಕೃಷ್ಣಾರೆಡ್ಡಿ ಮಾಡಿದ್ದರು. ಈ ಬಳಿಕ ವಿರಾಮವನ್ನು ನ್ಯಾಯಾಲಯ ನೀಡಿತ್ತು.
ಈ ವೇಳೆ ನ್ಯಾಯಾಲಯದ ಆವರಣಕ್ಕೆ ಹೊರಬಂದಿದ್ದಂತ ವಕೀಲ ಕೃಷ್ಣಾರೆಡ್ಡಿಯೊಂದಿಗೆ ಚೌಕ್ ಬೌನ್ಸ್ ಪ್ರಕರಣದ ಆರೋಪಿ ಕಾಂಚಾನ ಜಗಳ ತೆಗೆದಿದ್ದರು. ನೀನು ಕೇಸ್ ಮುಂದುವರೆಸುತ್ತೀಯ ಎಂಬುದಾಗಿ ಗಲಾಟೆ ಮಾಡಿದ್ದಾರೆ. ಅಲ್ಲದೇ ದಿಢೀರ್ ತಾವು ತಂದಿದ್ದಂತ ಚಾಕುವಿನಿಂದ ವಕೀಲ ಕೃಷ್ಣಾರೆಡ್ಡಿಗೆ ಹಲ್ಲೆ ಮಾಡಿದ್ದಾರೆ. ಈ ಬಳಿಕ ಅಲ್ಲಿಂದ ಎಸ್ಕೇಫ್ ಆಗಿರೋದಾಗಿ ತಿಳಿದು ಬಂದಿದೆ.
ಕಾಂಚಾನ ಚಾಕುವಿನಿಂದ ಹಲ್ಲೆಯಿಂದ ಗಾಯಗೊಂಡಿದ್ದಂತ ವಕೀಲ ಕೃಷ್ಣಾರೆಡ್ಡಿ, ಹಲಸೂರು ಗೇಟ್ ಠಾಣೆಗೆ ತೆರಳಿ, ಅವರ ವಿರುದ್ಧ ದೂರು ನೀಡಿದ್ದಾರೆ.
ಅಂದಹಾಗೆ ಕಾಂಚನ, ಹರೀಶ್ ಎಂಬುವರಿಂದ 3 ಲಕ್ಷ ಸಾಲ ಪಡೆದಿದ್ದರು. ಕಳೆದ ಮೂರು ವರ್ಷಗಳಿಂದ ಹಣ ಹಿಂದಿರುಗಿಸುವುದಾಗಿ ಹೇಳಿ ಹೇಳಿ ವಾಪಾಸ್ ಕೊಟ್ಟಿರಲಿಲ್ಲ. ಹೀಗಾಗಿ ಅವರು ನೀಡಿದ್ದಂತ ಚೆಕ್ ಬ್ಯಾಂಕ್ ಗೆ ಹಾಕಿದಾಗ ಬೌನ್ಸ್ ಆಗಿತ್ತು. ಈ ಸಂಬಂಧ ನ್ಯಾಯಾಲಯದ ಮೊರೆಯನ್ನು ಹರೀಶ್ ಹೋಗಿದ್ದರು.